ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬುಧವಾರ 75 ವರ್ಷ ತುಂಬಲಿದ್ದು, ಇದರ ಅಂಗವಾಗಿ ಬಿಜೆಪಿಯು ದೇಶಾದ್ಯಂತ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ.
ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಭರಪೂರ ಶುಭಾಶಯಗಳನ್ನು ಕೋರಲಾಗುತ್ತಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಶುಭಕೋರಿದ್ದಾರೆ.
Wishing Prime Minister Narendra Modi ji a happy birthday and good health.
— Rahul Gandhi (@RahulGandhi) September 17, 2025
ಇನ್ನೂ ತಡರಾತ್ರಿ ಮೋದಿ ಅವರಿಗೆ ಕರೆ ಮಾಡಿರುವ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶುಭ ಕೋರಿದ್ದಾರೆ. ಇದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮೋದಿ ಧನ್ಯವಾದ ಸಲ್ಲಿಸಿದ್ದು, ‘ಭಾರತ- ಅಮೆರಿಕದ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿಮ್ಮಂತೆ ನಾನೂ ಬದ್ಧನಾಗಿದ್ದೇನೆ’ ಎಂದಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪತ್ರ ಬರೆಯುವ ಮೂಲಕ ಶುಭಕೋರಿದ್ದಾರೆ.
I wish Prime Minister Shri. @narendramodi a very happy 75th birthday. May lord almighty bless him with a long life and good health to serve our nation for many more years. I sent him a letter on the occasion.@PMOIndia pic.twitter.com/quey5KLMNH
— H D Devegowda (@H_D_Devegowda) September 17, 2025
ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ, ನಿಮ್ಮ 75ನೇ ಹುಟ್ಟುಹಬ್ಬಕ್ಕೆ ನಾನು ಶುಭಾಶಯಗಳನ್ನು ಕೋರುತ್ತೇನೆ. ದೇವರು ಯಾವಾಗಲೂ ನಿಮ್ಮೊಂದಿಗಿರಲಿ, ಮತ್ತು ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಿಮಗೆ ಶಕ್ತಿಯನ್ನು ನೀಡಲಿ.
ನೀವು ನಮ್ಮ ರಾಷ್ಟ್ರದ ಚುಕ್ಕಾಣಿ ಹಿಡಿದ ಕಳೆದ 11 ವರ್ಷಗಳಲ್ಲಿ, ನೀವು ಸಾಮಾಜಿಕ-ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಂಡಿದ್ದೀರಿ. ಭಾರತದ ಜನರು ಇದನ್ನು ಪ್ರತಿ ತಿರುವು ಮತ್ತು ಪ್ರತಿ ಚುನಾವಣೆಯಲ್ಲೂ ಒಪ್ಪಿಕೊಂಡಿದ್ದಾರೆ. ಭಾರತವು ಒಂದು ದೊಡ್ಡ, ವೈವಿಧ್ಯಮಯ ಮತ್ತು ಸಂಕೀರ್ಣ ರಾಷ್ಟ್ರವಾಗಿದ್ದು, ಅದನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಮತ್ತು ಶಾಂತವಾಗಿಡುವುದು ಸುಲಭದ ಸವಾಲಲ್ಲ.
ಕಳೆದ ದಶಕದಲ್ಲಿ ದೇಶದಲ್ಲಿ ಒಂದು ವಿಶಿಷ್ಟವಾದ ಮನಸ್ಥಿತಿ ಬದಲಾವಣೆಯಾಗಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು, ಸ್ಥಿರತೆ ಮತ್ತು ಉತ್ತಮ ಆಡಳಿತವನ್ನು ನೀಡಲು ಸಾಧ್ಯ ಎಂಬ ಪುರಾಣವನ್ನು ಎಚ್ಚರಿಕೆಯಿಂದ ಬೆಳೆಸಲಾಗಿತ್ತು. ಆದರೆ ನೀವು ಈ ಪುರಾಣವನ್ನು ಶಾಶ್ವತವಾಗಿ ಗಾಳಿಗೆ ತೂರಿದ್ದೀರಿ. ಈ ರಾಷ್ಟ್ರವು ಶ್ರೀಮಂತ ಪ್ರತಿಭೆಗಳನ್ನು ಹೊಂದಿದೆ ಎಂದು ನೀವು ಸಾಬೀತುಪಡಿಸಿದ್ದೀರಿ, ಅವರು ಹೆಚ್ಚಿನ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಯಾವಾಗಲೂ ಉತ್ತಮ ಪರಿಹಾರಗಳನ್ನು ಹುಡುಕುತ್ತಾರೆ. ನೀವು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಸಾಧ್ಯತೆಗಳನ್ನು ತೆರೆದಿಟ್ಟಿದ್ದೀರಿ ಮತ್ತು ಅದರ ಉಜ್ವಲ ಭವಿಷ್ಯದ ಮೇಲೆ ಅಚಲ ನಂಬಿಕೆಯನ್ನು ಇರಿಸಿದ್ದೀರಿ.
ನಿಮ್ಮ ದೀರ್ಘಾವಧಿಯ ಅಧಿಕಾರದ ಮತ್ತೊಂದು ಮಹತ್ವದ ಸಾಧನೆಯೆಂದರೆ, ಭಾರತೀಯರಲ್ಲಿ ಅವರ ಸಾಂಸ್ಕೃತಿಕ ಗುರುತು ಮತ್ತು ಸ್ವಾತಂತ್ರ್ಯದ ಬಗ್ಗೆ ನೀವು ಹೊಸ ವಿಶ್ವಾಸವನ್ನು ಬೆಳೆಸಿದ್ದೀರಿ. ನೀವು ನಮ್ಮ ನಾಗರಿಕತೆಯ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರಪಂಚದ ಮುಂದೆ ಪದೇ ಪದೇ ಪ್ರದರ್ಶಿಸಿದ್ದೀರಿ. ಈ ಹೊಸ ವಿಶ್ವಾಸವು ರಾಷ್ಟ್ರೀಯ ಪುನರುಜ್ಜೀವನಕ್ಕೆ ಕಾರಣವಾಗಿದೆ, ಇದು ಮುಂದಿನ ದಿನಗಳಲ್ಲಿ ಭಾರತವನ್ನು ಊಹಿಸಲಾಗದ ಎತ್ತರಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.
