ದೊಡ್ಡಬಳ್ಳಾಪುರ: ನೂತನವಾಗಿ ಆರಂಭವಾಗಿರುವ ಬೆಳದಿಂಗಳು ಸ್ಟಡಿ ಸರ್ಕಲ್ ವತಿಯಿಂದ ಒಂದು ದಿನದ ಉಚಿತ ಕಾರ್ಯಗಾರವನ್ನು (Free workshop) ನಾಳೆ (ಸೆ. 20) ಏರ್ಪಡಿಸಲಾಗಿದೆ.
ಈ ಕಾರ್ಯಗಾರದಲ್ಲಿ ಎಸ್ ಡಿ ಎ/ ಎಫ್ ಡಿ ಎ/ಪಿ ಸಿ/ಪಿಎಸ್ಐ/ ವಿಐ/ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಸಿ ಗ್ರೂಪ್ ಹುದ್ದೆಗಳ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.
ಬೆಳಗ್ಗೆ 10:30 ಕ್ಕೆ ಪ್ರಾರಂಭವಾಗಿ ಮೊದಲನೆಯ ಸೆಷನ್ ಒಂದು ಗಂಟೆಗೆ ಮುಗಿಯಲಿದೆ. ಎರಡನೇ ಸೆಷನ್ ಎರಡು ಗಂಟೆಗೆ ಪ್ರಾರಂಭವಾಗಿ ಸಂಜೆ 4:30 ಕ್ಕೆ ಮುಗಿಯಲಿದೆ.
ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕರು ಹಾಗೂ ತರಬೇತುದಾರರಾದ ಸತೀಶ್ ಜೋಗ, ತುಮಕೂರಿನ ತರಬೇತುದಾರರ ವಿಶ್ವನಾಥ್ ಶಿವಕುಮಾರ್ ಚಂದ್ರು ಹಾಗೂ ಗೋವಿಂದರಾಜು ಅವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸೌಭಾಗ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ರಾಜಗೋಪಾಲ್, ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಪರಮೇಶ್ವರ್, ಸೌಭಾಗ್ಯ ಟ್ರಸ್ಟ್ ನ ಕಾರ್ಯದರ್ಶಿ ರಾಜೇಂದ್ರ ಮುಂತಾದವರು ಉಪಸ್ಥಿತರಿರುತ್ತಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಪ್ರತಿಭಾವಂತ ನಗರ ಮತ್ತು ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಬಹುದು.
ಬೆಳದಿಂಗಳು ಸ್ಟಡಿ ಸರ್ಕಲ್ ದೊಡ್ಡ ಆಶೋತ್ತರಗಳನ್ನು ಇಟ್ಟುಕೊಂಡು ಪ್ರಾರಂಭಿಸಲಾಗಿದೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ದೇವನಹಳ್ಳಿ, ಕೊರಟಗೆರೆ ಮುಂತಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದೇ ನಮ್ಮ ಸಂಸ್ಥೆಯ ಗುರಿ. ಕಳೆದ ತಿಂಗಳು ಬೆಳದಿಂಗಳು ಸ್ಟಡಿ ಸರ್ಕಲ್ ಉದ್ಘಾಟನೆಯಾಗಿದೆ. ಈಗ ಅದರ ಮುಂದಿನ ಭಾಗವಾಗಿ ಇದೇ ಶನಿವಾರ 20ರಂದು ಉಚಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಈ ಕಾರ್ಯದಲ್ಲಿ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಗೆ ಯಶಸ್ಸು ಪಡೆಯಬಹುದು, ಹೆಚ್ಚಿನ ಅಂಕ ಗಳಿಸುವ ಸುಲಭ ಮಾರ್ಗಗಳು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆ? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? ಎಂದು ಕಾರ್ಯಗಾರದಲ್ಲಿ ತಿಳಿಸಲಾಗುವುದು.
ಈ ಕಾರ್ಯಗಾರದಲ್ಲಿ ಪಿಯುಸಿ ಉತ್ತೀರ್ಣರಾದವರು, ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳು,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು, ಮುಂದೆ ಸಿದ್ಧತೆ ನಡೆಸ ಬಯಸುವವರು, ಪರೀಕ್ಷೆಗಳ ಬಗ್ಗೆ ಮಾಹಿತಿ ಬೇಕಾದವರು ಭಾಗವಹಿಸಬಹುದು ಎಂದು ಕೋ -ಆರ್ಡಿನೇಟರ್ ಮಾಳವ ನಾರಾಯಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ: ಬೆಳದಿಂಗಳು ಸ್ಟಡಿ ಸರ್ಕಲ್(BSC), ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೊದಲನೇ ಮಹಡಿ, ಹಳೆ ಬಸ್ ನಿಲ್ದಾಣ ದೊಡ್ಡಬಳ್ಳಾಪುರ.
ಹೆಚ್ಚಿನ ಮಾಹಿತಿಗಾಗಿ 95912 22233/ 99649 28656 ನಂಬರ್ ಗಳನ್ನು ಸಂಪರ್ಕಿಸಬಹುದು.