ದೊಡ್ಡಬಳ್ಳಾಪುರ: ನಗರದ ಗುರುಭವನದಲ್ಲಿ ಶನಿವಾರ ನಡೆದ ದೊಡ್ಡಬಳ್ಳಾಪುರ ತಾಲ್ಲೂಕು ಮುಖ್ಯ ಶಿಕ್ಷಕರ ಸಂಘಕ್ಕೆ (Teachers’ Association) ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಘದ ಗೌರವಾಧ್ಯಕ್ಷರಾಗಿ ಚಿಕ್ಕ ಗಂಗಯ್ಯ, ಅಧ್ಯಕ್ಷರಾಗಿ ಬಿ.ಎಸ್. ಸಿದ್ದಗಂಗಯ್ಯ, ಪ್ರಧಾನ ಕಾರ್ಯದರ್ಶಿಗಮಯಾಗಿ ಎಂ.ಜಿ.ಶ್ರೀನಿವಾಸ್, ಖಜಾಂಚಿಯಾಗಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಒಟ್ಟು 38 ಮುಖ್ಯ ಶಿಕ್ಷಕರು ಸೇರಿ ಒಮ್ಮತದಿಂದ ಪದಾಧಿಕಾರಿಗಳನ್ನ ಆಯ್ಕೆ ಮಾಡಿದ್ದಾರೆ.
ನೂತನ ಅಧ್ಯಕ್ಷ ಬಿ.ಎಸ್. ಸಿದ್ದಗಂಗಯ್ಯ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಹೊಸ ನೇತೃತ್ವವು ಕೇವಲ ಒಂದು ಆಯ್ಕೆ ಅಷ್ಟೇ ಅಲ್ಲ, ಬದಲಾಗಿ ಶಿಕ್ಷಕರ ಒಗ್ಗಟ್ಟಿನ ಘೋಷಣೆಯಾಗಿದೆ. ಸಂಘಟನೆ ಇತಿಹಾಸದಲ್ಲೇ ಸಾಧನೆಗಳ ಜೊತೆಗೆ ಉಜ್ವಲ ಭವಿಷ್ಯದ ಗುರಿಗಳೊಂದಿಗೆ ಇನ್ನಷ್ಟು ದಿಟ್ಟ ಹೆಜ್ಜೆ ಇಡಲಿದೆ.
ಶಿಕ್ಷಕರು ಒಗ್ಗಟ್ಟಿನಿಂದ ಇದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯವೆಂಬುದಕ್ಕೆ ದೊಡ್ಡಬಳ್ಳಾಪುರ ಮತ್ತೊಂದು ಉದಾಹರಣೆಯಾಗಲಿದೆ. ಸಂಘವು ಕಳೆದ ಹಲವು ದಶಕಗಳಿಂದ ಶಿಕ್ಷಕರ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಮಾಣಿಕ ಪ್ರಯತ್ನ ಮಾಡಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ರಾಜಶೇಖರ್ ಮಾತನಾಡಿ, ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು. ಅವರು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಜೊತೆಗೆ ಸಮಾಜದ ದಿಕ್ಕನ್ನು ತೋರಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಪಯಣದಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು. ದೊಡ್ಡಬಳ್ಳಾಪುರ ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಹೊಸ ಆಯ್ಕೆ, ಇತಿಹಾಸ, ಸಾಧನೆಗಳು ಮತ್ತು ಮುಂದಿನ ಗುರಿಗಳೊಂದಿಗೆ ಶಿಕ್ಷಕರ ಒಗ್ಗಟ್ಟಿನ ಹೊಸ ಅಧ್ಯಾಯವನ್ನು ತೆರೆದಿಡುತ್ತದೆ ಎಂದು ಹೇಳಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕ್ರಯ್ಯ, ಶಿಕ್ಷಣ ಸಂಯೋಜನಾಧಿಕಾರಿ ಆಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎವಿ ಚಂದ್ರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷೆ ಶಾಂತಮ್ಮ, ಪ್ರಧಾನ ಕಾರ್ಯದರ್ಶಿ ಜೈ ಕುಮಾರ್, ನಿರ್ದೇಶಕ ಮಲ್ಲಿಕಾರ್ಜುನರೆಡ್ಡಿ, ಆಂಜಿನಪ್ಪ ಮತ್ತಿತರರಿದ್ದರು.