ನವದೆಹಲಿ: ಸ್ಪೇನ್ (Spain) ದೇಶದ ಕ್ಯಾಟಲೋನಿಯಾದಲ್ಲಿ ನಡೆದ ಪ್ರತಿಭಟನೆಯ ವಿಡಿಯೋ (Video) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಪ್ರತಿಭಟನೆಯಲ್ಲಿ ನಿರತ ಮಹಿಳೆಯೋರ್ವರು ಭದ್ರತಾ ಕಾರ್ಯಕ್ಕೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ನಗು ನಗುತ್ತಾ, ಆತ್ಮೀಯವಾಗಿ ಮಾತುಕತೆಯೊಂದಿಗೆ, ಘೋಷಣೆ ಕೂಗುವುದರ ಜೊತೆಗೆ ಕಣ್ಣು ಸನ್ನೆ ಮೂಲಕ, ಚುಂಬಿಸಲು ಮುಂದಾಗುವುದನ್ನು ಕಾಣಬಹುದಾಗಿದೆ.
ये बहुत ही अनमोल पल है..!!
— Dr. Sheetal yadav (@Sheetal2242) September 15, 2025
पत्नी सरकार के खिलाफ धरने में प्रदर्शन कर रही है और पति पुलिस में है जिसे प्रदर्शन को कंट्रोल करने की जिम्मेदारी मिली हुई है।
पत्नी सरकार के खिलाफ और पति सरकार के साथ एक दूसरे के विरुद्ध आमने सामने खड़े हैं।
कमाल का नजारा है..!!😀😆👌 pic.twitter.com/2pIONbyaXw
ಈ ಕುರಿತಂತೆ ಡಾ.ಶೀಥಲ್ ಯಾದವ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಇದು ತುಂಬಾ ಅಮೂಲ್ಯವಾದ ಕ್ಷಣ..!!
ಹೆಂಡತಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾಳೆ ಮತ್ತು ಪತಿ ಪೊಲೀಸ್ ಇಲಾಖೆಯಲ್ಲಿದ್ದು ಪ್ರತಿಭಟನೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.
ಸರ್ಕಾರದ ವಿರುದ್ಧ ಹೆಂಡತಿ ಮತ್ತು ಸರ್ಕಾರದ ಜೊತೆ ಗಂಡ ಪರಸ್ಪರ ಮುಖಾಮುಖಿಯಾಗಿ ನಿಂತಿದ್ದಾರೆ.
ಅದೊಂದು ಅದ್ಭುತ ನೋಟ..!! ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸ್ವರೂಪದಲ್ಲಿ ವೈರಲ್ ಆಗುತ್ತಿದ್ದು, ಮೆಚ್ಚಿಗೆ ಪಡೆಯುತ್ತಿದೆ. ಆದರೆ ಈ ಕುರಿತು ಎಐ ಚಾಟ್ ಬಾಕ್ಸ್ ಗ್ರೂಕ್‌ನಲ್ಲಿ ಪರಿಶೀಲನೆ ನಡೆಸಿದಾಗ, ಈ ವೀಡಿಯೊ 2017 ರ ಸ್ಪೇನ್ (ಕ್ಯಾಟಲೋನಿಯಾ) ಸ್ವಾತಂತ್ರ್ಯ ಜನಾಭಿಪ್ರಾಯ ಸಂಗ್ರಹಣೆಯ ಪ್ರತಿಭಟನೆಯದ್ದಾಗಿದೆ.
ಮಹಿಳಾ ಪ್ರತಿಭಟನಾಕಾರರೊಬ್ಬರು ಪೊಲೀಸ್ ಅಧಿಕಾರಿಗೆ ಒಪ್ಪಿಗೆಯಿಲ್ಲದೆ ಚುಂಬಿಸಿದ್ದಾರೆ, ಇದನ್ನು ಅಧಿಕಾರಿ ಲೈಂಗಿಕ ಕಿರುಕುಳ ಎಂದು ಬಣ್ಣಿಸಿದ್ದಾರೆ. ಇದು ಗಂಡ-ಹೆಂಡತಿಯ ದೃಶ್ಯವಲ್ಲ, ಆದರೆ ತಪ್ಪು ವ್ಯಾಖ್ಯಾನ ಎಂದು ತಿಳಿದುಬಂದಿದೆ.