Dr. S.L. Bhyrappa departure feels like a broken emotional thread: Banu Mushtaq

ಡಾ.ಎಸ್.ಎಲ್. ಭೈರಪ್ಪ ಅಗಲಿಕೆ ಭಾವತಂತು ತುಂಡಾದಂತೆ ಭಾಸವಾಗುತ್ತಿದೆ: ಬಾನು ಮುಷ್ತಾಕ್ ಸುದೀರ್ಘ ಸಂತಾಪ ಸಂದೇಶ

ಬೆಂಗಳೂರು: ಕನ್ನಡದ ಶ್ರೇಷ್ಠ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ (S.L. Bhyarappa) ಅಗಲಿಕೆಗೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ (Cmsiddaramaiah), ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D. Deve Gowda), ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಸೇರಿದಂತೆ ಅನೇಕ ಗಣ್ಯರ ಸಂತಾಪ ಸೂಚಿಸಿದ್ದಾರೆ.

ಅಂತಿಮ ದರ್ಶನ

ಡಾ. ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನ ಪಡೆಯಲು ಬೆಳಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಪೂರ್ಣಿಮಾ ಥಿಯೇಟರ್ ರಸ್ತೆ ಹಾಗೂ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಮುಖ್ಯ ಪ್ರವೇಶ ದ್ವಾರದ ಮೂಲಕ ಒಳಗೆ ಬಂದು ಅಂತಿಮ ದರ್ಶನ ಪಡೆದ ನಂತರ. ಟೌನ್ ಹಾಲ್ ಗೇಟ್ ಮೂಲಕ ಹೊರಗೆ ಹೋಗಲು ಅವಕಾಶ ಕಲ್ಪಿಸಿದೆ.

ಅಂತ್ಯಕ್ರಿಯೆ

ಪದ್ಮಭೂಷಣ ಪುರಸ್ಕೃತ, ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಅಕ್ಷರ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಎಸ್ ಎಲ್ ಭೈರಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಎಸ್ ಎಲ್ ಭೈರಪ್ಪ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ ನಡೆಸಕಲಾಗುತ್ತದೆ ಎಂದು ನವಸಮಾಜಕ್ಕೆ ಭೈರಪ್ಪ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಎಸ್ ಎಲ್ ಭೈರಪ್ಪರ ಅಗಲಿಕೆಗೆ ಬಾನು ಮುಷ್ತಾಕ್ ಸುದೀರ್ಘ ಸಂತಾಪ ಸಂದೇಶ

ಆವರಣ ಬರೆಯುವುದಕ್ಕೆ ಮುಂಚಿತವಾಗಿ ಎಸ್ ಎಲ್ ಭೈರಪ್ಪನವರು ಹಾಸನದಲ್ಲಿ ಒಂದು ಸಾಹಿತ್ಯಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದರು. ನಾನು ಕಾರ್ಯಕ್ರಮಕ್ಕೆ ತಡವಾಗಿ ಹೋದೆ, ಆಗ ಅಲ್ಲಿದ್ದ ಕೆಲವರು ಭೈರಪ್ಪನವರು ನನ್ನ ಬಗ್ಗೆ ಒಂದೆರಡು ಸಾರಿ ವಿಚಾರಿಸಿದರು ಎಂದು ಸಂದೇಶವನ್ನು ಕೊಟ್ಟರು.

ಕಾರ್ಯಕ್ರಮ ಮುಗಿದ ನಂತರ ನಾನು ಅವರನ್ನು ಸಂಪರ್ಕಿಸಿದೆ. ಆಗ ಅವರು ನನ್ನೊಡನೆ ಹೇಳಿದರು,” ನಾನು ನಿಮ್ಮ ಮನೆಗೆ ಬರಬೇಕೆಂದಿದ್ದೇನೆ” ಎಂದು.” ಬನ್ನಿ” ಎಂದು ಕರೆದೆ.” ಈಗಲೇ ಬರುವುದಿಲ್ಲ ಆದರೆ ನಾನು ಒಂದು ವಾರದ ಮಟ್ಟಿಗೆ ಬಂದು ನಿಮ್ಮ ಮನೆಯಲ್ಲಿಯೇ ಉಳಿಯುತ್ತೇನೆ” ಎಂದರು. ನನಗೆ ಗಲಿಬಿಲಿಯಾದದ್ದಂತೂ ನಿಜ. ನಂತರ ನಾನು ಆ ವಿಷಯವನ್ನು ಮರೆತೆ ಬಿಟ್ಟೆ.

