ಬೆಂಗಳೂರು ಗ್ರಾಮಾಂತರ ಜಿಲ್ಲೆ: ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ 2025-26ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ ಅರ್ಹ ವಿವಿಧ ವೃತ್ತಿಪರ ಕುಶಲಕರ್ಮಿಗಳಿಗೆ (Professional artisans) ಉಚಿತವಾಗಿ ವಿದ್ಯುತ್ ಚಾಲಿತ ಹಾಗೂ ಸುಧಾರಿತ ಉಪಕರಣಗಳ ಸೌಲಭ್ಯವನ್ನು ಪಡೆಯಲು ಅನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವ ಹೊಲಿಗೆ ವೃತ್ತಿಯ ಮಹಿಳೆಯರು, ಬಡಗಿ, ಗಾರೆ ಮತ್ತು ದೋಬಿ ಕೆಲಸ ಮಾಡುವ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿಗಳು ತಮ್ಮ ಕಸುಬನ್ನು ಮುಂದುವರೆಸಲು ಹಾಗೂ ಇಲಾಖೆಯಿಂದ ಸೌಲಭ್ಯವನ್ನು ಪಡೆಯಲು ಸಂಬಂಧಪಟ್ಟ ಎಲ್ಲಾ ದಾಖಲೆಗಳೊಂದಿಗೆ ಅಧಿಕೃತ ಜಾಲತಾಣ https://bangalorerural.nic.in/en/ ನಲ್ಲಿ ಅಕ್ಟೋಬರ್ 06 ರೊಳಗೆ ಅಪ್ಲೋಡ್ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮೊದಲನೆ ಮಹಡಿ, KSTIDC ಗಾರ್ಮೆಂಟ್ ತರಬೇತಿ ಕಟ್ಟಡ, ಬಾಂಬೆ ರೇಯನ್ ಪ್ಯಾಕ್ಟರಿ ಬಳಿ, ಕೆ.ಐ.ಎ.ಡಿ.ಬಿ ಅಪ್ಪರೆಲ್ ಪಾರ್ಕ್ ದೊಡ್ಡಬಳ್ಳಾಪುರ ಇಲ್ಲಿಗೆ ಸಂಪರ್ಕಿಸಿಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.