ಬೆಂಗಳೂರು: ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ನಿಧನ ಹೊಂದಿದ್ದಾರೆ.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಈ ಕುರಿತಂತೆ ಚಕ್ರವರ್ತಿ ಸೂಲಿಬೆಲೆ ಅವರು ನಿಧನ ಸಂದೇಶವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಬದುಕಿನ ಪಯಣದಲ್ಲಿ ಶಾಶ್ವತವಾಗಿ ಯಾರೂ ಜೊತೆಗಿರಲಾರರು. ಆದರೆ ಕೆಲವರ ವಿಯೋಗ ಅನಿರೀಕ್ಷಿತ ಮತ್ತು ದುಃಖಮಯ.
ಅಪ್ಪ ಇಂದು ಬೆಳಿಗ್ಗೆಯಷ್ಟೇ ಯಾತ್ರೆ ಮುಗಿಸಿ ಅಗಲಿದರು.
ಕೆಲದಿನಗಳ ಶ್ವಾಸಕೋಶದ ಸಮಸ್ಯೆ ಅವರನ್ನು ಈ ಹಂತಕ್ಕೊಯ್ಯುವುದೆಂದು ನಾನೆಣಿಸಿರಲಿಲ್ಲ. ಅವರನ್ನು ಪ್ರೀತಿಸುವವರ ಬಹಳ ಮಂದಿ. ಎಲ್ಲರಿಗೂ ವಿಷಯ ಮುಟ್ಟಿಸುವುದು ಹೇಗೆ? ಅದಕ್ಕೇ ಇಲ್ಲಿ ಹಂಚಿಕೊಳ್ಳುತ್ತಿರುವೆ.
ಅವರ ಸದ್ಗತಿಗೆ ಪ್ರಾರ್ಥಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.