ರಾಮನಗರ: ವಿದ್ಯುತ್ ಸ್ಪರ್ಶದಿಂದ (Electric shock) ಕಾಡಾನೆ (Elephant) ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಚಿಕ್ಕವಿಠಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಜಮೀನೊಂದರಲ್ಲಿ ತೆಂಗಿನಮರದ ಸುಳಿ ಯನ್ನು ಕಿತ್ತು ತಿನ್ನಲು ಯತ್ನಿಸಿದಾಗ ತೆಂಗಿನ ಮರದ ಗರಿ 11ಕೆವಿ ವಿದ್ಯುತ್ ತಂತಿಗೆ ತಗುಲಿದ್ದರಿಂದ ಸ್ಥಳದಲ್ಲೇ ಕಾಡಾನೆ ಸಾವಿಗೀಡಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿ ಗಳು ಭೇಟಿ ನೀಡಿ, ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುಮಾರು 40 ವರ್ಷದ ಹೆಣ್ಣು ಆನೆಯಾಗಿದೆ ಎಂದು ವರದಿಯಾಗಿದೆ.