Stupid friends..!

ಹರಿತಲೇಖನಿ ದಿನಕ್ಕೊಂದು ಕಥೆ: ಅವಿವೇಕಿ ಗೆಳೆಯರು..!

Harithalekhani: ಹಳ್ಳಿಯೊಂದರಲ್ಲಿ ನಾಲ್ವರು ಸ್ನೇಹಿತರಿದ್ದರು (Friends). ಒಬ್ಬರನ್ನು ಬಿಟ್ಟು ಮತ್ತೊಬ್ಬರಿರುತ್ತಿರಲಿಲ್ಲ. ಈ ನಾಲ್ವರ ಪೈಕಿ ಮೂವರು ತುಂಬಾ ಬುದ್ಧಿವಂತರು. ನಾನಾ ವಿದ್ಯೆಗಳಲ್ಲಿ ನಿಪುಣರು. ಆದರೆ ಅವರಲ್ಲಿ ಸಾಮಾನ್ಯ ಜ್ಞಾನ, ವಿವೇಕ ಇರಲಿಲ್ಲ.

ಮತ್ತೊಬ್ಬ ಸ್ನೇಹಿತ ಅವರಂತಿರಲಿಲ್ಲ. ಅವನ ಹೆಸರು ಸುಬುದ್ದಿ. ಹೆಸರು ಸುಬುದ್ಧಿಯಾದರೂ ಆತನಿಗೆ ಸರಸ್ವತಿ ಮಾತ್ರ ಒಲಿದಿರಲಿಲ್ಲ. ಆದರೆ ಅವನಿಗೆ ಸಾಮಾನ್ಯ ತಿಳಿವಳಿಕೆ, ಲೋಕಜ್ಞಾನ ಉಳಿದವರಿಗಿಂತ ಚೆನ್ನಾಗಿತ್ತು.

ಸ್ನೇಹಿತರ ವಿದ್ಯಾಭ್ಯಾಸ ಮುಗಿಯಿತು. ಮುಂದೆ ಮಾಡುವುದೇನು? ಸುಮ್ಮನಿದ್ದರೆ ಕಲಿತ ವಿದ್ಯೆಗೆ ಬೆಲೆ ಇರುವುದಿಲ್ಲ. ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದರೆ ಹಣ ಸಂಪಾದಿಸಬೇಕು; ಕೆಲಸ ಮಾಡದೇ ಹಣ ದಕ್ಕುವುದಿಲ್ಲ; ಇಲ್ಲೇ ಕೂತರೆ ಕೆಲಸ ಸಿಗುವುದಿಲ್ಲ-ಎಂದು ತಿಳಿದ ‘ವಿದ್ಯಾವಂತ’ರೆನ್ನಿಸಿಕೊಂಡ ಗೆಳೆಯರು, ಹಳ್ಳಿಯಿಂದ ಪಟ್ಟಣಕ್ಕೆ ತೆರಳಲು ನಿರ್ಧರಿಸಿದರು.

ಹಾಗಾದರೆ ವಿದ್ಯೆ ಒಲಿಯದ ಸ್ನೇಹಿತನನ್ನು ಏನು ಮಾಡುವುದು? ಆತ ತಮ್ಮಷ್ಟು ಬುದ್ದಿವಂತನಲ್ಲ. ಪುಸ್ತಕದ ತಿಳಿವಳಿಕೆಯೂ ಇಲ್ಲ. ಹಾಗಂತ ಅವನನ್ನು ಹಳ್ಳಿಯಲ್ಲಿ ಬಿಟ್ಟು ಹೋಗುವಂತೆಯೂ ಇಲ್ಲ. ಸರಿ ಏನಾದರಾಗಲಿ ಅವನನ್ನೂ ತಮ್ಮೊಟ್ಟಿಗೆ ಕರೆದುಕೊಂಡು ಹೋಗುವ ತೀರ್ಮಾನಕ್ಕೆ ಬಂದರು ಆ ಗೆಳೆಯರು.

ಗೆಳೆಯರೆಲ್ಲ ಒಟ್ಟಾಗಿ ಸಾಗಿದರು. ಒಂದು ದಟ್ಟವಾದ ಅರಣ್ಯ ಎದುರಾಯಿತು. ಅರಣ್ಯದೊಳಗೆ ಅವರಿಗೆ ಮೂಳೆಯ ರಾಶಿಯೊಂದು ಕಾಣಿಸಿತು. ‘ಅರೇ! ಇದೇನಿದು, ಬರೀ ಮೂಳೆಯ ರಾಶಿಯಿದೆಯಲ್ಲಾ!’ ಎಂದು ಅಚ್ಚರಿಪಟ್ಟರು.

ನಾವು ಕಲಿತಿರುವೆ ವಿದ್ಯೆ ಸಾರ್ಥಕವಾಗಬೇಕಾದರೆ ಬಿದ್ದಿರುವ ಮೂಳೆಗಳನ್ನೆಲ್ಲಾ ಸಂಗ್ರಹಿಸಿ ಅದು ಯಾವ ಪ್ರಾಣಿಯದೆಂದು ಪತ್ತೆಮಾಡಬೇಕು. ಆವಾಗಲೇ ನಾವು ಕಲಿತಿದ್ದಕ್ಕೂ ಸಾರ್ಥಕ ಎಂದು ಚರ್ಚಿಸಿ ಮೂಳೆಯ ಸಂಗ್ರಹಕ್ಕೆ ಮುಂದಾದರು.