ಇತ್ತೀಚೆಗೆ ಭಾರತವು ಮಿಲಿಟರಿ ಸಂಘರ್ಷಗಳು ಮತ್ತು ಆರ್ಥಿಕ ಸವಾಲುಗಳಿಗೆ ಒಡ್ಡಿಕೊಂಡಾಗ, ನೀವು ಅವೆಲ್ಲವನ್ನೂ ರಾಷ್ಟ್ರೀಯ ಚಿಂತನೆಯನ್ನು ಬದಲಾಯಿಸುವ ಅವಕಾಶವಾಗಿ ಕೌಶಲ್ಯದಿಂದ ಪರಿವರ್ತಿಸಿದ್ದೀರಿ. ಭಾರತವು ಇನ್ನು ಮುಂದೆ ಒಪ್ಪಂದಗಳು, ನೆರವು ಮತ್ತು ರಿಯಾಯಿತಿಗಳಿಗಾಗಿ ಪಾಶ್ಚಿಮಾತ್ಯ ಶಕ್ತಿಗಳಿಗೆ ಓಡಿಹೋಗುತ್ತಿಲ್ಲ, ಬದಲಿಗೆ ಸಮಾನವಾಗಿ ಮಾತುಕತೆ ನಡೆಸುತ್ತಿದೆ. ಅದು ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ದೊಡ್ಡ ಆದ್ಯತೆಯನ್ನಾಗಿ ಮಾಡುವುದರ ಜೊತೆಗೆ ತನ್ನ ನಿಯಮಗಳು ಮತ್ತು ಷರತ್ತುಗಳನ್ನು ಸದ್ದಿಲ್ಲದೆ ನಿಗದಿಪಡಿಸುತ್ತಿದೆ.
ನಿಮ್ಮ ‘ರಾಷ್ಟ್ರ ಮೊದಲು’ ಎಂಬ ಘೋಷಣೆ ಖಾಲಿಯಾಗಿಲ್ಲ. ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಮತ್ತು ಮತ್ತೊಮ್ಮೆ ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಸರ್ವಶಕ್ತನಾದ ಭಗವಂತ ನಿಮಗೆ ಉತ್ತಮ ಆರೋಗ್ಯವನ್ನು ನೀಡಲಿ ಮತ್ತು ನೀವು ಶತಾಯುಷಿಯಾಗುವಂತೆ ನೋಡಿಕೊಳ್ಳಲಿ ಎಂದು ದೇವೇಗೌಡ ಅವರು ಹರಸಿದ್ದಾರೆ.
ಇನ್ನೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 17, 2025
ಸರಿಸಾಟಿ ಇಲ್ಲದ ವಿಶ್ವನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತವನ್ನು ಮುನ್ನಡೆಸುತ್ತಿರುವ ಹಾಗೂ ಆತ್ಮನಿರ್ಭರತೆಯ ಮೂಲಕ ವಿಕಸಿತ ಭಾರತ ಸಾಕಾರಗೊಳಿಸುವ ನಿಮ್ಮ ಸಂಕಲ್ಪವು ಸಮಸ್ತ ಭಾರತೀಯರು ಹೆಮ್ಮೆಯಿಂದ ತಲೆ… pic.twitter.com/Ibeapkh9Vv
ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ (Marendra modi) ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸರಿಸಾಟಿ ಇಲ್ಲದ ವಿಶ್ವನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತವನ್ನು ಮುನ್ನಡೆಸುತ್ತಿರುವ ಹಾಗೂ ಆತ್ಮನಿರ್ಭರತೆಯ ಮೂಲಕ ವಿಕಸಿತ ಭಾರತ ಸಾಕಾರಗೊಳಿಸುವ ನಿಮ್ಮ ಸಂಕಲ್ಪವು ಸಮಸ್ತ ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ನಿಮ್ಮ ದೃಷ್ಟಿಕೋನವು ಭರವಸೆಯ ಬೆಳಕು ಮತ್ತು ದುರ್ಬಲರ ಕಲ್ಯಾಣ, ಸಬಲೀಕರಣಕ್ಕಾಗಿ ತಾವು ರೂಪಿಸಿರುವ ಕಾರ್ಯಕ್ರಮಗಳು ಜನಪರತೆಯ ಅನನ್ಯ ಮಾದರಿ ಹಾಗೂ ಪ್ರೇರಣೆ.
ರಾಷ್ಟ್ರಕ್ಕಾಗಿ ನಿಮ್ಮ ಅವಿಶ್ರಾಂತ ಸಮರ್ಪಣೆಯ ದುಡಿಮೆ, ಶಿಸ್ತು ಮತ್ತು ಸಂಕಲ್ಪ ನಮಗೆ ದಾರಿದೀಪವಾಗಿದೆ.
ನಿಮಗೆ ಆ ಭಗವಂತ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಿ ಭಾರತವನ್ನು ಪ್ರಗತಿಯ ಉನ್ನತಿಯತ್ತ ಮುನ್ನಡೆಸಿ ಜಾಗತಿಕ ಶಕ್ತಿಯನ್ನಾಗಿಸಲು ಸರ್ವಶಕ್ತಿಯನ್ನೂ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.