ಸುಮಾರು ಒಂದು ತಿಂಗಳ ನಂತರ ನನ್ನ ಲ್ಯಾಂಡ್ಲೈನ್ ಗೆ ಒಂದು ಫೋನ್ ಬಂದಿತ್ತು. ಭೈರಪ್ಪನವರು ಫೋನ್ ಮಾಡಿದ್ದರು. ಮತ್ತು ತಾವು ಇಂತಹ ದಿನ ಬರುವುದಾಗಿ ನನಗೆ ಮಾಹಿತಿ ನೀಡಿದರು. ನನಗೆ ಸಿಕ್ಕಾಪಟ್ಟೆ ಗಾಬರಿಯಾಯಿತು. ಅವರಿಗಾಗಿ ನಾನು ಯಾವ ವ್ಯವಸ್ಥೆಯನ್ನು ಮಾಡಬೇಕು ಎಂಬುದೇ ನನಗೆ ತೋಚದಂತಾಯಿತು.

ಆಗ ನನ್ನ ಮೂವರು ಹೆಣ್ಣು ಮಕ್ಕಳು ಕೂಡ ಅವಿವಾಹಿತರಾಗಿದ್ದರು ಮತ್ತು ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಮಗ ತಾಹೇರ್ ಹೈಸ್ಕೂಲಿನಲ್ಲಿ ಓದುತ್ತಿದ್ದ. ಹಿರಿಯವಳಾದ ಸಮೀನಾ ಮೈಸೂರು ಯುನಿವರ್ಸಿಟಿಯಲ್ಲಿ ಚಿನ್ನದ ಪದಕವನ್ನು ಪಡೆದಿತ್ತು ನಂತರ ಏಕಕಾಲದಲ್ಲಿ ಐಎಎಸ್ ಮತ್ತು ಕೆ ಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಗಳೆಲ್ಲಾ ಮನೆಯಲ್ಲಿಯೇ ಇದರಿಂದ ಮನೆಯಲ್ಲಾ ಗಲಗಲ ಎನಿಸುತ್ತಿತ್ತು. ಆದರೆ ನನಗೆ ಆತಂಕವಾಗಿದ್ದು ಅವರಿಗಾಗಿ ನಾನು ಪ್ರಚಾರದ ವ್ಯವಸ್ಥೆಯನ್ನು ಹೇಗೆ ಮಾಡಬೇಕು ಎಂದು. ಹೀಗಾಗಿ ನಾನು ಅವರನ್ನೇ ಕೇಳುವುದು ಉತ್ತಮ ಎಂದು ಭಾವಿಸಿ ಮತ್ತೆ ನಾನೇ ಅವರಿಗೆ ಫೋನ್ ಮಾಡಿ ಅವರಿಗಾಗಿ ನಾನು ಏನು ವ್ಯವಸ್ಥೆಯನ್ನು ಮಾಡಬೇಕು ಎಂದು ಕೇಳಿದೆ, ಅದಕ್ಕೆ ಅವರು ಬಹಳ ಸರಳವಾಗಿ ತಾವು ನಾನ್ ವೆಜ್ ಆಹಾರ ಅಭ್ಯಾಸಕ್ಕೆ ಒಗ್ಗಿಕೊಂಡಿಲ್ಲ ಎಂದು ತಿಳಿಸಿ ವೆಜಿಟೇರಿಯನ್ ಮನೆ ಊಟವನ್ನು ತಮಗೆ ಮಾಡಬಹುದು ಎಂದು ತಿಳಿಸಿದರು. ನಮ್ಮ ಮನೆಯಲ್ಲಿ ನಮ್ಮ ಜೊತೆಯಲ್ಲಿ ಅಡಿಗೆ ಮನೆಯ ಊಟವನ್ನೇ ತಾವು ಕೂಡ ಸೇವಿಸುವುದಾಗಿ ನನಗೆ ಸಮಾಧಾನದಿಂದ ಉತ್ತರಿಸಿದರು.

ಹೀಗಾಗಿ ಅವರು ಬರುವುದಕ್ಕೆ ಒಂದು ವಾರ ಮುಂಚಿತವಾಗಿಯೇ ನಾನು ನನ್ನ ಫ್ರಿಜ್ ಅನ್ನು ಖಾಲಿ ಮಾಡಿದೆ. ಹಾಸನದ ನಳನಳಿಸುವ ತಾಜಾ ತರಕಾರಿಗಳಿಂದ ತುಂಬಿಸಿದೆ. ಮತ್ತು ಮೀನು, ಚಿಕನ್ ಮತ್ತು ಮಟನ್ ಅನ್ನು ಫ್ರಿಜ್ ನಿಂದ ಹೊರ ತೆಗೆದು ಬಳಸಿದೆ ಮತ್ತೆ ಅವುಗಳನ್ನು ಖರೀದಿಸಲಿಲ್ಲ. ಎಲ್ಲರಿಗಿಂತ ಹೆಚ್ಚು ತಕರಾರು ತೆಗೆದವನೇ ಮಗ. ಏಕೆಂದರೆ ಮೂರು ಹೊತ್ತು ಕೂಡ ನಾನ್ ವೆಜ್ ತಿನ್ನುತ್ತಿದ್ದ ಅವನಿಗೆ ಒಂದು 15 ದಿನಗಳ ಕಾಲ ಅವನ ಆಯ್ಕೆಯ ಆಹಾರ ಸಿಗುವುದಿಲ್ಲ ಎಂಬುದು ಅವನಿಗೆ ಇಷ್ಟವಾಗಲಿಲ್ಲ.

