ಮೈಸೂರು: ಸತತ 9 ದಿನಗಳಿಂದ ನಡೆಯುತ್ತಿದ್ದ ನಾಡಹಬ್ಬ ದಸರಾ ಅಂತಿಮಘಟ್ಟಕ್ಕೆ ಬಂದಿದೆ. ಬುಧವಾರ ಆಯುಧಪೂಜೆ (Ayudha Puja) ನಡೆಯಲಿದ್ದರೆ, ಗುರುವಾರ ವಿಜಯದಶಮಿ.
ಇತಿಹಾಸಪ್ರಸಿದ್ದ ಗಜಪಡೆ ಮೆರವಣಿಗೆಯಾದ ಜಂಬೂಸವಾರಿಗೆ ಮೈಸೂರು ನಗರ ಸಜ್ಜಾಗಿದೆ. ಅ.2ರಂದು ಮಧ್ಯಾಹ್ನ 1ರಿಂದ 1.18ರೊಳಗಿನ ಧನುಸ್ಸು ಲಗ್ನದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 4.42ರಿಂದ 5.06ರೊಳಗಿನ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ರಾತ್ರಿ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತಿನೊಂದಿಗೆ ದಸರಾ ಮುಕ್ತಾಯವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇಗುಲಗಳಲ್ಲಿ, ಬೆಂಗಳೂರು ನಗರ, ಗ್ರಾಮಾಂತರ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ರಾಜ್ಯದ ಬಹುಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಸಿಎಂ ಸಿದ್ದರಾಮಯ್ಯ ಚಾಲನೆ: ಅ.2ರಂದು ಗುರುವಾರ ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1ರಿಂದ 1.18ರೊಳಗಿನ ಧನುರ್ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ನಂತರ ಸಂಜೆ 4.42ರಿಂದ 5.06ರೊಳ ಗಿನ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ (ಜಂಬೂ ಸವಾರಿ) ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಸೇರಿದಂತೆ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಧನಂಜಯ ಆನೆ ಗಜಪಡೆ