ದೊಡ್ಡಬಳ್ಳಾಪುರ: ನಗರದ ಮಾರುಕಟ್ಟೆಯ ನಿವಾಸಿಯಾದ ಪ್ರಸಿದ್ಧ ಕಂಜಿರಾ ವಾದಕ ಕಲ್ಲುಬಾವಿ ಹೆಚ್.ಆರ್. ಚಂದ್ರಕಾಂತ್ (ಚಂದ್ರ) (H.R. Chandrakant) ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ. ಅವರಿಗೆ 72 ವಯಸ್ಸಾಗಿತ್ತು.
ನಗರದ ವಿವಿಧ ದೇವಾಲಯಗಳಲ್ಲಿ ನಡೆಸಲಾಗುತ್ತಿದ್ದ ಭಜನೆಗಳಲ್ಲಿ ಕಂಜಾರಿಯನ್ನು ನುಡಿಸಿ, ಅನೇಕರಿಗೆ ಕಲಿಸಿದ್ದಾರೆ.
ಮೃತರು ಪುತ್ರ ಹಾಗೂ ಮಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕ್ರಿಯೆ ಮುಕ್ತಿದಾಮದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲೆಗಳು ತಿಳಿಸಿವೆ.