ದಕ್ಷಿಣ ಕನ್ನಡ: ಧರ್ಮಸ್ಥಳದ ದೂರುದಾರನನ್ನು ನೋಡಿದ್ರೆ ಅವನ ಹಿಂದೆ ಒಬ್ಬರು ಇಬ್ಬರು ಇಲ್ಲ. ದೊಡ್ಡ ಸಂಸ್ಥೆಗಳೇ ಇದೆ. ಕೇಂದ್ರದ ತನಿಖಾ ಸಂಸ್ಥೆಯಿಂದಲೇ ಈ ಬಗ್ಗೆ ತನಿಖೆ ಆಗಬೇಕು. ಇದು ಸಂಪೂರ್ಣ ಜೆಡಿಎಸ್ (JDS) ಪಕ್ಷದ ಆಗ್ರಹವಿದೆ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಶ್ರೀ ಕ್ಷೇತ್ರದ ವಿರುದ್ಧ ಯಾವುದೇ ದುಷ್ಟ ಶಕ್ತಿ ಮಂಜುನಾಥ ಸ್ವಾಮಿಯ ಮುಂದೆ ಉಳಿಯಲು ಸಾಧ್ಯವಿಲ್ಲ. ಹಲವು ದಿನದಿಂದ ಪುಣ್ಯ ಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಭಕ್ತರಾಗಿ ಇನ್ನು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳಲು ಆಗಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತ ಪಡಿಸಿದರು.
ಧರ್ಮಸ್ಥಳ ಸತ್ಯಯಾತ್ರೆ ರಾಜಕೀಯ ಲಾಭ, ಲೆಕ್ಕಾಚಾರದ ವೇದಿಕೆ ಅಲ್ಲ. ಮಂಜುನಾಥ, ಅಣ್ಣಪ್ಪ ಸ್ವಾಮಿಯ ಭಕ್ತರು ದೇಶ ವ್ಯಾಪಿ, ವಿದೇಶದಿಂದ ಕೋಟ್ಯಾಂತರ ಸಂಖ್ಯೆಯಲ್ಲಿದ್ದಾರೆ. ನಾವು ಭಕ್ತರಾಗಿ ಬಂದು ಇಂದು ಶರಣಾಗಿದ್ದೆವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯ ವ್ಯಾಪ್ತಿಯಿಂದ ಬಂದು ಇಲ್ಲಿ ಸೇರಿ ಆಶೀರ್ವಾದ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಅಪಪ್ರಚಾರ ನೋಡಿ ಭಕ್ತರಿಗೆ ಸಾಕಷ್ಟು ನೋವಾಗಿದೆ ಖಾವಂದರು, ಕುಟುಂಬದ ಸದಸ್ಯರು ಎಷ್ಟೇ ನೋವಾದರೂ ತಾಳ್ಮೆ ಕಳೆದುಕೊಳ್ಳದೇ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರ ಹಲವರಿಗೆ ದಾರಿ ದೀಪವಾಗಿದೆ. ಖಾವಂದರ ಸಮಾಜಮುಖಿ ಹೋರಾಟ ಸೂರ್ಯ ಚಂದ್ರ ಇರೋವರೆಗೆ ಇರುತ್ತದೆ. ಹಲವು ದಿನದಿಂದ ಅಪಪ್ರಚಾರ, ಷಡ್ಯಂತ್ರ, ಹುನ್ನಾರ ಆಗ್ತಿದೆ ವಾಗ್ದಾಳಿ ನಡೆಸಿದರು
ವಿಧಾನಸೌಧದ ಅಧಿವೇಶನದಲ್ಲಿ ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರವಿದೆ ಎಂಬ ಪದ ಬಳಕೆ ಆಗಿದೆ. ವ್ಯವಸ್ಥಿತವಾಗಿ ವಿದೇಶದ ಹಣ ಹೂಡಿಕೆ ಮಾಡಿ ಕ್ಷೇತ್ರದ ಬಗ್ಗೆ ಷಡ್ಯಂತ್ರ ನಡೆದಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ಅನಾಮಧೇಯ ವ್ಯಕ್ತಿ ಬುರುಡೆ ತಂದ ಅಂತ ಸರ್ಕಾರ ತುರಾತುರಿಯಲ್ಲಿ ಎಸ್ ಐ ಟಿ ಮಾಡಿದ್ದಾರೆ. ಎಸ್ ಐ ಟಿ ಯಿಂದ ಪ್ರಯೋಜನ ಏನು ಅಗಿಲ್ಲ. ನಾವು ನೈತಿಕ ಬೆಂಬಲ ಕೊಟ್ಟು ಧರ್ಮಸ್ಥಳದ ಜೊತೆ ನಿಲ್ಲುತ್ತೆವೆ. ದೇವೇಗೌಡರು, ಕುಮಾರಸ್ವಾಮಿ ಅವರ ಇಡೀ ಕುಟುಂಬ ಶಿವನ ಭಕ್ತರಾಗಿದ್ದೆವೆ. ನಿಮ್ಮೊಂದಿಗೆ ಇರೋದಾಗಿ ಅವರು ಹೇಳಿದ್ದಾರೆ ಎಂದು ಧೈರ್ಯ ತುಂಬಿದರು.