ಎಲ್ಲಾ ರೀತಿಯ ಕ್ಯಾತೆ ತೆಗೆದು ಅವು ಯಾವುವು ಕೂಡ ನಿಲ್ಲಲಿಲ್ಲ ಎಂದು ಅವನಿಗೆ ಅರಿವಾದ ನಂತರ ಅವರ ಸಾಹಿತ್ಯದ ಬಗ್ಗೆ ತಕರಾರು ತೆಗೆದ. ಅಂದರೆ ನನ್ನ ಮತ್ತು ಅವನ ನಡುವೆ ಭೈರಪ್ಪನವರ ಬರವಣಿಗೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅವನ ಅಕ್ಕಂದಿರು ಕೂಡ ನಡುನಡುವೆ ಮೂಗು ತೋರಿಸಿದರು.

ಅವನ ಅಬ್ಜೆಕ್ಷನ್ ಅನ್ನು ಸರ್ವನಾಮ ಮತದಿಂದ ತಳ್ಳಿಹಾಕಿ ವೋಟಿಂಗ್ ಹಾಕದೆಯೂ ಬಹುಮತದಿಂದ ಕರಾವು ಪಾಸಾಗಿ ಭೈರಪ್ಪನವರ ಆತಿತ್ಯವನ್ನು ನಿರ್ವಹಿಸಲು ಎಲ್ಲರೂ ತಯಾರಾದರು. ತಾ ಹೇರ್ ಒಂದು ವಾರದ ಮಟ್ಟಿಗೆ ತನ್ನ ಅಜ್ಜಿಯ ಮನೆಗೆ ಅಂದರೆ ನನ್ನ ತಾಯಿಯ ಮನೆಗೆ ಶಿಫ್ಟ್ ಆಗುವುದಾಗಿ ಹೇಳಿ ನನ್ನನ್ನು ಬೆದರಿಸಲು ಪ್ರಯತ್ನ ಪಟ್ಟ. ಸಮೀನಾ ಅವನ ಬ್ಯಾಗ್ ಪ್ಯಾಕ್ ಮಾಡಿದಳು ಲುಬ್ನಾ ಅವನ ಪುಸ್ತಕಗಳನ್ನು ರೆಡಿ ಮಾಡಿಕೊಟ್ಟಳು ಆಯಶ ಕಿಕಿ ಎಂದು ನಗುತ್ತಾ ಅವನನ್ನು ಕಿಚಾಯಿಸಿದಳು. ಕೊನೆಗೂ ಅವನು ತನ್ನ ಅಬ್ಜೆಕ್ಷನ್ನು ಮತ್ತು ಬೆದರಿಕೆಗಳನ್ನು ಹಿಮ್ ಪಡೆದು ವಿಧೇಯ ಮಗನಂತೆ ಭೈರಪ್ಪನವರ ಆಗಮನವನ್ನು ಎದುರು ನೋಡತೊಡಗಿದ.

ಭೈರಪ್ಪನವರು ನಮ್ಮ ಮನೆಗೆ ಬಂದರು. ಆರಂಭದ ಕೆಲವು ಮುಜುಗರಗಳನ್ನು ಬಿಟ್ಟರೆ ನನಗೆ ಹೆಚ್ಚಿನ ಸಂಕೋಚಗಳೇನು ಆಗಲಿಲ್ಲ. ನನ್ನ ಅಡಿಗೆಯ ಸಹಾಯಕ್ಕೆ ಶಬಾನ ಸಸ್ಯಹಾರಿ ಅಡುಗೆಯನ್ನೇ ಮಾಡಲು ಸಂತೋಷವಾಗಿ ಒಪ್ಪಿಕೊಂಡಳು.