‘ನಾನು ನನ್ನಲ್ಲಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿ ಇದರ ಅಸ್ಥಿಪಂಜರವನ್ನು ಜೋಡಿಸುತ್ತೇನೆ’ ಎಂದ ಮೊದಲನೇ ಸ್ನೇಹಿತ. ಆತ ಮಂತ್ರ ಹೇಳುತ್ತ ಮೂಳೆಗಳನ್ನೆಲ್ಲಾ ಒಟ್ಟುಗೂಡಿಸಿ ಅದಕ್ಕೆ ಅಸ್ಥಿಪಂಜರದ ರೂಪಕೊಟ್ಟ.

ಮತ್ತೊಬ್ಬ ಸ್ನೇಹಿತನೂ ಮಂತ್ರ ಹೇಳುತ್ತ, ಆ ಅಸ್ತಿಪಂಜರವನ್ನು ಸ್ಪರ್ಶಿಸಿದಾಗ ಅದಕ್ಕೆ ರಕ್ತ, ಮಾಂಸಗಳು ಸೇರಿಕೊಂಡು ರೂಪ ಬರತೊಡಗಿತು. ನೋಡು-ನೋಡುತ್ತಗಲೇ ಅದು ಜೀವವಿರದ ಸಿಂಹದಂತೆ ಕಂಡುಬಂದಿತು.

ಈಗ ಮೂರನೇ ಸ್ನೇಹಿತನ ಸರದಿ. ‘ನೋಡುತ್ತೀರಿ, ಅದಕ್ಕೆ ಹೇಗೆ ಜೀವ ಬರುವಂತೆ ಮಾಡುತ್ತೀನಿ’ ಎಂದು ಮಂತ್ರ ಹೇಳಲು ಆತ ಮುಂದಾದಾಗ, ಅಲ್ಲೇ ಇದ್ದ ನಾಲ್ಕನೇ ಸ್ನೇಹಿತ ‘ಏ ಬೇಡ ಕಣೋ, ಇದು ಸಿಂಹದಂತೆ ಕಾಣುತ್ತಿದೆ. ಇದಕ್ಕೇನಾದರೂ ಜೀವ ಬಂದರೆ, ನಾವ್ಯಾರೂ ಉಳಿಯುವುದಿಲ್ಲ. ಇದನ್ನು ಇಲ್ಲಿಗೇ ಬಿಟ್ಟುಬಿಡಿ’ ಎಂದ. ಇದನ್ನು ಕೇಳಲು ತಯಾರಿಸಲಿಲ್ಲ ಆ ಸ್ನೇಹಿತ ‘ಏ ಸುಮ್ಮನಿರೋ ಪೆದ್ದ. ನಿನಗೇನು ಗೊತ್ತು, ನಿನಗೇನಾದರೂ ವಿಜ್ಞಾನ ಗೊತ್ತಿದೆಯಾ?’ ಎಂದು ಜೋರು ಮಾಡಿ ಸುಮ್ಮನಾಗಿಸಿದ.

‘ಸರಿ ನಿಮ್ಮಿಷ್ಟ’ ಎನ್ನುತ್ತಾ ನಾಲ್ಕನೆಯವನು ಸುಮ್ಮನಾದ. ಅದರೆ, ಮೂರನೆಯವನು ಮಂತ್ರ ಉಚ್ಚರಿಸುವ ಮೊದಲೇ ಪಕ್ಕದಲ್ಲಿ ಇದ್ದ ಮರವೇರಿ ಸುರಕ್ಷಿತವಾಗಿ ಕುಳಿತುಕೊಂಡುಬಿಟ್ಟ. ಇದನ್ನು ಕಾಣುತ್ತಲೇ ಗಹಗಹಿಸಿ ನಗುತ್ತಾ ಆತನನ್ನು ಉಳಿದ ಮೂವರೂ ಅಪಹಾಸ್ಯ ಮಾಡಿದರು.

ಮೂರನೆಯವನು ಪಟಪಟನೆ ಮಂತ್ರ ಹೇಳುತ್ತಲೇ ಸಿಂಹಕ್ಕೆ ಜೀವ ಬಂತು. ತಕ್ಷಣ ಸಿಂಹವು ಆ ಮೂವರ ಮೇಲೂ ಆಕ್ರಮಣ ಮಾಡಿತು. ಅವರೆಲ್ಲ ಸಿಂಹಕ್ಕೆ ಬಲಿಯಾದರು.

ಈ ಎಲ್ಲವನ್ನೂ ಮರದ ಮೇಲಿಂದ ವೀಕ್ಷಿಸುತ್ತಿದ್ದ ಸುಬದ್ದಿಗೆ ದುಃಖವಾಯಿತು. ಎಷ್ಟು ಹೇಳಿದರೂ ಅನ್ಯಾಯವಾಗಿ ತನ್ನ ಸ್ನೇಹಿತರು ಪ್ರಾಣ ಕಳೆದುಕೊಂಡರಲ್ಲಾ ಎಂದು ಮರುಕಪಟ್ಟ.

ಸಿಂಹ ಹೊರಟುಹೋದ ಸ್ವಲ್ಪ ಹೊತ್ತಿನ ನಂತರ ಮರದ ಮೇಲಿಂದ ಇಳಿದು ತನ್ನ ಹಳ್ಳಿಗೆ ಹಿಂತಿರುಗಿದ.

ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ (News channel) ಧರ್ಮಸ್ಥಳ ಪ್ರಕರಣ ಸಂಬಂಧಿಸಿ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ

[ccc_my_favorite_select_button post_id="119114"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!