ಚೆನೈ: ಇಂದು ನಡೆದ 46ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬ್ರೈನೋಬ್ರೈನ್ ದೊಡ್ಡಬಳ್ಳಾಪುರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಅತಿ ಹೆಚ್ಚು ಪದಕವನ್ನು ಪಡೆಯುವ ಮೂಲಕ ದೇಶಾದ್ಯಂತ ದೊಡ್ಡಬಳ್ಳಾಪುರ ತಾಲೂಕಿನ ಕೀರ್ತಿ ಪಸರಿಸಿದ್ದಾರೆ.
ಎರಡು ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಸಂಸ್ಥೆ ಮುಖ್ಯ ವ್ಯವಸ್ಥಾಪಕ ಆನಂದ್ ಸುಬ್ರಮಣ್ಯಂ ಅವರು ಉದ್ಘಾಟಿಸಿದರು.
ತಮಿಳುನಾಡಿನ ಚೆನೈ ಟ್ರೇಡ್ ಸೆಂಟರ್ ನಲ್ಲಿ ಆಯೋಜಿಸಿದ್ದ ಬ್ರೈನೋಬ್ರೈನ್ ಫೆಸ್ಟ್ 2025, 46ನೇ ರಾಷ್ಟ್ರೀಯ ಸ್ಪರ್ಧೆಯಲ್ಲಿ, ಕರ್ನಾಟಕ, ದೆಹಲಿ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂರು ನಿಮಿಷಗಳಲ್ಲಿ 60 ವಿವಿಧ ರೀತಿ ಮನೋ ಗಣಿತ ಲೆಕ್ಕಗಳನ್ನು ಮಾಡುವ ಮೂಲಕ ದೊಡ್ಡಬಳ್ಳಾಪುರ ಬ್ರೈನೋಬ್ರೈನ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉತ್ತಮ ಸಾಧನೆ ದಾಖಲಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ಅಬಾಕಸ್ ಕೇಂದ್ರದ ತರಬೇತುದಾರರಾದ ವಿ.ಎ.ಪುಷ್ಪ (V.A. Pushpa) ನೇತೃತ್ವದಲ್ಲಿ 30 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿವಿಧ ರೀತಿಯ ಲೆಕ್ಕಗಳನ್ನು ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 16 ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, 10 ವಿದ್ಯಾರ್ಥಿಗಳು ಚಿನ್ನ, 04 ವಿದ್ಯಾರ್ಥಿಗಳು ಬೆಳ್ಳಿ ಪದಕದವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಾಂಪಿಯನ್ಸ್: ರಜತ್.ಪಿ., ಗಗನ್ ಯಾದವ್,ಕೆ., ಯಶಸ್.ಎಸ್., ವೈಭವಿ.ಬಿ., ದಿಗಂತ್.ಎಂ., ವಿಪುಲ್.ವಿ., ನಿರೀಕ್ಷಾ.ಎಂ., ಉಮ್ಮೆ ಆಯ್ರಾ, ಆರುಶ್.ಜಿ.ಡಿ., ನಿಖಿಲ್.ವಿ.ಎಸ್., ಅಬ್ದುಲ್ ಮನನ್, ಶಿಶುಲ್.ಎಂ., ಯಶಸ್ ಗೌಡ.ಆರ್.ಎಂ., ಕ್ರಿಶ್ ಪಿ ಗೌಡ, ಆರವ್.ಜಿ.ಡಿ., ವಿರಾಂಚ್.ಜಿ.ಎಂ.

ಚಿನ್ನದ ಪದಕ: ಪೂರ್ಣಿತಾ.ಪಿ., ವಿಶ್ವಾಸ್ ಗೌಡ.ವಿ., ನೇಹಾ ಮಹಿನ್ ಸನಾ, ಭುವನ್.ಇ., ದೀಪಕ್ ಐ.ಪಿ., ಧಾನ್ವಿಕ್ ಅಭಿರಾಮ್, ಡಿಂಪಲ್.ಜಿ.ಆರ್., ಪರಿಕ್ಷಿತ್.ಪಿ.ಎಂ., ಪೂರ್ವಿಕ್ ಗೌಡ.ವಿ., ದೀಪಕ್.ಎಂ.ಹೆಚ್.

ಬೆಳ್ಳಿ ಪದಕ: ಅಬ್ದುಲ್ ಕಾಲ್ಹಿಕ್, ಚಿನ್ಮಯ್.ಜಿ.ಎನ್., ಪೂರ್ವಿತ್.ಎಸ್., ಸೇಜಲ್.ಕೆ.
ವಿಜೇತರಿಗೆ ಬ್ರೈನೋ ಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಳ್ ಸುಬ್ರಹ್ಮಣ್ಯಂ ಟ್ರೋಫಿ, ಪದಕಗಳನ್ನು ವಿತರಿಸಿದರು.

ಇದೇ ವೇಳೆ ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರಕ್ಕೆ ಸತತ ನಾಲ್ಕನೇ ಬಾರಿಗೆ ಬೆಸ್ಟ್ ಫ್ಯಾಕಲ್ಟಿ ಅವಾರ್ಡ್, ಬೆಸ್ಟ್ ಫ್ರಾಂಚೈಸಿ ಅವಾರ್ಡ್ ನೀಡಲಾಗಿದ್ದು, ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ವಿ.ಎ.ಪುಷ್ಪ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬ್ರೈನೋ ಬ್ರೈನ್ ಸಂಸ್ಥೆಯ ತಾಂತ್ರಿಕ ವ್ಯವಸ್ಥಾಪಕ ಅರುಳ್ ಸುಬ್ರಮಣ್ಯಂ, ಪ್ರಾದೇಶಿಕ ವ್ಯವಸ್ಥಾಪಕ ನೀಲ್ ಕಮಲ್ ಸೇರಿದಂತೆ ವಿವಿಧ ರಾಜ್ಯಗಳ ತರಬೇತಿ ಕೇಂದ್ರದ ಮುಖ್ಯಸ್ಥರು ಭಾಗವಹಿಸಿದ್ದರು.