ಮಧ್ಯಾಹ್ನದ ವೇಳೆಗೆ ಧರ್ಮಸ್ಥಳ ತಲುಪಿದ ಜೆಡಿಎಸ್ ನಿಯೋಗಕ್ಕೆ, ಅದ್ಧೂರಿಯಾಗಿ ಸ್ವಾಗತ ಕೋರಲಾಯ್ತು. ಮೊದಲು ಅನ್ನಪ್ರಸಾದ ಸ್ವೀಕರಿಸಿದ ನಂತರ ಸಭೆ ನಡೆಸಿ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ, ನಿಖಿಲ್ ಕುಮಾರಸ್ವಾಮಿ ಆಶೀರ್ವಾದ ಪಡೆದಿದ್ದಾರೆ.
ಇನ್ನು, ಧರ್ಮಸ್ಥಳದಲ್ಲೇ ಜೆಡಿಎಸ್ ಕಾರ್ಯಕ್ರಮ ನಡೆದಿದ್ದು, ವೀರೇಂದ್ರ ಹೆಗ್ಗಡೆಯವರು ಕೂಡ ಭಾಗಿಯಾಗಿದ್ರು. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದಾರೆ. ರ‍್ಯಾಲಿಯಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಭಾಗಿಯಾಗಿದ್ದರು.
ಇನ್ನು ಮಂಜುನಾಥ ಸ್ವಾಮಿಯ ದರ್ಶನದ ಬಳಿಕ ಮಾತನಾಡಿ ಅವರು, ನಾನು ಬಾಲ್ಯದಿಂದಲೂ ಮಂಜುನಾಥಸ್ವಾಮಿ ಪರಮಭಕ್ತ. ಪ್ರತಿ ವರ್ಷ ನಾನು ಚಾಚುತಪ್ಪದೇ ಧರ್ಮಸ್ಥಳಕ್ಕೆ ಬರುತ್ತೇನೆ, ದೇವರ ದರ್ಶನ ಪಡೆಯುತ್ತೇನೆ. ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಸಂಚು, ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು
ದೊಡ್ಡ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ಆರೋಪದ ಬಗ್ಗೆ ಅನುಮಾನ, ಶಂಕೆಗಳು ವ್ಯಕ್ತವಾಗಿವೆ. ಇದುವರೆಗೂ ಎಳ್ಳಷ್ಟು ಸತ್ಯಾಸತ್ಯತೆ ಹೊರಗೆ ಬಂದಿಲ್ಲ. ಧರ್ಮಸ್ಥಳದ ವಿರುದ್ಧ ಸಮಾಜಘಾತುಕ ಶಕ್ತಿಗಳು ಹುನ್ನಾರ ಮಾಡುತ್ತಿವೆ. ಇದೆಲ್ಲದರ ಬಗ್ಗೆ ಸಮಾಜದ ಮುಂದೆ ತನಿಖೆ ಮೂಲಕ ಸತ್ಯಾಂಶ ಹೊರಗೆ ತರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮಲ್ಲೆರ ಮೇಲೆ ಕೆಲವು ಜವಾಬ್ದಾರಿ ಇದೆ. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಅದು ಎಲ್ಲರ ಜವಾಬ್ದಾರಿ. ಮಂಜುನಾಥಸ್ವಾಮಿ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಬಹಳಷ್ಟು ಭಕ್ತಾಧಿಗಳು ಯಾತ್ರೆಯಲ್ಲಿ ಸ್ವಇಚ್ಛೆಯಿಂದ ಬರುತ್ತೇವೆ ಎಂದು ಹಳ್ಳಿಹಳ್ಳಿಗಳಿಂದ ಬಂದಿದ್ದಾರೆ. ಸತ್ಯದ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು.ಇದು ತಾರ್ತಿಕ ಅಂತ್ಯಕ್ಕೆ ತಲುಪಬೇಕು. ಯೂಟ್ಯೂಬರ್‌ಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಇದರ ಹಿಂದೆ ದೊಡ್ಡಮಟ್ಟದ ಆರ್ಗನೈಸೇಷನ್ ಇದೆ. ಇದಕ್ಕೆ ಇಂಟರ್‌ನ್ಯಾಷನಲ್ ಫೈನಾನ್ಸ್ ಆಗಿದೆ. ಆದ್ದರಿಂದ ಎನ್‌ಎಐ ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ನಾನು ಚಿಕ್ಕವಯಸ್ಸಿನಿಂದಲೂ ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಿದ್ದೇನೆ. ಈಗ ಧರ್ಮ ಉಳಿಯಬೇಕು ಎಂದು ಯಾತ್ರೆ ಮಾಡಿದ್ದೇವೆ. ರಾಜಕೀಯಕ್ಕಾಗಿ ನಾವು ಯಾತ್ರೆ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು, ವಿಧಾನಪರಿಷತ್ ಸದಸ್ಯ ಬೋಜೆಗೌಡ, ರಾಜ್ಯ ಕೋರ ಕಮೀಟಿ ಸದಸ್ಯ ವೆಂಕಟರಾವ್ ನಾಡಗೌಡ, ಮಾಜಿ ಸಚಿವರಾದ ಎ. ಮಂಜು, ಶಾಸಕರಾದ ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಕರೇಯಮ್ಮ ನಾಯಕ್, ಶಾರದಾ ಪೂರ್ಯನಾಯ್ಕ, ಮಂಜುನಾಥ, ಬಾಲಕೃಷ್ಣ , ಕೆ. ನೇಮಿರಾಜ ನಾಯ್ಕ್, ಮಾಜಿ ಶಾಸಕರಾದ ಸುರೇಶ್ ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಢ, ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ವಕ್ತಾರ ಕುಂಟನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.