ಭೈರಪ್ಪನವರು ಕೂಡ ತಾವು ಬರೆಯಲಿರುವ ಕಾದಂಬರಿ ಒಂದಕ್ಕೆ ಹಿನ್ನೆಲೆಯಾಗಿ ಮಾಹಿತಿ ಸಂಗ್ರಹಣ ಮಾಡುವ ಸಲುವಾಗಿ ನಮ್ಮ ಮನೆಗೆ ಬಂದಿರುವುದಾಗಿ ಹೇಳಿದರು. ಮುಸ್ಲಿಂ ಸಾಂಸ್ಕೃತಿಕ ಹಿನ್ನಲೆಯ ಮನೆಯ ವಾತಾವರಣ ತಾವು ಅಬ್ಯಸಿ ಸಬೇಕಾಗಿದೆ ಎಂತಲೂ ಮತ್ತು ಮುಸ್ಲಿಂ ಕುಟುಂಬದ ನಡವಳಿಕೆಗಳನ್ನು ಕೂಡ ತಾವು ಅವಲೋಕಿಸಬೇಕಾಗಿದೆ ಎಂತಲೂ ಆ ಕಾರಣಕ್ಕೆ ನಮ್ಮ ಮನೆಗೆ ಬಂದಿರುವುದಾಗಿಯೂ ಅವರು ಹೇಳಿದರು. ನಾನು ನಕ್ಕು ಬಿಟ್ಟೆ ಮತ್ತು ಅಂತಹ ವಾತಾವರಣ ನಮ್ಮ ಮನೆಯಲ್ಲಿ ಅವರಿಗೆ ಸಿಗುವುದಿಲ್ಲವೆಂತಲೂ ಮತ್ತು ಅಂತಹ ಮತ್ತು ನೈಜ ವಾತಾವರಣದ ಅಗತ್ಯ ಅವರಿಗೆ ಇದ್ದಲ್ಲಿ ಅಂತಹ ಮನೆಗಳಲ್ಲಿ ಭೈರಪ್ಪನವರನ್ನು ಸ್ವಾಗತಿಸುವುದಿಲ್ಲವೆಂತಲೂ ನಾನು ಅವರಿಗೆ ಹೇಳಿದೆ. ಹೀಗಾಗಿ ಅವರು ನಮ್ಮ ಮನೆಯಲ್ಲಿ ಉಳಿಯುವುದಾಗಿ ನಿರ್ಧರಿಸಿದರು.

ಶವನಾಳ ಅಡುಗೆ ಅವರಿಗೆ ಇಷ್ಟವಾಯಿತು, ತರಕಾರಿ ಪಲ್ಯ ಸೊಪ್ಪಿನ ಸಾರು ಕೂಡ ವಿಶೇಷವಾಗಿ ಇಷ್ಟವಾಯಿತು. ಮಾರನೇ ದಿನ ನನಗೆ ಆಲೂರು ಸಾಹಿತ್ಯ ಸಮ್ಮೇಳನದಲ್ಲಿ ಒಂದು ಮುಖ್ಯವಾದ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಬಂದ ನಾನು ಬರುವಾಗಲೇ ಜ್ವರವನ್ನು ಹೊತ್ತು ತಂದೆ ಹೀಗಾಗಿ ನಾನು ಜ್ವರದಿಂದ ನರಳುತ್ತಾ ಮಲಗಿರುವಾಗ ಸಮೀನಾಳೆ ಭೈರಪ್ಪನವರ ದೇಖು ರೇಕು ಗಳನ್ನು ನೋಡತೊಡಗಿದಳು.

ಭೈರಪ್ಪನವರಿಗೆ ಮುಚ್ಚೆ ಮರ ಖಬರ ಸ್ಥಾನವನ್ನು ನೋಡಬೇಕಿತ್ತು ಹಾಗೂ ಮಸೀದಿಯನಕೇಳಿದರು” ನೋಡಬೇಕಿತ್ತು. ಒಂದು ದಿನ ಬೆಳಗಿನ ಹೊತ್ತು ಮುಸ್ತಾಕ್ ಭೈರಪ್ಪನವರನ್ನು ಹಬ್ರಸ್ತಾನಿಗೆ ಕರೆದುಕೊಂಡು ಹೋದರು. ಭೈರಪ್ಪನವರು ಹೊರಗಿನಿಂದ ಖಬ್ರಸ್ತಾನನ್ನು ನೋಡಿದರೂ ಮತ್ತು ಒಳಗಡೆ ಕೂಡ ಗೋರಿಗಳ ನಡುವಿನಿಂದ ಹಾದು ಹೋಗಿ ಮೂಲೆ ಮೂಲೆಯಲ್ಲೂ ಸಂಚರಿಸಿ ಬಂದರು. ಆಮೇಲೆ ಅವರು ಮುಸ್ತಾಕ್ ಅನ್ನು ಕೇಳಿದರು “ಇಲ್ಲಿ ಗೋರಿಗಳ ತಲದಸೆಯಲ್ಲಿ ಗ್ರನೆಟೇನ ಕಲ್ಲುಗಳನ್ನು ನಿಲ್ಲಿಸಿದ್ದಾರಲ್ಲ ಅದನ್ನು ಉರ್ದುವಿನಲ್ಲಿ ಏಕೆ ಬರೆದಿದ್ದಾರೆ?” ಮುಸ್ತಾಕ್ ತಪ್ಪಿಬಾಗಿ ಹೋದರು. ಅದಕ್ಕೆ ಏನು ಉತ್ತರಿಸಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಹೀಗಾಗಿ ಅವರು ಮನೆಗೆ ಮರಳಿ ಬಂದ ನಂತರ ನನಗೆ ಭೈರಪ್ಪನವರ ಪ್ರಶ್ನೆಯನ್ನು ಒಪ್ಪಿಸಿದ ಮುಷ್ತಾಕ್” ಅದಕ್ಕೆ ನೀವೇ ಉತ್ತರ ಹೇಳಿ “ಎಂದು ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದರು. ಹಾಗೂ ಭೈರಪ್ಪನವರು ಹಬ್ಬದ ಸನ್ನಿವೇಶಗಳನ್ನು ತಮ್ಮ ನೋಟ್ ಬುಕ್ ನಲ್ಲಿ ಬರೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಆಮೇಲೆ ಭೈರಪ್ಪನವರು ಮಸೀದಿಗೆ ಪ್ರೀತಿ ಕೊಡಬೇಕು ಎಂದು ಕೇಳಿದರೆ ಮೇರೆಗೆ ಮುಸ್ತಾಕ್ ಮತ್ತೆ ಹಾಸನದ ಹೊಳೆನರಸೀಪುರ ರಸ್ತೆಯಲ್ಲಿ ಬರೆದುಕೊಳ್ಳುತ್ತಿದ್ದರು ಆಡಳಿತ ಮಂಡಳಿಯವರಲ್ಲಿ ವಿಷಯ ತಿಳಿಸಿದ ಮೇರೆಗೆ ಸದರಿಯವರು ಒಪ್ಪಿದರು.

