GST Revision: Diwali Offer Color For Gabbar Singh Tax..!

GST ಪರಿಷ್ಕರಣೆ: ಗಬ್ಬರ್ ಸಿಂಗ್ ಟ್ಯಾಕ್ಸ್‌ಗೆ ದೀಪಾವಳಿ ಕೊಡುಗೆ ಬಣ್ಣ..! ವಿಶ್ಲೇಷಣೆ

ನವದೆಹಲಿ: ಸತತ 8 ವರ್ಷಗಳ ಬಳಿಕ ಮೊದಲ ಬಾರಿಗೆ ಮೋದಿ ಸರ್ಕಾರ ಒಪ್ಪಿಕೊಂಡಿದೆ, GSTಯಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು.

ಹೌದು ದೇಶದ ಜನರಿಗೆ ಬರೆ ಎಳೆಯುತ್ತಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ (GST) ಪರಿಷ್ಕರಣೆ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿರ್ಣಯವಾದರೂ, ಚರ್ಚೆಗೆ ಒಳಗಾಗಿರುವುದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಗಬ್ಬರ್ ಸಿಂಗ್ ಟ್ಯಾಕ್ಸ್ ಹೇಳಿಕೆ.

ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೆರಿಗೆ ಬದಲಾವಣೆಗಳಿಗೆ ನಾನಾ ರಾಜ್ಯಗಳ ಹಣಕಾಸು ಸಚಿವರು ಅನುಮೋದನೆ ನೀಡಿದ್ದಾರೆ.

ಪ್ರಸ್ತುತ, ನಾಲ್ಕು ಜಿಎಸ್‌ಟಿ ಫ್ಲ್ಯಾಬ್‌ಗಳಿದ್ದು, ಶೇ. 5, ಶೇ, 12, ಶೇ. 18 ಮತ್ತು ಶೇ, 28 ರಷ್ಟು ತೆರಿಗೆ ವಿಧಿಸಲಾ ಗುತ್ತಿದೆ. ಇನ್ನು ಮುಂದೆ ಶೇ. 12 ಮತ್ತು ಶೇ. 28ರ ತೆರಿಗೆ ಸ್ಪ್ಯಾಬ್‌ಗಳು ರದ್ದಾಗಲಿದ್ದು ಶೇ. 5 ಮತ್ತು ಶೇ. 18ರ ಎರಡು ಸ್ತರದ ತೆರಿಗೆ ಮಾತ್ರ ಉಳಿದುಕೊಳ್ಳಲಿದೆ.

ದೀಪಾವಳಿ ಹೊತ್ತಿಗೆ ಜನರು ಸಿಹಿ ಸುದ್ದಿ ಪಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ಸವದ ಭಾಷಣದಲ್ಲಿ ಹೇಳಿದ್ದರು. ಈಗ ದಸರೆಯ ಆರಂಭದಲ್ಲೇ ಜಿಎಸ್‌ಟಿ ದರ ಇಳಿಸಲು ನಿರ್ಧರಿಸಲಾಗಿದೆ.

ಜವಳಿ, ರಸಗೊಬ್ಬರ, ನವೀಕರಿಸಬಹುದಾದ ಇಂಧನ ಗಳು, ವಾಹನಗಳು, ಕರಕುಶಲ ವಸ್ತುಗಳು, ಕೃಷಿ, ಆರೋಗ್ಯ, ವಿಮಾ ವಲಯಗಳು ಈ ಬದಲಾವಣೆಯಿಂದ ಲಾಭ ಪಡೆಯಲಿವೆ.

ಕೇಶ ತೈಲ, ಸೋಪು, ಶಾಂಪೂಗಳು, ಹಲ್ಲುಜ್ಜುವ ಬ್ರಷ್‌ಗಳು, ಟೂತ್‌ಪೇಸ್ಟ್, ಸೈಕಲ್‌ ಗಳು ಮತ್ತು ಅಡುಗೆ ಸಾಮಾನುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ. ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಜನಸಾಮಾನ್ಯರ ಪಾಲಿಗೆ ದುಬಾರಿಯಾಗಿರುವ ವೈದ್ಯಕೀಯ ವಿಮೆಯನ್ನು ಎಲ್ಲರಿಗೂ ಕೈಗೆಟು ಕುವಂತೆ ಮಾಡಲು ಸರಕಾರ ಉದ್ದೇಶಿಸಿದೆ.

ಗಬ್ಬರ್ ಸಿಂಗ್ ಟ್ಯಾಕ್ಸ್..? ದೀಪಾವಳಿ ಕೊಡುಗೆ..?

