ದೆಹಲಿ: ವೋಟ್ ಚೋರಿ (Vote Chori) ಕುರಿತಂತೆ ಕಾಂಗ್ರೆಸ್ ಆರೋಪ ತೀವ್ರಗೊಂಡಿರುವ ನಡುವೆಯೇ ಎರಡು ಮತದಾರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರಿಗೆ ಚುನಾವಣಾ ಆಯೋಗವು (Election Commission) ನೋಟಿಸ್ ನೀಡುವ ಮೂಲಕ ತನ್ನ ಬಲೆಯೊಳಗೆ ತಾನೆ ಸಿಲುಕಿದೆ.
ನೋಟಿಸ್ ಅನ್ವಯ ಪವನ್ ಖೇರಾ ಅವರನ್ನು ಸೆಪ್ಟೆಂಬರ್ 8ರಂದು ಬೆಳಗ್ಗೆ 11 1 ಗಂಟೆಗೆ ಆಯೋ ಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಬಿಜೆಪಿ ನಾಯಕ ಅಮಿತ್ ಮಾಳವಿಯಾ ದೆಹಲಿಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಖೇರಾ ಎರಡು ಸಕ್ರಿಯ ಮತದಾರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಚುನಾವಣೆ ಆಯೋಗ ಈ ಸಮನ್ಸ್ ಜಾರಿಯಾಗಿದೆ.
ದೆಹಲಿ ಜಿಲ್ಲಾ ಚುನಾವಣಾ ಕಚೇರಿಯ ಸೂಚನೆಯಲ್ಲಿ, ‘ನೀವು ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳ ಚುನಾ ವಣಾ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿ ಕೊಂಡಿರುವುದು ಗಮನಕ್ಕೆ ಬಂದಿದೆ. ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಇರುವುದು ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯಡಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆಂದು ಕಾರಣ ನೀಡಬೇಕು. ನಿಮ್ಮ ಉತ್ತರವು ಸೆಪ್ಟೆಂಬರ್ 8ರ ಬೆಳಗ್ಗೆ 11 ಗಂಟೆಯೊಳಗೆ ಈ ಕಚೇರಿಗೆ ತಲುಪಬೇಕು’ ಎಂದು ಸೂಚನೆಯಲ್ಲಿ ಹೇಳಲಾಗಿದೆ.
ಈ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯಿಸಿರುವ ಪವನ್ ಖೇರಾ, ‘ಇದು ಕಾಂಗ್ರೆಸ್ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಎತ್ತಿರುವ ಪ್ರಶ್ನೆಗಳ ಪರಿಣಾಮ’ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಬಹಿರಂಗಪಡಿಸಿದ ಕರ್ನಾಟಕದ ಮಹಾದೇವಪುರ ಕ್ಷೇತ್ರದ 1,00,000 ನಕಲಿ ಮತದಾರರಿಗೆ ಚುನಾವಣೆ ಆಯೋಗ ಒಂದೇ ಒಂದು ನೋಟಿಸ್ ನೀಡಲಿಲ್ಲ ಏಕೆ?
ಸರ್ಕಾರದ ಪರ ಚುನಾವಣೆ ಆಯೋಗ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇದು ಸಾಕ್ಷಿ. ದೆಹಲಿ ಕ್ಷೇತ್ರದಲ್ಲಿ ನನ್ನ ಹೆಸರಿನಲ್ಲಿ ಯಾರು ಮತ ಚಲಾಯಿಸುತ್ತಿದ್ದಾರೆ ಎಂಬುದರ ದೃಶ್ಯಾವಳಿಯನ್ನು ತೆಗೆಯಬೇಕು.
ನನ್ನ ಹೆಸರನ್ನು ಪಟ್ಟಿಯಿಂದ ತೆಗೆಯಲು ಎಲ್ಲ ಕಾನೂನು ಕ್ರಮಗಳನ್ನು ಅನುಸರಿಸಿದ್ದರೂ ಆಯೋಗ ಏಕೆ ಇನ್ನೂ ತೆಗೆದಿಲ್ಲ? ಈ ಬೆದರಿಕೆ ನಾವು ಅಂಜುವುದಿಲ್ಲ, ಬಿಹಾರ SIR ಮತ್ತು ಇತರ ಚುನಾವಣಾ ಪ್ರಕ್ರಿಯೆಗಳಲ್ಲಿ ಚುನಾವಣೆ ಆಯೋಗದ ತಪ್ಪುಗಳನ್ನು ಬಹಿರಂಗಪಡಿಸುವುದನ್ನು ನಾವು ನಿಲ್ಲಿಸುವುದಿಲ್ಲ ಎಂದು ಖೇರಾ ಹೇಳಿದ್ದಾರೆ.