ದೊಡ್ಡಬಳ್ಳಾಪುರ: ಮಂಜುಳ.ಜಿ ಅವರ ರಾಜೀನಾಮೆಯಿಂದ ತೆರವಾಗಿದ್ದ ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ (Heggadihalli GP) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಕಾರಿಯಾಗಿ ಮಿನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಮೃತ, ಪಿಡಿಒ ಸೌಮ್ಯ ಅವರ ನೇತೃತ್ವದಲ್ಲಿ ಇಂದು ಚುನಾವಣೆ ಪ್ರಕ್ರಿಯೆ ನಡೆಸಲಾಯಿತು
14 ಸದಸ್ಯತ್ವ ಬಲದ ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ 13 ಮಂದಿ ಸದಸ್ಯರು ಭಾಗವಹಿಸಿ ಗೂಳ್ಯ ಗ್ರಾಮದ ಸದಸ್ಯೆ ಮಂಜುಳಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ನೂತನ ಅಧ್ಯಕ್ಷೆ ಮಂಜುಳಮ್ಮ ಅವರಿಗೆ ಜೆಡಿಎಸ್ ಹಿರಿಯ ಮುಖಂಡರಾದ ಎ.ನರಸಿಂಹಯ್ಯ, ತೂಬಗೆರೆ ಹೋಬಳಿ ಅಧ್ಯಕ್ಷ ಜಗನ್ನಾಥ ಚಾರ್, ಟಿಎಪಿಎಂಸಿಎದ್ ಮಾಜಿ ಅಧ್ಯಕ್ಷ ಆನಂದ್, ಮುಖಂಡರಾದ ಮುರುಳಿ, ತಳವಾರ್ ನಾಗರಾಜ್, ಹರ್ಷ, ದೇವರಾಜ್, ಜಗನ್ನಾಥ್, ಶ್ರೀನಿವಾಸ್, ಜೆಡಿಎಸ್ ವಕ್ತಾರ ಕುಂಟನಹಳ್ಳಿ ಮಂಜುನಾಥ್ ಮತ್ತಿತರರು ಶುಭಕೋರಿದರು.