ಮುಕ್ತಾಕ್ ಮತ್ತು ಭೈರಪ್ಪನವರು ಒಂದು ಸಾರಿ ನಮಾಜ್ನ ಟೈಮಲ್ಲಿ ಆ ಮಸೀದಿಗೆ ಹೋದರು. ಅಲ್ಲಿ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶವಿತ್ತು. ಅವರಿಗಾಗಿ ಪ್ರತ್ಯೇಕ ಹಾಲಲ್ಲಿ ನಮಾಜ್ ಕಾಗೆ ವ್ಯವಸ್ಥೆ ಮಾಡಿದ್ದರು. ಅದೇ ನಾನು ಆಗ ಶುಕ್ರವಾರ ಮಧ್ಯಾಹ್ನ ಮಾತ್ರ ಆ ಮಸೀದಿಯಲ್ಲಿ ನಮಾಜ್ ನ ಸಲುವಾಗಿ ಹೋಗುತ್ತಿದ್ದೆ. ಆದುದರಿಂದ ಮುಷ್ತಾಕ್ ನವರು ತಮ್ಮ ಜೊತೆಯಲ್ಲಿ ಕರೆದುಕೊಂಡು ಆ ಮಸೀದಿಗೆ ಹೋದರು. ಭೈರಪ್ಪನವರು ಕೈಕಾಲು ತೊಳೆದು ಮಸೀದಿಯೊಳಗೆ ಹೋಗಿ ತೇಜಮಾತ್ ನವರು ನಮ್ಮ ಮಾಡುತ್ತಿದ್ದಾಗ ಮಸೀದಿ ಒಳಗಡೆ ಕುಳಿತಿದ್ದರು ಮತ್ತು ಸಕಲವನ್ನು ಕೂಡ ತಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು.

ನಂತರ ಭೈರಪ್ಪನವರು ಮುಸ್ಲಿಮರ ವಿದ್ಯಾಸಂಸ್ಥೆಯನ್ನು ನೋಡಲು ಬಯಸಿದರು. ಹೀಗಾಗಿ ಮುಷ್ತಾಕ್ ಅವರನ್ನು ಆಲೂರಿನ ದೇವರು ಏನು ಮನ್ಸೂರ ತೆಗೆ ಕರೆದುಕೊಂಡು ಹೋದರು. ಅಲ್ಲೇ ಇಡೀ ಸಂಸ್ಥೆಯ ತಾಂಗಣದಲ್ಲಿ ಸುತ್ತಾಡಿದ ಭೈರಪ್ಪನವರು ಅಲ್ಲಿನ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗಾಗಿ ಮಾಡಿದ್ದ ವ್ಯವಸ್ಥೆ ಹಾಗೂ ಮತ್ತು ಖಾಕ್ರಮ ಮೊದಲಾದವುಗಳನ್ನೆಲ್ಲ ಪರಿಶೀಲನೆ ಮಾಡಿ ತಮ್ಮ ನೋಟ್ ಬುಕ್ ನಲ್ಲಿ ಬರೆದುಕೊಂಡರು.