ನಿನ್ನೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೆರಿಗೆ ಬದಲಾವಣೆ ಘೋಷಣೆಯನ್ನು ಎನ್‌ಡಿಎ ಮೈತ್ರಿಕೂಟ ಸ್ವಾಗತಿಸಿ, ದೀಪಾವಳಿ ಉಡುಗೊರೆ ಎಂದರೆ, ಇಂಡಿ ಮೈತ್ರಿಕೂಟ 2017 ರಲ್ಲಿ ರಾಹುಲ್ ಗಾಂಧಿಯವರ ಆರೋಪದ ಗಬ್ಬರ್ ಟ್ಯಾಕ್ಸ್ ನಿಂದ ದೇಶದ ಜನತೆಗೆ ತೊಂದರೆಯಾಗುತ್ತಿದೆ ಎಂಬುದನ್ನು ಮೋದಿ ಸರ್ಕಾರ ಒಪ್ಪಿಕೊಂಡಿದೆ ಎಂದು ಲೇವಡಿ ಮಾಡಿದೆ.

8 ವರ್ಷಗಳಿಂದ ಮೋದಿ ಸರ್ಕಾರ ಕಾಪಾಡುತ್ತಿದ್ದ ಆ ತಪ್ಪು ನಿರ್ಣಯದಿಂದಾಗಿ (GST 18%) ದೇಶದ ಜನತ ಇದರ ಪರಿಣಾಮವನ್ನು ಅನುಭವಿಸಬೇಕಾವಂತೆ ಆಗಿತ್ತು. ಆದರೆ ಕೊನೆಗೂ ಮೋದಿ ಸರ್ಕಾರ ತನ್ನ ತಪ್ಪನ್ನು 8 ವರ್ಷಗಳ ಬಳಿಕ ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.

ಒಂದು ವೇಳೆ ಮೋದಿ ಸರ್ಕಾರದ ಈ ಪರಿಷ್ಕರಣೆಯನ್ನು, ಪರಿಹಾರ ಎಂದು ಕ್ರೆಡಿಟ್ ಪಡೆಯಲು ಮುಂದಾಗುವುದಾದರೆ, ಮೊದಲಿಗೆ ಈ ಪ್ರಶ್ನೆಗೆ ಉತ್ತರ ನೀಡಬೇಕಿದ್ದು, ಈ ಪರಿಹಾರವನ್ನು ಕಂಡು ಹಿಡಿಯಲು 8 ವರ್ಷಗಳ ಕಾಲ ಏಕೆ ಬೇಕಾಯ್ತು ಎಂದು.

ಏಕೆಂದರೆ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಅಂಗಡಿ ಮಾಲೀಕರು ಈ GST ಯಿಂದಾಗಿ ಅವರ ಬದುಕನ್ನು ಬೀದಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಆಕ್ರೋಶವನ್ನು ಬಿಜೆಪಿ ಸಚಿವ ನಿತಿನ್ ಗಡ್ಕರಿ ಅವರು ಕೂಡ ವ್ಯಕ್ತಪಡಿಸಿದ್ದು, ನಿರ್ಮಲಾ ಸೀತರಾಮನ್ ಅವರಿಗೆ ಆರೋಗ್ಯ ವಿಮೆಗೆ ವಿಧಿಸಲಾಗುತ್ತಿರುವ GST ಕುರಿತು ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಅವರಿಗೆ ಯಾವ ಬಿಜೆಪಿ ನಾಯಕರು ಬೆಂಬಲ ಕೊಡಲಿಲ್ಲ.

ಆದರೆ ಈ ಗಬ್ಬರ್ ಸಿಂಗ್ ಟ್ಯಾಕ್ಸ್ ಕುರಿತು ಏಕಾಂಗಿಯಾಗಿ ದನಿ ಎತ್ತಿ ಹೋರಾಟ ನಡೆಸಿದ್ದು ರಾಹುಲ್ ಗಾಂಧಿ, ಏಕೆಂದರೆ 2017ರ ಸೆಪ್ಟೆಂಬರ್ ತಿಂಗಳಲ್ಲಿ GST ಗೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಹೆಸರಿಟ್ಟು ಹೋರಾಟ ಆರಂಭಿಸಿದರು.

