Teachers' Day celebrations at MSV Public School

ಗುಡ್ಮಾರ್ನಿಂಗ್ ನ್ಯೂಸ್: ದೊಡ್ಡಬಳ್ಳಾಪುರದ ಎಂ‌ಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಡಗರ

ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಾಲೆ ಎಂ‌ಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಶಿಕ್ಷಕರ ದಿನಾಚರಣೆಯನ್ನು (Teachers’ Day) ಸಂಭ್ರಮದಿಂದ ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು.

ಶಿಕ್ಷಕರಿಗಾಗಿ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಎ. ಸುಬ್ರಮಣ್ಯ ಮಾತನಾಡಿ, ಗುರು ಕೇವಲ ಪದವಲ್ಲ, ಗುರುವಿಗಿಂತಲೂ ಮಿಗಿಲಾದುದು ಯಾವುದೂ ಇಲ್ಲ. ಏಕೆಂದರೆ ನಮ್ಮ ಬಾಳಿನ ಅಂಧಕಾರವನ್ನು ತೊಲಗಿಸುವ ನಮ್ಮ ಬಾಳಿಗೆ ಬೆಳಕು ನೀಡುವ ಆಶಾಕಿರಣವೇ ಗುರು. ವಿದ್ಯಾರ್ಥಿ ಜೀವನದಲ್ಲಿ ಏನೇ ಮಹತ್ತರ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನ ಬಹಳ ಮುಖ್ಯ ಮುಂದೆ ಗುರಿಯಿರಬೇಕು. ಹಿಂದೆ ಗುರುವಿರಬೇಕು ಆಗ ವಿದ್ಯಾರ್ಥಿ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ.

ಹೀಗೆ ಶಿಕ್ಷಕರ ಹುದ್ದೆಯನ್ನು ಬಹಳ ಆನಂದಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿ ನಂತರ ನಮ್ಮ ದೇಶದ ರಾಷ್ಟ್ರಪತಿ ಸ್ಥಾನದವರೆಗೆ ಏರಿದ ಮಹಾನ್ ಚೇತನ ನಮ್ಮ ನೆಚ್ಚಿನ ಗುರುಗಳಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನ ಇವರ ಜನ್ಮದಿನವನ್ನು ದೇಶದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ.

ರಾಧಾಕೃಷ್ಣನ್ ರವರು ಕೊಲ್ಕತ್ತಾ ವಿಶ್ವವಿದ್ಯಾಲಯದ ತತ್ವ ಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರತಿರಲಾರದು. ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿ ಪ್ರೇಮದ ಚಿಲುಮೆ ಉಕ್ಕಿ ಬಂತು. ರಾಧಾಕೃಷ್ಣನ್ ಅವರನ್ನೂ ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ, ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಸರಸ್ವತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ

ರಾಧಾಕೃಷ್ಣನ್ ರವರ ಕಾಂಪಾರ್ಟ್ ಮೆಂಟನ್ನು ಒರಗು ದಿಂಬು ಹಾಗೂ ರತ್ನಗಂಬಳಿಯನ್ನು ಹಾಕಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವ ಮಂದಿರದಂತೆ ಅಲಂಕಾರ ಮಾಡಿದ್ದರು ಎಂದು ತಿಳಿಸಿದರು.

ಉಪಾಧ್ಯಕ್ಷ ಸ್ವರೂಪ್ ಮಾತನಾಡಿ, ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿ ಬಂದ ಭಾರತದ ಹೆಮ್ಮೆಯ ಪುತ್ರ ಶುಭಾಂಶು ಶುಕ್ಲರವರ ಸಾಧನೆಯನ್ನು ಹಾಗೂ ಅವರು ಅಲ್ಲಿ ಕೈಗೊಂಡ ಅಧ್ಯಾಯಗಳ ಬಗ್ಗೆ, ಇದಕ್ಕೆ ಅವರ ಮಾರ್ಗದರ್ಶಕ ಗುರುಗಳ ಬಗ್ಗೆ ಅವರ ಮಹತ್ತರ ಕೊಡುಗೆಯ ಬಗ್ಗೆ ಹಾಗೇಯೇ ಮಕ್ಕಳಲ್ಲಿ ಭವಿಷ್ಯದ ಭರವಸೆಗಳನ್ನು ಮೂಡಿಸಿದರು. ಮತ್ತು ಮಕ್ಕಳು ಶುಭಾಂಶು ಶುಕ್ಲರವರಂತೆ ಅಗಾಧವಾದುದನ್ನು ಸಾಧಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಮಾತನಾಡಿ, ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ಗುರುಶಿಷ್ಯರ ಸಂಬಂಧದ ಬಗ್ಗೆ ತಿಳಿಸಿದರು. ಹಾಗೆಯೇ ವಿವೇಕಾನಂದರು ಜಗತ್ತಿಗೆ ನೀಡಿದ ಸಂದೇಶಗಳ ಬಗ್ಗೆ ಅವರು ಪಾಲಿಸಿದ ಶಿಸ್ತು ಸಂಯಮದ ಬಗ್ಗೆ ಹಾಗೂ ಅವರಲ್ಲಿದ್ದ ಏಕಾಗ್ರತೆಯ ಛಲ, ಧೈರ್ಯ ಸಾಹಸ ಗುಣಗಳನ್ನು ಕೊಂಡಾಡಿದರು.

ರಾಜಕೀಯ

ಧರ್ಮಸ್ಥಳ ವಿರುದ್ಧ ಬಿಜೆಪಿ ಷಡ್ಯಂತ್ರ: ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮಸ್ಥಳ ವಿರುದ್ಧ ಬಿಜೆಪಿ ಷಡ್ಯಂತ್ರ: ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ?: ಡಿಸಿಎಂ

ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ?: D.K. Shivakumar

[ccc_my_favorite_select_button post_id="113646"]
ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ವನ್ನು ಅರ್ಪಣೆ CM

[ccc_my_favorite_select_button post_id="113575"]
7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ತಮ್ಮ 2 ದಿನಗಳ ಚೀನಾ ಭೇಟಿಯನ್ನು ಮುಗಿಸಿ ದೇಶಕ್ಕೆ ಮರಳಿದ್ದಾರೆ. ಇದನ್ನು ಅವರು 'ಉತ್ಪಾದಕ' ಭೇಟಿ ಎಂದು ಬಣ್ಣಿಸಿದ್ದಾರೆ.

[ccc_my_favorite_select_button post_id="113432"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಗರದ ಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ (R.L. Jalappa Technical College) ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

[ccc_my_favorite_select_button post_id="113312"]
ಮದುವೆ ಕ್ಯಾನ್ಸಲ್.. ರೈತ ಸಂಪರ್ಕ ಕೇಂದ್ರದಲ್ಲಿ ಯುವತಿ ಆತ್ಮಹತ್ಯೆ..!

ಮದುವೆ ಕ್ಯಾನ್ಸಲ್.. ರೈತ ಸಂಪರ್ಕ ಕೇಂದ್ರದಲ್ಲಿ ಯುವತಿ ಆತ್ಮಹತ್ಯೆ..!

ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ

[ccc_my_favorite_select_button post_id="113637"]
Accident; ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣ ಸಾವು

Accident; ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣ ಸಾವು

ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣವಾಗಿ ಸಾವಪ್ಪಿರುವ ಘಟನೆ (Accident) ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಚದುಲಪುರ ಗೇಟ್ ಬಳಿ ಘಟನೆ ನಡೆದಿದೆ.

[ccc_my_favorite_select_button post_id="113528"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!