ದೊಡ್ಡಬಳ್ಳಾಪುರ; ತಾಲೂಕಿನ ತೂಬಗೆರೆಯಲ್ಲಿ ಚಿತ್ರರಂಗದ ಅಪ್ರತಿಮ ನಟ ಡಾ. ವಿಷ್ಣುವರ್ಧನ್ (Dr. Vishnuvardhan) ಅವರ 75ನೇ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಭಿಮಾನಿ ಹಾಗೂ ಮುಖ್ಯಶಿಕ್ಷಕ ವಸಂತ ಗೌಡ, “ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ನೀಡಿ ವಿಷ್ಣುವರ್ಧನ್ ಅವರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಕಲಾವಿದರಿಗೆ ಸಾವಿಲ್ಲ; ಅವರು ಸದಾ ತಮ್ಮ ಕಲೆಗಳ ಮೂಲಕ ಜೀವಂತವಾಗಿರುತ್ತಾರೆ. ವಿಷ್ಣುವರ್ಧನ್ ಇಂದಿಗೂ ಬದುಕಿದ್ದರೆ ಅಭಿಮಾನಿಗಳ ಸಂಭ್ರಮ ಅಪಾರವಾಗಿರುತ್ತಿತ್ತು” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಭಿಮಾನಿಗಳು ಪುಷ್ಪಾರ್ಚನೆ ಸಲ್ಲಿಸಿ, ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದರು.
ಕೆಪಿಸಿಸಿ ಸದಸ್ಯ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಆನಂದ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ್ ಯುವ ಮುಖಂಡ ಮಧು, ಅಭಿಮಾನಿ ಕೃಷ್ಣಪ್ಪ, ಆನಂದ ಮತ್ತಿತರರು ಹಾಜರಿದ್ದರು.