ಆಗ ಮೊಬೈಲ್ ಮತ್ತು ಅದರ ಗೀಳು ಯಾರಿಗೂ ಅಂಟಿಕೊಂಡಿರಲಿಲ್ಲ. ರಾತ್ರಿ ಊಟ ಟೇಬಲ್ ನಲ್ಲಿ ಮತ್ತು ಊಟ ವಾದ ನಂತರ ಒಳ್ಳೆಯ ಚರ್ಚೆ ನಡೆಯುತ್ತಿತ್ತು. ಭೈರಪ್ಪ ನವರು ಮರ ಇತಿನಿ ತೇರಿವಾಜು ಆಲೋಚನಾ ಕ್ರಮದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು ನಾನು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೆ. ನಂತರ ಅವರು ತತ್ವಶಾಸ್ತ್ರದ ಕ್ಲಾಸಖಿಯ ಮೂಲಕ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದರು. ಆಗ ಸಮೇನ ತನ್ನ ಸ್ಪರ್ಧಾತ್ಮಕ ಪರೀಕ್ಷೆಗಳ ಸಲುವಾಗಿ ಇಂಡಿಯನ್ ಹಿಸ್ಟರಿ ಅನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದಳು. ಹೀಗಾಗಿ ಅವಳು ಅವರ ಅನೇಕ ಸಂದೇಹಗಳಿಗೆ ಇಂಡಿಯನ್ ಹಿಸ್ಟರಿ ಯ ದೃಷ್ಟಾಂತಗಳ ಮೂಲಕ ವಿವರಣೆ ನೀಡುತ್ತಿದ್ದಳು. ಅವರಿಬ್ಬರ ನಡುವೆ ನಡೆಯುತ್ತಿದ್ದ ಚರ್ಚೆಗಳನ್ನು ಹೇಳುವುದೇ ಒಂದು ಅದ್ಭುತವಾದ ಸಂದರ್ಭವಾಗಿತ್ತು. ಹೀಗೆ ಒಂದು ವಾರದವರೆಗೂ ನಮ್ಮಗಳ ಬಾಂಧವ್ಯ ಮುಂದುವರೆಯಿತು. ಭೈರಪ್ಪನವರ ಕುತೂಹಲದ ಕಣ್ಣುಗಳಿಗೆ ಮುಸ್ಲಿಂ ಹಿನ್ನೆಲೆಯ ಬದುಕು ಅಗೋಚರವಾಗಿಯೇ ಉಳಿಯಿತು. ಫಿಲಂ ಸಮುದಾಯದ ಒಳ ಹೊರಗನ್ನು ಒಂದು ವಾರದೊಳಗೆ ತಿಳಿಯುವುದು ಅಸಾಧ್ಯದ ಕೆಲಸ. ಆದರೂ ಕೂಡ ಭೈರಪ್ಪನವರ ತೀವ್ರ ಕುತೂಹಲ ಮತ್ತು ವಿಷಯ ಸಂಗ್ರಹಣೆಯ ದಾಹ ಹಾಗೂ ಅಪರಿಚಿತ ಲೋಕಗಳ ಪರಿಚಯವನ್ನು ಗಳಿಸುವ ತೀವ್ರತೆ ವಿಶಿಷ್ಟವಾಗಿತ್ತು. ಆದರೆ ನನಗೆ ಅನಿಸುತ್ತಿತ್ತು ಅವರು ಹೊರನೋಟದ ತೊಗಟೆಯ ಅರಿವನ್ನು ಮಾತ್ರ ಪಡೆಯುತ್ತಿದ್ದಾರೆ. ಮುಸ್ಲಿಂ ಸಮುದಾಯದ ಪರಿಚಯ ಮತ್ತು ಚಿಂತನ ಕತೆಗೆದುಕೊಂಡರು.

ಅನುಭವವನ್ನು ಪಡೆಯಲು ಎಲ್ಲೋ ಸೋಲುತ್ತಿದ್ದಾರೆ ಅಂತ ಅನಿಸುತ್ತಿತ್ತು. ಹಾಗೂ ಈ ಎಲ್ಲ ಮಾಹಿತಿಯನ್ನು ಅವರು ಹೇಗೆ ಬಳಕೆ ಮಾಡಬಹುದು ಮತ್ತು ಅವರ ಗ್ರಹಿಕೆ ಮತ್ತು ಬರವಣಿಗೆ ಮುಸ್ಲಿಂ ವಿರೋಧಿ ನಿಲುವನ್ನು ವ್ಯಕ್ತಪಡಿಚಿದಾಗ ನನ್ನ ಬಗ್ಗೆ ಸಮುದಾಯದ ನಿಲುವು ಏನಾಗಬಹುದು ಎಂಬುದರ ಬಗ್ಗೆ ಕೂಡ ನನಗೆ ಆಲೋಚನೆ ಉಂಟಾಗುತ್ತಿತ್ತು, ಆದರೆ ನಾನು ಎಲ್ಲಾ ಆಲೋಚನೆಗಳನ್ನು ಕೂಡ ಬದಿಗೊತ್ತಿ ಭೈರಪ್ಪ ನವರ ಜೊತೆಯಲ್ಲಿ ಅತ್ಯಂತ ಸಹಜವಾಗಿ ವರ್ತನೆ ಮಾಡಿದೆ ಮತ್ತು ನನ್ನ ಕುಟುಂಬ ಕೂಡ ಇದಕ್ಕೆ ಪೂರಕವಾಗಿ ಸಂಪೂರ್ಣ ಸಹಕಾರವನ್ನು ಮತ್ತು ಆರಂಭದಿಂದಲೇ ಕಿರಿಕಿರಿ ವ್ಯಕ್ತಪಡಿಸುತ್ತಿದ್ದ ಮಧ್ಯ ಮಧ್ಯದಲ್ಲಿ ಹೋಗಿ ನನ್ನ ತಾಯಿಯ ಮನೆಗೆ ಹೋಗಿ ಗಡದ್ದಾಗಿ ಬಿರಿಯಾನಿ ಉಂಡು ಚಿಕನ್ ಕಬಾಬ್ ತಿಂದು ಆದರೂ ಮುನಿಸಿಕೊಂಡು ನನ್ನಿಂದಲೂ ಭೈರಪ್ಪನವರಿಂದಲೂ ದೂರವಾಗಿಯೇ ಉಳಿದ.

