ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ವನ್ಯಜೀವಿಗಳ ಉಪಟಳ ರೈತರನ್ನು ಆತಂಕಕ್ಕೆ ಒಳಾಗುವಂತೆ ಮಾಡಿದೆ, ಬೆಳೆಯಲಾದ ಬೆಳೆಗಳ ಮೇಲೆ ನವಿಲು, ಕಾಡು ಹಂದಿ ದಾಳಿ ಒಂದೆಡೆಯಾದರೆ, ಚಿರತೆ, ಕರಡಿ ದಾಳಿ ಪ್ರಕರಣಗಳು ರೈತರನ್ನು ಕಂಗೆಡಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ ಸುಮಾರು 9 ಅಡಿ ಉದ್ದ, 20 ಕೆಜಿ ತೂಕದ ಬೃಹತ್ ಹೆಬ್ಬಾವು (Python) ಕಂಡು ಬಂದಿರುವುದು ರೈತರ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಹೌದು ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ಗ್ರಾಮದ ಅಡಿಕೆ ತೋಟದಲ್ಲಿ ಇಂದು ಹೆಜ್ಜಾಜಿ ಗ್ರಾಮದ ಯೋಗಿ ಎನ್ನುವವರು ಅಡಿಕೆ ಕೀಳಲು ಕೂಲಿ ಕಾರ್ಮಿಕರೊಂದಿಗೆ ತೆರಳಿದಾಗ ಬೃಹತ್ ಹೆಬ್ಬಾವು ಪತ್ತೆಯಾಗಿದೆ.
ಈ ಕುರಿತು ಉರಗ ರಕ್ಷಕ ನಾಗಾರಾಜ್ ಅವರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕೆಲಸ ಒತ್ತಡದಲ್ಲಿದ್ದ ಕಾರಣ ಅವರ ನಿತ್ರ ಮತ್ತೋರ್ವ ಉರಗ ರಕ್ಷಕ ರಾಮಾಂಜಿನಪ್ಪ ಅವರಿಗೆ ಮಾಹಿತಿ ನೀಡಿದ್ದು, ಅವರು ತಿಪ್ಪೂರಿಗೆ ತೆರಳಿ ಹಾವನ್ನು ರಕ್ಷಿಸಿದ್ದಾರೆ.
ಬಳಿಕ ಬೃಹತ್ ಹಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಮಾಕಳಿ ಬೆಟ್ಟದ ಅರಣ್ಯಕ್ಕೆ ಬಿಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.