ಪಟನಾ: ಪ್ರಧಾನಿ ನರೇಂದ್ರ ಮೋದಿ (Narendra Modi) ತಾಯಿ ಹೀರಾಬೆನ್‌ರನ್ನು ಕಾಂಗ್ರೆಸ್ ಮತ್ತು ಆರ್‌ಜೆಡಿಗಳು ನಿಂದಿಸಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಬಿಹಾರ್ ಬಂದ್‌ಗೆ (Bihar Bandh) ಎನ್ ಡಿಎ (NDA) ಕರೆ ನೀಡಿತ್ತು.
ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ 5 ಗಂಟೆಗಳ ಬಂದ್ ನಡೆಸಲಾಗಿದೆ. ಬಂದ್ ವೇಳೆ ಅಗತ್ಯ ಸೇವೆಗಳಾದ ಆಸ್ಪತ್ರೆ, ರೈಲ್ವೆ ಕಾರ್ಯಾಚರಣೆಗಳಿಗೆ ತಡೆಯಿರಲಿಲ್ಲ.
ಕಳೆದ ವಾರ ಬಿಹಾರದ ದರ್ಭಾಂಗದಲ್ಲಿ ನಡೆದ ಮತದಾರರ ಅಧಿಕಾರ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೋದಿ ಅವರ ತಾಯಿಯನ್ನು ನಿಂದಿಸಿದ್ದರು ಎಂದು ಆರೋಪಿಸ ಈ ಬಂದ್ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಆರೋಪ ನಿರಾಕರಿಸಿದೆ.
ಶಿಕ್ಷಕಿಯ ಮೇಲೆ ಹಲ್ಲೆ
ಬಂದ್ ವೇಳೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯ ಮೇಲೆ ಪ್ರತಿಭಟನೆ ನಿರತ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
Bihar: In Jehanabad, a school teacher opposed the bandh as she was getting late for school.
— The News Drill (@thenewsdrill) September 4, 2025
BJP women workers allegedly manhandled her.
Police intervened & rescued the teacher from the chaos. pic.twitter.com/UQfwukINHM
ಜೆಹಾನಾಬಾದ್‌ನಲ್ಲಿ, ಶಾಲೆಗೆ ತಡವಾಗಿ ಬರುತ್ತಿದ್ದರಿಂದ ಶಾಲಾ ಶಿಕ್ಷಕಿಯೊಬ್ಬರು ಬಂದ್‌ಗೆ ವಿರೋಧ ವ್ಯಕ್ತಪಡಿಸಿದರು.
ಬಿಜೆಪಿ ಮಹಿಳಾ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಶಿಕ್ಷಕಿಯನ್ನು ಗದ್ದಲದಿಂದ ರಕ್ಷಿಸಿದರು. ಹಲ್ಲೆಗೊಳಗಾದ ಶಿಕ್ಷಕಿ ಗರ್ಭಿಣಿ ಎನ್ನಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
RAF ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ
ಮುಜಫರ್ಪುರದಲ್ಲಿ ನಡೆದ ಬಿಹಾರ ಬಂದ್ ಸಮಯದಲ್ಲಿ, ರಸ್ತೆ ತಡೆ ನಡೆಸುವ ಕುರಿತು ಆರ್‌ಎಎಫ್ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ.
BJP’s Bihar bandh turned into a disaster.
— Surbhi (@SurrbhiM) September 4, 2025
In Muzaffarpur, during the Bihar bandh, a heated argument broke out between RAF personnel and BJP workers over blocking the road.
pic.twitter.com/IyMSnYGp6p
ಬಂದ್ ವೇಳೆ ರಸ್ತೆಗೆ ಬಂದಿದಕ್ಕೆ ಹಲ್ಲೆ ಯತ್ನ
ಇನ್ನೂ ಬಿಹಾರ ಬಂದ್ ವಿರೋಧಿಸಿದವ ಮೇಲೆ, ಬಂದ್ ನಡುವ ಕೆಲಸ ಕಾರ್ಯಗಳಿಗೆ ಬಂದ ಜನಸಾಮಾನ್ಯರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಲು ಯತ್ನಿಸಿದ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
BJP 's Bihar Bandh has backfired .
— Surbhi (@SurrbhiM) September 4, 2025
Bihar People openly questioning BJP on such forced bandh and ask: Does Modi allow all this?
💥 Patna: Arson, judge & IAS officer’s vehicle stopped, Income Tax Chowk blocked by party workers.
💥Arwal: BJP supporters violently assaulted a… pic.twitter.com/BaDRHXPiBG
Extremely shameful behaviour from BJP workers in Sitamarhi
— Surbhi (@SurrbhiM) September 4, 2025
During the Bihar bandh a journalist exposing BJP’s hooliganism was abused and his microphone was broken.
The irony is that the bandh was called by the BJP over abuses allegedly hurled at the PM's mother . pic.twitter.com/O1P2SNuIRG