ದೊಡ್ಡಬಳ್ಳಾಪುರ: ಆ.04 ರಿಂದ 06ರವರೆಗೆ ಬಳ್ಳಾರಿಯಲ್ಲಿ ನಡೆದ ಸಿ.ಬಿ.ಎಸ್.ಸಿ. ದಕ್ಷಿಣ ವಲಯ 2 ಯೋಗಾಸನ ಕ್ರೀಡಾ ಕೂಟದಲ್ಲಿ ಎಂ.ಎಸ್.ವಿ. ಪಬ್ಲಿಕ್ ಶಾಲೆಯ (MSV Public School) 7ನೇ ತರಗತಿಯ ವಿದ್ಯಾರ್ಥಿನಿ ಕೆ.ಎಂ.ಹಿತೈಷಿಣಿ ಚಿನ್ನದ ಪದಕವನ್ನು ಗಳಿಸಿ, ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಬಳ್ಳಾರಿಯ ಜಿಂದಾಲ್ ವಿದ್ಯಾಮಂದಿರ ಶಾಲೆಯಲ್ಲಿ ನಡೆದೆ ಕ್ರೀಡಾಕೂಟದಲ್ಲಿ, CBSE ಬೆಂಗಳೂರು, CBSE ಪುಣೆ ಮತ್ತು CBSE ತಿರುವನಂತಪುರಂ ಪ್ರಾದೇಶಿಕ ಕಛೇರಿಗೆ ಒಳಪಡುವ ಶಾಲೆಗಳು ಭಾಗವಹಿಸಿದ್ದು, ತೀವ್ರ ಪೈಪೋಟಿಯೊಂದಿಗೆ ಚಿನ್ನದ ಪದಕ ಪಡೆಯುವಲ್ಲಿ ಹಿತೈಷಿಣಿ ಯಶಸ್ವಿಯಾಗಿದ್ದಾರೆ.
14 ವರ್ಷದೊಳಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ “ಆರ್ಟಿಸ್ಟಿಕ್” ಯೋಗದಲ್ಲಿ ಚಿನ್ನದ ಪದಕ ಪಡೆದಿದ್ದು, ಮಕ್ಕಳ ಸಮಗ್ರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟು ಒಟ್ಟು 5 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಹಿತೈಷಿಣಿ ಸಹ ಆಯ್ಕೆಯಾಗಿರುವುದು ಸಂತಸದ ವಿಷಯ.
ಒಟ್ಟು 2 ವಿಭಾಗದಲ್ಲಿ ಈಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಹಿತೈಶಿಣಿ ಮತ್ತು ಯೋಗ ಶಿಕ್ಷಕಿ ಕವಿತಾರಾಣಿ ಅವರನ್ನು ಎಂಎಸ್‌ವಿ ಶಾಲೆಯ ಸಂಸ್ಥಾಪಕರಾದ ಎ.ಸುಬ್ರಮಣ್ಯ, ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಹಾಗೂ ಶಿಕ್ಷಕರು ಅಭಿನಂದಿಸಿದರು.