ನವದೆಹಲಿ: ವೋಟ್ ಚೋರಿ ಕುರಿತು ಗಂಭೀರ ಆರೋಪ ಮಾಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಮತದಾರರ ಅಧಿಕಾರ ಯಾತ್ರೆಯ ನಂತರ ಮಲೇಷ್ಯಾದ ಲಂಗ್ಕಾವಿಗೆ ವಿಶ್ರಾಂತಿಗೆಂದು ತೆರಳಿದ್ದಾರೆ.
ಲಂಗ್ಕಾವಿ ಮಾರುಕಟ್ಟೆಯಲ್ಲಿ ರಾಹುಲ್ ಗಾಂಧಿ ಇರುವ ಹಾಗೂ ಸ್ಕೂಟರ್ನಲ್ಲಿ ಏಕಾಂಗಿಯಾಗಿ ಸಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲಿಗರು ರಾಹುಲ್ ಗಾಂಧಿ ಮತ್ತೆ ಓಡಿಹೋದರು ಎಂದು ಲೇವಡಿ ಮಾಡುತ್ತಿದ್ದಾರೆ. ಅಲ್ಲದೆ ಉತ್ತರ ಭಾರತದಲ್ಲಿ ಪ್ರವಾಹ ಮತ್ತು ಮುಂಬರುವ ಚುನಾವಣೆಗಳು ಸೇರಿದಂತೆ ದೇಶೀಯ ಬಿಕ್ಕಟ್ಟುಗಳನ್ನು ರಾಹುಲ್ ಗಾಂಧಿ ಕೈಬಿಟ್ಟಿದ್ದಾರೆ ಎಂದು ಟೀಕಿಸುತ್ತಿದ್ದಾರೆ.
Rahul Gandhi has slipped away yet again—this time on a clandestine vacation in Langkawi, Malaysia.
— Amit Malviya (@amitmalviya) September 6, 2025
Looks like the heat and dust of Bihar’s politics was too much for the Congress Yuvraj, who had to rush off for a break. Or is it another one of those secret meetings that no one is… pic.twitter.com/NdiA4TP2bT
ಇದಕ್ಕೆ ತಿರಗೇಟು ನೀಡಿರುವ ಕಾಂಗ್ರೆಸ್ ಬೆಂಬಲಿಗರು ಬಿಹಾರದಲ್ಲಿ 1,300 ಕಿ.ಮೀ ಮತದಾರರ ಅಧಿಕಾರ ಯಾತ್ರೆಯ ಯಾರಿಗೇ ಆಗಲಿ ವಿಶ್ರಾಂತಿ ಅಗತ್ಯ.
ತೀವ್ರ ಬಿಸಿಲಿನ ನಡುವೆಯು ರಾಹುಲ್ ಗಾಂಧಿ ಯಾತ್ರೆ ನಡೆಸಿದ್ದಾರೆ. ನಾಯಕರಿಗೆ ವಿಶ್ರಾಂತಿ, ಸ್ನೇಹಿತರು, ಆರೋಗ್ಯಕರ ಜೀವನಶೈಲಿ ಬೇಕು. ಅವರೇನು ಜೈವಿಕ ವ್ಯಕ್ತಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ತಿರುಗೇಟು ನೀಡುತ್ತಿದ್ದಾರೆ.
Disgusted at ‘Rahul Gandhi fled again’ propaganda.Rahul is biological,not a 24×7 robot like Modi pretends to be.
— Arfa Khanum Sherwani (@khanumarfa) September 7, 2025
Leaders need rest,friends, a healthy lifestyle.
What’s the use of Modi style 18-hour workdays if all you deliver is a broken economy,failed foreign policy & a divided…
ಈ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆ ತೀವ್ರವಾಗಿ ನಡೆಯುತ್ತಿದ್ದು, ಚುನಾವಣೆಗಳು ಸಮೀಪಿಸುತ್ತಿದ್ದಂತೆ ನಡೆಯುತ್ತಿರುವ ಪೈಪೋಟಿ ಕಂಡುಬರುತ್ತಿದೆ.
Someone was clicking his pictures without permission.
— Mohit Chauhan (@mohitlaws) September 6, 2025
The way he is looking at the camera, it seems he realized it.
Someone is tracking him all the time.
Forget tracking, his real-time location is being posted on Social Media despite Z+ security.
This is dangerous. @INCIndia https://t.co/phgfbVkZ9W pic.twitter.com/8ROuo6bcnP