ನವದೆಹಲಿ: ಖ್ಯಾತ ನಟ, ಮಲಯಾಳಂ ಚಿತ್ರ ರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ (Mohan lal) ಭಾರತೀಯ ಸಿನಿಮಾರಂಗದ ಅತ್ಯುನ್ನತ ಲಾಲ್ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ (Dadasaheb Phalke Award) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
2023ರ ಸಾಲಿನ ಪ್ರಶಸ್ತಿಗೆ ಮೋಹನ್ ಅವರನ್ನು ಆಯ್ಕೆ ಮಾಡಿರುವುದಾಗಿ ಕೇಂದ್ರ ವಾರ್ತಾ ಸಚಿವಾಲಯ ಪ್ರಕಟಿಸಿದೆ. ಪ್ರಶಸ್ತಿ ಸೆ.23ಕ್ಕೆ ಪ್ರದಾನವಾಗಲಿದೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯ ಕ್ರಮದಲ್ಲೇ ಮೋಹನ್ ಲಾಲ್ಗೂ ಈ ಗೌರವ ಸಲ್ಲಲಿದೆ. ಮೋಹನ್ ಲಾಲ್ ಒಬ್ಬ ಅದ್ಭುತ ನಟ, ನಿರ್ದೇಶಕ, ನಿರ್ಮಾಪಕ ಎಂದು ವಾರ್ತಾ ಇಲಾಖೆ ಹೊಗಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಮೋಹನ್ ಲಾಲ್ ಶ್ರೇಷ್ಠತೆಯ ಶಿಖರಕ್ಕೇರಿದ್ದಾರೆ. ಬಹುಮುಖ ಪ್ರತಿಭೆ. ಹಲವು ದಶಕಗಳ ಕಾಲ ದುಡಿದ ಅನುಭವವಿದೆ. ಮಲ ಯಾಳಂ ಸಿನಿಮಾ, ನಾಟಕರಂಗವನ್ನು ಮುನ್ನಡೆಸುವ ದೀವಿಗೆಯಂತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಅದ್ಭುತ ನಟನಾ ಕೌಶಲ್ಯಕ್ಕೆ ಹೆಸರಾಗಿರುವ ಮೋಹನ್ ಲಾಲ್ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಒಟ್ಟು 325 ಸಿನಿಮಾಗಳಲ್ಲಿ ನಟಿಸಿದ್ದಾರೆ ವೃಷಭ ಅವರ ಹೊಸ ಚಿತ್ರ.