ಧಾರವಾಡ: ತೀವ್ರ ಚರ್ಚೆಗೆ ಕಾರಣವಾಗಿರುವ ಯೂಟ್ಯೂಬ್ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಧಾರವಾಡದ ಸ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪನ (Mukaleppa) ಮೇಲೆ ಲವ್ ಜಿಹಾದ್ (Love Jihad), ಕಿಡ್ನಾಪ್ (kidnap) ಕೇಸ್ ದಾಖಲಾದ ಮೇಲೆ ಮೊದಲ ಬಾರಿಗೆ ಆತನ ಹೇಳಿಕೆಯ ವೀಡಿಯೋ ಇದೀಗ ವೈರಲ್ ಆಗಿದೆ.
ಹಿಂದೂ ಯುವತಿ ಗಾಯತ್ರಿ ಜಾಲಿಹಾಳ ಅವರನ್ನು ಮುಕಳೆಪ್ಪ ಮದುವೆಯಾದ ಸುದ್ದಿ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ಮೊದಲ ಬಾರಿಗೆ ಮುಕಳೆಪ್ಪ ಹೇಳಿಕೆಯ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಮುಕಳಪ್ಪ ಲವ್ ಜಿಹಾದ್ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಇದು ಲವ್ ಮ್ಯಾರೇಜ್ ಆಗಿದೆಯೇ ಹೊರತು ಲವ್ ಜಿಹಾದ್ ಅಲ್ಲ. ನಾನು ಮತಾಂತರ ಮಾಡಿಲ್ಲ ಎಂದು ಸ್ಪಷ್ಟಿಕರಣ ನೀಡಿದ್ದಾನೆ.
ತನ್ನ ಪತ್ನಿ ಗಾಯತ್ರಿ ಜೊತೆ ಕಾರಿನಲ್ಲಿ ಕುಳಿತುಕೊಂಡೇ ವೀಡಿಯೋ ಮಾಡಿರುವ ಮುಕಳೆಪ್ಪ ನಾನು ಯಾವುದೇ ರೀತಿಯ ಲವ್ ಜಿಹಾದ್ ಮಾಡಿಲ್ಲ. ಗಾಯತ್ರಿ ಯಾವ ಧರ್ಮದಲ್ಲಿ ಹುಟ್ಟಿದ್ದಾರೋ ಅದೇ ಧರ್ಮದಲ್ಲಿ ಮುಂದುವರೆಯುತ್ತಾರೆ. ನಾನೂ ಕೂಡ ಯಾವ ಧರ್ಮದಲ್ಲಿ ಹುಟ್ಟಿದ್ದೇನೋ ಅದೇ ಧರ್ಮದಲ್ಲಿ ಮುಂದುವರೆಯುತ್ತೇನೆ.
ನಾನು ಯಾವುದೇ ಮತಾಂತರ ಮಾಡಿಲ್ಲ. ಕರ್ನಾಟಕದಲ್ಲಿ ಹುಟ್ಟಿದ್ದೇನೆಂದರೆ ನಾನೂ ಕೂಡ ಕನ್ನಡಿಗ. ನಾನೂ ಕೂಡ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕಲಾವಿದರ ಮಧ್ಯೆ ಯಾವುದೇ ಜಾತಿ ತರಬೇಡಿ. ನಮ್ಮನ್ನು ಬದುಕಲು ಬಿಡಿ ಎಂದು ಹೇಳಿದ್ದಾನೆ.
ಇದೇ ವೇಳೆ ಮಾತನಾಡಿರುವ ಗಾಯತ್ರಿ ಯಾರೂ ನಮ್ಮ ಮೈಂಡ್ ವಾಷ್ ಮಾಡಿಲ್ಲ. ನಾವಿಬ್ಬರೂ ಒಪ್ಪಿ ಮದುವೆಯಾಗಿದ್ದೇವೆ. ಮೂರು ವರ್ಷದಿಂದ ನಾವಿಬ್ಬರೂ ಪ್ರೀತಿಸಿದ್ದೇವೆ. ನಮ್ಮನ್ನು ಬದುಕಲು ಬಿಡಿ ಎಂದು ಕೈಮುಗಿದು ಬೇಡಿಕೊಂಡಿದ್ದಾಳೆ.