ಚಿಕ್ಕಬಳ್ಳಾಪುರ: ಬನ್ನಿ ಮರ ಪೂಜೆ ವೇಳೆ ನೂಕುನುಗ್ಗಲು (Crowding) ಉಂಟಾಗಿ ಪೊಲೀಸರು ಲಾಠಿ ಬೀಸಿರುವ ಘಟನೆ ವಾಪಸಂದ್ರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ತಹಶೀಲ್ದಾರ್ ರಶ್ಮಿ ಸಮ್ಮುಖದಲ್ಲಿ ನಡೆದ ದಸರಾ ಬನ್ನಿ ಮರದ ಪೂಜೆ ಕಾರ್ಯಕ್ರಮದ ವೇಳೆ ಬನ್ನಿ ಮರದ ಎಲೆಗಳನ್ನು ಕಿತ್ತುಕೊಳ್ಳಲು ಜನ ಏಕಾಏಕಿ ಮುಗಿಬಿದ್ದಿದ್ದಾರೆ.
ಒಬ್ಬರ ಮೇಲೆ ಒಬ್ಬರು ಬಿದ್ದು ಬನ್ನಿ ಎಲೆಗಳನ್ನು ಕೀಳಲು ಮುಂದಾದ ಕಾರಣ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿ, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಾಗಿತ್ತು.
ಪೂಜೆಯಾದ ನಂತರ ಬನ್ನಿ ಮರದ ಎಲೆಗಳು ಪಡೆದರೆ ಒಳಿತಾಗುತ್ತೆ ಅನ್ನೋ ನಂಬಿಕೆಯಾಗಿದೆ. ಆದರೆ ಈ ವೇಳೆ ಪುಂಡಾಟ ಮೆರೆದ ಪುಂಡರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು, ಲಾಠಿ ಏಟಿಗೆ ಪುಂಡರ ಗ್ಯಾಂಗ್ ಓಟಕಿತ್ತಿದೆ.