ಮಂಡ್ಯ: ರಾಜ್ಯ ಸರ್ಕಾರದ ಹೆಮ್ಮೆಯ ಐತಿಹಾಸಿಕ ಕಾವೇರಿ ಆರತಿಯನ್ನ (Kaveri Aarati) ನೋಡಿ ಮೆಚ್ಚಿಕೊಂಡ ಕರ್ನಾಟಕದ ಅಮೆರಿಕ ಮೂಲದ ದಂಪತಿಗಳು 5 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ.
.
ಕೆಆರ್‌ಎಸ್ ಬೃಂದಾವನ ಉದ್ಯಾನವನದಲ್ಲಿ ನಡೆದ ಐತಿಹಾಸಿಕ ಕಾವೇರಿ ಆರತಿ ಎಲ್ಲರಿಂದ ಮೆಚ್ಚುಗೆಗೆ ವ್ಯಕ್ತವಾಗಿದೆ. ಆದರೆ ವಿಶೇಷವಾಗಿ ಈ ಆರತಿಯು ಅಮೆರಿಕಾದಲ್ಲಿ ನೆಲೆಸಿರುವ ದಂಪತಿಗಳ ಮನಸ್ಸನ್ನ ಗೆದ್ದಿದ್ದು, ಅಮೆರಿಕದ ಫೀನಿಕ್ಸ್‌ನಲ್ಲಿ ನೆಲೆಸಿರುವ ಜ್ಯೋತಿ ಮತ್ತು ಅವರ ಪತಿ ವಿಕಾಸ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ದಂಪತಿಗಳು ಕರ್ನಾಟಕ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ನಾವು ಬೆಂಗಳೂರಿನಲ್ಲಿ ಬೆಳೆದಿದ್ದೇವೆ. ಕಾವೇರಿ ನೀರು ನಮಗೆ ಆಧಾರವಾಗಿತ್ತು. ನಾವು ಅಲ್ಲಿಯೇ ಎಂಜಿನಿಯರಿಂಗ್ ಅಭ್ಯಾಸ ಮಾಡಿದ್ದು. ನಂತರ ಅಮೆರಿಕದಲ್ಲಿ ನೆಲೆಸಿದ್ದೇವೆ. ಸೆಪ್ಟೆಂಬರ್ 26 ರಿಂದ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳ ಮೂಲಕ ಐತಿಹಾಸಿಕ ಕಾವೇರಿ ಆರತಿಯನ್ನು ನಾವು ನೋಡಿದ್ದು, ಬಹಳ ಅದ್ಭುತವಾದ ಅನುಭವನ್ನ ನೀಡಿದೆ ಎಂದಿದ್ದಾರೆ.
ಕಾವೇರಿ ಆರತಿಗೆ ಜನರ ಮೆಚ್ಚುಗೆ.
ಮಂಡ್ಯದ ಶ್ರೀರಂಗಪಟ್ಟಣದ ಕೆಆರ್‌ಎಸ್ ನಲ್ಲಿ ನಡೆದ ಕಾವೇರಿ ಆರತಿ ಕಣ್ತುಂಬಿಕೊಂಡ ಆಸ್ತಿಕರಿಂದ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅಲ್ಲದೆ
ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ನಿರಂತರವಾಗಿ ಕಾವೇರಿ ಆರತಿ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.