ದೊಡ್ಡಬಳ್ಳಾಪುರ: ಹಲವು ದಾನ ಧರ್ಮಗಳ ಮೂಲಕ ಚಿರಪರಿಚಿತವಾಗಿದ್ದ ತಾಲೂಕಿನ ಹೊಸಹಳ್ಳಿಯ (Hosahalli) ಹೆಚ್.ಎನ್. ಸೂರ್ಯನಾರಾಯಣ್ ರಾವ್ ಅವರು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಗುರುವಾರ ರಾತ್ರಿ ಇಹಲೋಕವನ್ನು ತ್ಯಜಿಸಿದರು.
ಮೃತರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣಕುಮಾರ್ ಸೇರಿದಂತೆ ತುಂಬು ಕುಟುಂಬವನ್ನು ಅಗಲಿದ್ದು, ಇವರ ಪತ್ನಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 1ಗಂಟೆಯ ಹೊಸಹಳ್ಳಿಯ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೊಸಹಳ್ಳಿ ಪ್ರೌಢಶಾಲೆಗೆ ಜಮೀನು ದಾನ, ಹೊಸಹಳ್ಳಿ ಗ್ರಾಮಕ್ಕೆ ವಿದ್ಯುತ್ ಪೂರೈಕೆಗೆ ಹೋರಾಟ, ಟಿಡಿಬಿ ಶಾಲೆಯ ಕಾರ್ಯದರ್ಶಿಯಾಗಿ ಸೇವೆ, ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಸೂರ್ಯನಾರಾಯಣ್ ರಾವ್ ಶ್ರಮಿಸಿದ್ದಾರೆ.