ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯದಲ್ಲಿ ಸೆ.22 ರಿಂದ ಪ್ರಾರಂಭವಾಗಿರುವ ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (Socio-educational survey) ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ಜನಾಂಗದವರು ಸಮೀಕ್ಷೆಯ ವೇಳೆ ಕಾಲಂ ನಂ. 8 ರಲ್ಲಿ (ಧರ್ಮದ ಕಾಲಂನಲ್ಲಿ) ಹಿಂದೂ ಎಂದು ಬರೆಯಿಸಬೇಕೆಂದು ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ಸಂಘದ ರಾಜ್ಯಾಧ್ಯಕ್ಷರಾದ ಎಸ್. ಪ್ರಕಾಶ್ ತಿಳಿಸಿದ್ದಾರೆ.
ಅವರು ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ಸಂಘದ ಕಾರ್ಯಾಲಯದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಈ ಚರ್ಚೆಯಲ್ಲಿ ಸಂಘದ ಗೌರವ ಕಾರ್ಯದರ್ಶಿಗಳು, ಖಜಾಂಚಿಗಳು, ಸಂಘದ ನಿರ್ದೇಶಕರುಗಳು ಹಾಗೂ ಜನಾಂಗದ ಗಣ್ಯರು ಮತ್ತು ಹಿರಿಯ ಬಂಧುಗಳು ನೀಡಿದ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಮೀಕ್ಷೆಯ ವೇಳೆ ಜನಾಂಗದವರೆಲ್ಲರು ಕಾಲಂ ನಂ. 8 ರಲ್ಲಿ (ಧರ್ಮದ ಕಾಲಂನಲ್ಲಿ) ಹಿಂದೂ ಕೋಡ್ ನಂ. 1 ಎಂದು, ಕಾಲಂ ನಂ. 9 ರಲ್ಲಿ (ಜಾತಿ ಕಾಲಂನಲ್ಲಿ) ಲಿಂಗಾಯತ ಕೋಡ್ ನಂ. ಎ-0832 ಎಂದು, ಕಾಲಂ ನಂ. 10 ರಲ್ಲಿ (ಉಪಜಾತಿಯ ಕಾಲಂನಲ್ಲಿ) ಶಿವಾಚಾರ ನಗರ್ತ ಕೋಡ್ ನಂ. ಎ1316 ಎಂದು, ಬರೆಯಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.