ನಂತರ ಆವರಣ ಪ್ರಕಟವಾಯಿತು. ಆವರಣದಲ್ಲಿ ಭೈರಪ್ಪನವರು ರಿಸರ್ಚ್ ಮಾಡಿದಂತೆಯೇ ತಮ್ಮ ಕೆಲವು ಪೂರ್ವ ನಿರ್ಧರಿತ ಪ್ರಮೇಯಗಳಿಗೆ ಅನುಕೂಲವಾಗುವಂತಹ ಮತ್ತು ತಕ್ಕದಾದ ನಿದರ್ಶನಗಳನ್ನೇ ಕೊಟ್ಟು ಮುಸ್ಲಿಂ ಸಮುದಾಯದ ರಾಕ್ಷಸೀಕರಣದ ಬಿಂಬಕ್ಕೆ ಪೂರಕವಾದ ಬರವಣಿಗೆಯನ್ನು ಕೊಟ್ಟರು. ಆದರೆ ಅವರು ಸದರಿ ಕಾದಂಬರಿಯ ಪೀಠಿಕೆಯಲ್ಲಿ ಒಬ್ಬ ಸಹೋದರಿಯ ಮನೆಯಲ್ಲಿ ಉಳಿದುದಾಗಿ ತಿಳಿಸಿದರು ಮತ್ತು ಹೆಸರನ್ನು ಬರೆಯಲಿಲ್ಲ ಹೀಗಾಗಿ ಆ ಸಹೋದರಿ ಯಾರು ಎಂಬುದು ತಿಳಿಯದೆ ಊಹಾಪೋಹದ ಮಟ್ಟದಲ್ಲಿಯೇ ಉಳಿಯಿತು. ಆದರೆ ಆ ಸಂದರ್ಭದಲ್ಲಿ ನಮ್ಮ ಮನೆಗೆ ಏಕ ಲೇಖಕ ಲೇಖಕರು ಬಂದು ಅವರೊಡನೆ ಫೋಟೋಗಳನ್ನು ತೆಗೆದುಕೊಂಡರು. ಮತ್ತು ಕ್ರಮೇಣ ಎಲ್ಲರಿಗೂ ಆವರಣ ಬರವಣಿಗೆಯ ಮುಂಚಿತವಾಗಿ ಅವರು ನಮ್ಮ ಮನೆಯಲ್ಲಿ ತರು ಎಂಬ ವಿಷಯವು ತಿಳಿದು ಬಂತು.

ಆವರಣದ ಬರವಣಿಗೆಯು ತೀವ್ರ ವಿವಾದ ಪದ ವಾಗುತ್ತದೆ ಎಂಬುದು ಅವರ ನಿರೀಕ್ಷೆಯಾಗಿತ್ತು. ನನಗೆ ಅನಿಸುತ್ತೆ ವಿವಾದವನ್ನು ಬಯಸಿದ್ದರು ಎಂದು. ಆದರೆ ಅದು ವಿವಾದದ ಸ್ವರೂಪವನ್ನು ಪಡೆಯಲಿಲ್ಲ. ಬದಲಿಗೆ ಗೌರಿ” ಆವರಣ ಒಂದು ವಿಕೃತಿಅನಿಸಿದ್ದು ಕೃತಿಯನ್ನು ಪ್ರಕಟ ಮಾಡಿದರು. ಅದರಲ್ಲಿ ಆವರಣದ ಬಗ್ಗೆ ಅನೇಕ ಲೇಖಕರ ವಿಮರ್ಶೆಗಳು ಇವೆ.

