ಹೊಸಕೋಟೆ: ಶಾಸಕ ಹಾಗೂ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ (Sharath Bachegowda) ಡೆನ್ಮಾರ್ಕ್ಗೆ (Denmark) ಭೇಟಿ ನೀಡಿದ್ದಾರೆ.
ಡಿಜಿಟಲ್ ಮೂಲ ಸೌರ‍್ಯಗಳು ಹಾಗೂ ಆರೋಗ್ಯ ವಿಷಯಗಳ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆಸಿದ್ದಾರೆ.
ಹೆಲ್ತ್ಕೇರ್ ಡೆನ್ಮಾರ್ಕ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಶರತ್ ಬಚ್ಚೇಗೌಡ ಸಭೆ ನಡೆಸಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಲ್ಲಿನ ಆರೋಗ್ಯ ಸೇವೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಕುರಿತು ಚರ್ಚಿಸಿದ್ದಾರೆ.
ಇದು ಜಾಗತಿಕ ಪಾಲುದಾರರಿಗೆ ಡೆನ್ಮಾರ್ಕ್ನ ಅತ್ಯಾಧುನಿಕ ಹಾಗೂ ರೋಗಿ-ಕೇಂದ್ರಿತ ಆರೋಗ್ಯ ರಕ್ಷಣಾ ವ್ಯವಸ್ಥೆ ಹಾಗೂ ಬಲಿಷ್ಠವಾದ ಡಿಜಿಟಲ್ ಮೂಲಸೌಕರ್ಯಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗಲಿದೆ.