ದೆಹಲಿ: ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಲಾಗಿರುವ, ಪರಿಸರ ಕಾರ್ಯಕರ್ತ, ಶಿಕ್ಷಣ ಪ್ರೇಮಿ, ಲಡಾಕ್ ಹೋರಾಟಗಾರ ಸೋನಮ್ ವಾಂಗ್ಚುಕ್ (sonam wangchuk) ಬಿಡುಗಡೆ ಕೋರಿ ಅವರ ಪತ್ನಿ ಗೀತಾಂಜಲಿ ಅಂಗ್ಮೊ ಶುಕ್ರವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
I have sought relief from the SUPREME COURT OF INDIA through a HABEAS CORPUS petition against @Wangchuk66’s detention.
— Gitanjali J Angmo (@GitanjaliAngmo) October 3, 2025
It is one week today. Still I have no information about Sonam Wangchuk’s health, the condition he is in nor the grounds of detention. pic.twitter.com/P4EPzO630A
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರವಸೆ ನೀಡಿದ್ದ ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ 6ನೇ ಪರಿಚ್ಛೇದ ಜಾರಿಗೆ ಆಗ್ರಹಿಸಿ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ ಮತ್ತೊಂದೆಡೆ ಕೇಂದ್ರದ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಕೆರಳಿದ ಯುವ ಜನತೆ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಕಚೇರಿಗೆ ಬೆಂಕಿ ಇಟ್ಟರು. ಈ ವೇಳೆ ಪೊಲೀಸರು ನಡೆಸಿದ ಗೊಲಿಬಾರ್‌ನಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನಪ್ಪಿದ್ದರು.
ಲಡಾಖ್ ಜನರ ಹೋರಾಟ, ಪ್ರತಿಭಟನೆಗೆ ಪರಿಹಾರ ಹುಡುಕಬೇಕಾದ ಕೇಂದ್ರ ಸರ್ಕಾರ ಹೋರಾಟಗಾರ ವಾಂಗ್ಚುಕ್ ಅವರಿಗೆ ವಿದೇಶಿ ವ್ಯಕ್ತಿಗಳ ಸಂಪರ್ಕವಿದೆ. ಆ ಕಾರಣದಿಂದಲೇ ಲಡಾಖ್‌ನಲ್ಲಿ ಜೆನ್ ಝಡ್ ಹೋರಾಟಕ್ಕೆ ಸಂಚು ನಡೆದಿದೆ ಎಂಬ ಆರೋಪದ ಮೇರೆಗೆ ವಾಂಗ್ಚುಕ್ ಅವರನ್ನು 2 ದಿನಗಳ ಬಳಿಕ(ಸೆ.26) ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿದೆ.

ಮೋದಿ ಅವರ ಅಭಿಮಾನಿಯಾಗಿದ್ದ ವಾಂಗ್ಚುಕ್ ಅವರು ರಾಜ್ಯಕ್ಕಾಗಿ ಕೇಂದ್ರ ಸರ್ಕಾರ ನೀಡಿದ್ದ ಅಶ್ವಾಸನೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಆರಂಭ ಮಾಡುತ್ತಿದ್ದಂತೆ ಗೋದಿ ಮಾಧ್ಯಮಗಳು ಹಾಗೂ ಐಟಿ ಸೆಂಟರ್ ವಾಂಗ್ಚುಕ್ ಅವರಿಗೆ ದೇಶ ದ್ರೋಹಿ ಪಟ್ಟಕಟ್ಟುತ್ತಿದ್ದಾರೆಂದು ಲಡಾಖ್ ಜನತೆ ಕೆರಳಿದ್ದಾರೆ.
You can jail a person, but not the truth. Release Sonam Wangchuk — the voice of Ladakh will not be silenced. #Ladakh #ReleaseSonamWangchuk pic.twitter.com/z9IrOIstcP
— Manali Diaries (@LoveFromManali) October 3, 2025
ಇದರ ಬೆನ್ನಲ್ಲೇ ತಮ್ಮ ಪತಿ ವಾಂಗ್ಚುಕ್ ಬಂಧನ ಅಸಂವಿಧಾನಿಕ ಎಂದು ಆಕ್ಷೇಪಿಸಿರುವ ಗೀತಾಂಜಲಿ, ವಕೀಲರಾದ ಸರ್ವಂ ರೀಟಂ ಖಾರೆ ಅವರ ಮೂಲಕ ಸಂವಿಧಾನದ 32ನೇ ವಿಧಿಯಡಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ತುರ್ತಾಗಿ ಬಿಡುಗಡೆ ಮಾಡಲು ಆದೇಶಿಸುವಂತೆಯೂ ಕೋರಿದ್ದಾರೆ.