Harithalekhani; ಒಂದು ಆಲದ ಮರದ ಕೆಳಗೆ ಭೀಮ ಮಲಗಿದ್ದನು. ಅವನು ಮರದಲ್ಲಿ ಬಿಟ್ಟಿರುವ ಆಲದ ಹಣ್ಣುಗಳನ್ನು (Banyan fruit) ನೋಡುತ್ತಾ ನಕ್ಕು, ‘ದೇವರು ಎಂಥ ದಡ್ಡನು! ಇಷ್ಟೊಂದು ದೊಡ್ಡ ಆಲದ ಮರದಲ್ಲಿ ಇಷ್ಟು ಸಣ್ಣ ಹಣ್ಣುಗಳನ್ನು ಇಟ್ಟಿದ್ದಾನೆ. ಆದರೆ ಸಣ್ಣ ಬಳ್ಳಿಯಲ್ಲಿ ದೊಡ್ಡ ಕುಂಬಳಕಾಯಿ (Pumpkin) ಇಟ್ಟಿದ್ದಾನೆ’ ಎಂದು ಹೇಳಿಕೊಂಡನು.
ಹಾಗೆ ಹೇಳಿಕೊಳ್ಳುತ್ತಿರುವಾಗ ಜೋರಾಗಿ ಗಾಳಿ ಬೀಸಿತು. ಬೀಸಿದ ಗಾಳಿಯ ರಭಸಕ್ಕೆ ಮರದಲ್ಲಿದ್ದ ಹಣ್ಣುಗಳು ಕೆಳಗೆ ಬಿದ್ದವು. ಅದರಲ್ಲಿ ಕೆಲವು ಹಣ್ಣು ಭೀಮನ ತಲೆಯ ಮೇಲೆ ಬಿದ್ದವು. ಒಮ್ಮೆಲೇ ಭೀಮನಿಗೆ ದೇವರ ಸೃಷ್ಟಿಯ ಚಮತ್ಕಾರ ಅರಿವಾಯಿತು!
ಆಗ ಅವನು ‘ಒಂದು ವೇಳೆ ಕುಂಬಳಕಾಯಿಗಿಂತ ದೊಡ್ಡ ಹಣ್ಣು ನನ್ನ ಮೇಲೆ ಬಿದ್ದಿದ್ದರೆ ನನ್ನ ಪ್ರಾಣವೇ ಹೋಗುತ್ತಿತ್ತು. ಆದ್ದರಿಂದಲೇ ದೇವರು ದೊಡ್ಡ ಮರದಲ್ಲಿ ಸಣ್ಣಕಾಯಿ ಇಟ್ಟಿರುವನು’ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡ.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.