ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಬೀದಿ ನಾಯಿಗಳ ಹಾವಳಿ ತಡೆಗೆ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ (Government) ಮತ್ತೊಂದು ಟಫ್ ರೂಲ್ಸ್ ಜಾರಿ ಮಾಡಿದೆ. ಆದರೆ ಇದು ಟ್ರೋಲ್ಗೆ ಒಳಗಾಗುತ್ತಿದೆ.
ಹೌದು ಮೊದಲ ಬಾರಿಗೆ ನಾಯಿ ಕಚ್ಚಿದರೆ 10 ದಿನ ಜೈಲು ಶಿಕ್ಷೆ ವಿಧಿಸುತ್ತಾರೆ. 2ನೇ ಬಾರಿ ಕಚ್ಚಿದ್ರೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಂತೆ.
ಯಾವುದೇ ಬೀದಿ ನಾಯಿ ಎರಡು ಬಾರಿ ಜನರನ್ನು ಕಚ್ಚಿದರೆ, ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಆದೇಶ ಹೊರಡಿಸಿದ್ದಾರೆ.
ನಾಯಿಯು ಒಮ್ಮೆ ಯಾರಾದರೂ ವ್ಯಕ್ತಿಯನ್ನು ಕಚ್ಚಿದರೆ, ಆ ನಾಯಿಗೆ 10 ದಿನಗಳ ಶಿಕ್ಷೆ ವಿಧಿಸಲಾಗುತ್ತದೆ. ಈ ಸಮಯದಲ್ಲಿ ನಾಯಿಯನ್ನು ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರದಲ್ಲಿ ಇರಿಸಲಾಗುತ್ತದೆ. ಅಲ್ಲಿ ನಾಯಿಗೆ ಚಿಕಿತ್ಸೆ ನೀಡಲಾಗುತ್ತದೆ. ಎಬಿಸಿ ಕೇಂದ್ರದಲ್ಲಿ ಇಂಟಿ-ರೇಬಿಸ್ ಲಸಿಕೆ ನೀಡಿ, ನಾಯಿಯ ಆರೋಗ್ಯ ಮತ್ತು ನಡವಳಿಕೆಯನ್ನು ಪರಿಶೀಲಿಸಲಾಗುತ್ತದೆ.
10 ದಿನಗಳ ನಂತರ ಬಿಡುಗಡೆಯಾಗುವ ಮೊದಲು ನಾಯಿಯ ದೇಹದಲ್ಲಿ ಮೈಕ್ರೋಚಿಪ್ ಅಳವಡಿಸಲಾಗುತ್ತದೆ. ನಾಯಿಯ ಸಂಪೂರ್ಣ ವಿವರಗಳನ್ನು ಫಾರ್ಮ್‌ನಲ್ಲಿ ನೋಂದಾಯಿಸಿ, ವೀಡಿಯೊ ರೆಕಾರ್ಡಿಂಗ್ ಮೂಲಕ ಚಟುವಟಿಕೆಗಳನ್ನು ದಾಖಲಿಸಲಾಗುತ್ತದೆ. ಒಂದು ವೇಳೆ ಆ ನಾಯಿ ಎರಡನೇ ಬಾರಿಗೆ ಕಚ್ಚಿದರೆ ಜೀವಾವಧಿ ಶಿಕ್ಷೆಯಾಗುತ್ತದೆ.
ಎರಡನೇ ಬಾರಿ ನಾಯಿ ಕಚ್ಚಿದರೆ, ಅದನ್ನು ಜೀವಾವಧಿ ಎಬಿಸಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಇದು ನಾಯಿಗಳ ಪಾಲಿಗೆ ಜೀವಮಾನ ಶಿಕ್ಷೆಯಂತಿದೆ. ಈ ಶಿಕ್ಷೆಯಿಂದ ಯಾವ ನಾಯಿಯೂ ಬಿಡುಗಡೆ ಆಗಲಾರದು. ಒಂದು ವೇಳೆ ಯಾರಾದರೂ ದತ್ತು ಪಡೆದರೆ ಮಾತ್ರ ನಾಯಿಯನ್ನು ಬಿಟ್ಟು ಕಳಿಸ್ತಾರೆ ಎಂದು ವರದಿಯಾಗಿದೆ.
ಆದರೆ ಯೋಗಿ ಸರ್ಕಾರದ ಈ ನಿಯಮ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗುತ್ತಿದ್ದು, ನಾಯಿಗಳಿಗೆ ಮೊದಲ ಬಾರಿ, ಎರಡನೇ ಬಾರಿ ಎಂಬುದು ಹೇಗೆ ಗೊತ್ತಾಗುತ್ತೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.