ಬೆಂಗಳೂರು: ಭಾನುವಾರ ನಡೆದ ದೇವಾಂಗ ಮಂಡಲಿ ಚುನಾವಣೆ (Devanga Mandali election) ಫಲಿತಾಂಶ ರಾತ್ರಿ 10.30 ಪ್ರಕಟವಾಗಿದೆ.
ನಗರದ ತೇರಿನ ಬೀದಿಯಲ್ಲಿರುವ ಅರಳು ಮಲ್ಲಿಗೆ ಗೇಟ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು.
ಚುನಾವಣೆಯಲ್ಲಿ 4543 ಮತದಾರರು ಮತದಾನ ಮಾಡಿದ್ದಾರೆ.
ಎಂ.ಜಿ.ಶ್ರೀನಿವಾಸ್ ನೇತೃತ್ವದ ತಂಡ ಮತ್ತು ಕೆ.ಜಿ.ದಿನೇಶ್ – ಎನ್.ಎಸ್.ಚಿಕ್ಕಣ್ಣ ನೇತೃತ್ವದ ತಂಡ ಹಣಾಹಣಿ ನಡೆಸಿದ್ದು, ಎಂ.ಜಿ.ಶ್ರೀನಿವಾಸ್ ನೇತೃತ್ವದ ತಂಡ 16 ಸ್ಥಾನ, ಕೆ.ಜಿ.ದಿನೇಶ್ – ಎನ್.ಎಸ್.ಚಿಕ್ಕಣ್ಣ ನೇತೃತ್ವದ ತಂಡ ನಾಲ್ಕು ಸ್ಥಾನ ಪಡೆದಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಖಿಲೇಶ್ ಅವರು ಅತಿ ಹೆಚ್ಚು 3332 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಚುನಾಯುತರ ವಿವರ
ಅಧ್ಯಕ್ಷ: ಶ್ರೀನಿವಾಸ ಎಂ ಜಿ
ಉಪಾಧ್ಯಕ್ಷರಾಗಿ: ಅಮರನಾಥ್ ಬಿ.ಜೆ, ಚಿಕ್ಕಣ್ಣ ಎನ್.ಎಸ್.
ಗೌರವ ಕಾರ್ಯದರ್ಶಿ; ಅಮರ್‌ನಾಥ್ ಎಂ ಜಿ
ಸಹ ಕಾರ್ಯದರ್ಶಿ: ನಟರಾಜ ಎ (ಯೋಗ)
ಖಜಾಂಚಿ: ಅಖಿಲೇಶ್ ಹೆಚ್.ವಿ
ಉಳಿದಂತೆ ನಿರ್ದೇಶಕರಾಗಿ: ಮಂಜುನಾಥ ಕೆ ಎಸ್., ಮಹೇಶ ಎಲ್., ವತ್ಸಲ ಎಸ್, ಕುಮಾರ್ ಎನ್.ಜಿ., ಜನಾರ್ಧನ ಕೆ.ಎನ್., ರಾಘವೇಂದ್ರ ವಿ ಎಸ್, ಪ್ರಭಾಕರ್, ನರೇಂದ್ರ ಕೆ ಎಸ್, ನಟರಾಜ ಎಸ್.ಎನ್, ಲಕ್ಷ್ಮೀಕಾಂತ ಡಿ ಎ, ನಿರ್ಮಲ ವಿ, ಪ್ರಿಯಾಂಕ ಬಿ ಪಿ, ಗೋಪಾಲಕೃಷ್ಣ ಪಿ.ಹೆಚ್., ಶಿವಕುಮಾರ್ ಜಿ ಸಿ.