ಈ ಟ್ಯಾಕ್ಸ್ ನಿಂದ ದೇಶದ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳನ್ನು ದೇಶದ ಜನರೆದುರು ಬಿಚ್ಚಿಟ್ಟಿರು. ಏಕೆಂದರೆ ಶೇ.18 ತೆರಿಗೆ, ನಾಲ್ಕು ನಾಲ್ಕು ಸ್ಲಾಬ್‌ಗಳಲ್ಲಿನ ಗೊಂದಲದ ಕುರಿತು ಪ್ರಶ್ನೆ ಮಾಡಿದ್ದರು. ಇದು ತೀವ್ರ ಚರ್ಚೆ ಗೆ ಒಳಗಾಗಿ ಡಿ.4 2017ರಲ್ಲಿ ಟ್ವಿಟರ್ ನಲ್ಲಿ #Gabbar Singh Tax ಎಂದು ಟ್ರೆಂಡಿಂಗ್ ನಡೆಯಿತು.

ಸತತ 8 ವರ್ಷಗಳ ಕಾಲ ರಾಹುಲ್ ಗಾಂಧಿ ಅವರು GST ಸರಳಿ ಕರಣ ಮಾಡಬೇಕೆಂದು ಒತ್ತಾಯಿಸುತ್ತಾ ಬಂದಿದ್ದಾರೆ. ಏಕೆಂದರೆ 2016ರ ಅಕ್ಟೋಬರ್ 18ರ GST ಕೌನ್ಸಿಲ್ ಸಭೆಯ ಮುನ್ನವೇ ಶೇ.18 ತೆರಿಗೆ ಲೋಪವಿದೆ, ದೇಶದ ಬಡ, ಮದ್ಯಮ ವರ್ಗದ ಜನತೆ ಸಂಕಷ್ಟ ತರಲಿದೆ, ಈ ನಿರ್ಣಯ ಸಾಹುಕಾರ ಮತ್ತು ಬಡವರಿಗೆ ಒಂದೇ ತೆರಿಗೆಯ ಬರೆ ಹಾಕುತ್ತದೆ, ಕಾಂಗ್ರೆಸ್ ಒತ್ತಾಯ ಏನೆಂದರೆ ಜನಸಾಮಾನ್ಯರಿಗೆ ಈ ತೆರಿಗೆಯ ಬಿಸಿ ತಟ್ಟಬಾರದು ಎಂದು ಹೇಳಿದ್ದರು.

ಈ ಕುರಿತು ರ್ಯಾಲಿ, ಸಭೆ, ಸುದ್ದಿಗೋಷ್ಠಿ, ಸಂಸತ್ತಿನಲ್ಲಿನ ರಾಹುಲ್ ಗಾಂಧಿ ಅವರ ಒತ್ತಯಾದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆ ವೇಳೆ ರಾಹುಲ್ ಗಾಂಧಿ ಅವರು ಹೇಳಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ ಹೇಳಿಕೆಯನ್ನು ಬಿಜೆಪಿ IT ಸೆಂಟರ್, ಗೋದಿ ಮೀಡಿಯಾಗಳು ಲೇವಡಿ ಮಾಡಿದ್ದವೋ.. 8 ವರ್ಷಗಳ ಬಳಿಕ ಈಗ ಅದನ್ನೇ ಮೋದಿ ಸರ್ಕಾರದಿಂದ ಪರಿಹಾರ, ದೀಪಾವಳಿ ಗಿಪ್ಟ್ ಎಂದು ವರದಿ ಮಾಡುತ್ತಿವೆ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಲೇವಡಿ ಮಾಡಿದ್ದಾರೆ.

ರಾಜಕೀಯ

ದೊಡ್ಡಬಳ್ಳಾಪುರ TAPMCS ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ..!

ದೊಡ್ಡಬಳ್ಳಾಪುರ TAPMCS ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ..!

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

[ccc_my_favorite_select_button post_id="116459"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ (Shuttle Badminton Tournament) ಅಂಡರ್ 17 ಬಾಲಕರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಬಾಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

[ccc_my_favorite_select_button post_id="116353"]
ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಜೈಲು ಪಾಲಾಗಿದ್ದ ಯುವಕ ಜಾಮೀನಿನಲ್ಲಿ ಹೊರಗೆ ಬಂದ ಎರಡು ವಾರಗಳ ನಂತರ ಪತ್ನಿಗೆ ಲೈವ್ ವಿಡಿಯೊ ಮಾಡಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ (Suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

[ccc_my_favorite_select_button post_id="116294"]
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಫಘಾತಕ್ಕೆ (Accident) ಒಳಗಾಗಿ ದೊಡ್ಡಬಳ್ಳಾಪುರ ನಗರದ ನಿವಾಸಿ, ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ನಾರನಹಳ್ಳಿ ಬಳಿ ಸಂಭವಿಸಿದೆ.

[ccc_my_favorite_select_button post_id="116301"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!