ನನಗೆ ಅನಿಸಿದ್ದು ಭೈರಪ್ಪನವರು ಊಟ ತಿಂಡಿಯ ಆಹಾರ ಅಭ್ಯಾಸದಲ್ಲಿ ಕಠೋರ ನಿಯಮವನ್ನೇನು ಪಾಲಿಸುತ್ತಿರಲಿಲ್ಲ. ನನ್ನ ಬಾಲ್ಯಕಾಲದಿಂದಲೂ ನನಗೆ ಓದಿನ ರುಚಿ ಹತ್ತಿದ್ದು ಭೈರಪ್ಪನವರ ಬರವಣಿಗೆಯ ಮೂಲಕವೇ. ಅವರ ಓದುಗ ಬಳಗದ ಅತ್ಯಂತ ಲಾಯಲ್ ಆದ ಓದುಗಳಾಗಿದ್ದೆ ನಾನು. ಆದರೆ ಅವರ ಧೋರಣೆ ಬದ್ಧತೆ ಮತ್ತು ಪೂರ್ವಗ್ರಹ ಪೀಡಿತ ಆಲೋಚನಾ ಸರಣಿಯ ಪ್ರತಿಪಾದನೆಯ ನಂತರ ನಾನು ಅವರಿಗೆ ಪ್ರಿಯ ಓದುಗಳಾಗಿ ಉಳಿಯಲಿಲ್ಲ. ಬದಲಿಗೆ ಒಬ್ಬ ನುರಿತ ಲಾಯರ್ನಂತೆ ಕೆಲ ವಿಷಯಗಳನ್ನು ರೂಪಿಸಿಕೊಂಡು ಅದನ್ನು ಸಂಶೋಧನೆಯ ಮೂಲಕ ಅಗೆದು ತೆಗೆದ ಮಾಹಿತಿಯನ್ನು ಬಳಸಿ ಪ್ರಬುದ್ಧವಾಗಿ ನಿರೂಪಿಸುತ್ತಿದ್ದ ವಾದದ ಶೈಲಿಯಂತೆ ಕಂಡು ಬರುತ್ತಿದ್ದವು. ಅವರ ಸೃಜನಶೀಲತೆಯನ್ನು ಅಪಹರಿಸಿದವರ್ಯಾರು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಸೈದ್ಧಾಂತಿಕವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೂಡ , ಅವರನ್ನು ಕಂಡು ಮಾತನಾಡಿ ಚರ್ಚಿಸಿ ಅವರ ನೆನಪುಗಳು ನನ್ನ ಮನ ಪಟಲದಲ್ಲಿ ಉಳಿದು, ಇಂದು ಅವರು ಸ್ವರ್ಗಸ್ಥರಾದರು ಎಂಬ ವಿಷಯದಿಂದ ಒಂದು ಭಾವತಂತು ತುಂಡಾದಂತೆ ಭಾಸವಾಗುತ್ತಿದೆ. ನನಗೆ ಏನೋ ಖಾಸಗಿ ನಷ್ಟವಾದಂತೆ ಅನಿಸುತ್ತಿದೆ. ಭೈರಪ್ಪನವರಿಗೆ ನನ್ನ ಭಾವಪೂರ್ಣ ನಮನಗಳು ಎಂದಿರುವ ಬಾನು ಮುಷ್ತಾಕ್ ಅವರು ಅಂತಿಮವಾಗಿ ವ್ಯಾಕರಣ ದೋಷಗಳಿದ್ದರೆ ದಯವಿಟ್ಟು ಕ್ಷಮಿಸಿ. ಬೆಳಗ್ಗೆನಿಂದ ಬೆಳಗ್ಗೆನೇ ಇಂಟರ್ನೆಟ್ ಇಲ್ಲ. ಹೀಗಾಗಿ ಮೊಬೈಲ್ ನಲ್ಲಿ ಉಕ್ತ ಲೇಖನ ಹೇಳಿದ್ದೇನೆ ಎಂದಿರುವ ಯಥಾವತ್ ಸಂತಾಪ ಸಂದೇಶ ನೀಡಲಾಗಿದೆ.

ರಾಜಕೀಯ

ಹನುಮ ಜಯಂತಿಯಂದೇ ಸಿಎಂ ಸಿದ್ದರಾಮಯ್ಯ ಕೋಳಿ ಸಾರು ಸೇವನೆ; ಆರ್. ಅಶೋಕ್ ಕಿಡಿ

ಹನುಮ ಜಯಂತಿಯಂದೇ ಸಿಎಂ ಸಿದ್ದರಾಮಯ್ಯ ಕೋಳಿ ಸಾರು ಸೇವನೆ; ಆರ್. ಅಶೋಕ್ ಕಿಡಿ

ಕಾಂಗ್ರೆಸ್‌ ಸರ್ಕಾರ ರೈತರ ಸಮಸ್ಯೆ ಬಗೆಹರಿಸಿಲ್ಲ. ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ (Cmsiddaramaiah) ಹಾಗೂ ಡಿ.ಕೆ.ಶಿವಕುಮಾರ್‌ (D.K. Shivakumar) ತಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ಮಾಡಿದ್ದಾರೆ ಎಂದು ಪ್ರತಿಪಕ್ಷ

[ccc_my_favorite_select_button post_id="116948"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

[ccc_my_favorite_select_button post_id="116728"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!