ದೊಡ್ಡಬಳ್ಳಾಪುರ: ತಾಲೂಕಿನ ಮೆಳೇಕೋಟೆ ಗ್ರಾಮದ ಕುಮಾರಿ ಎಸ್.ವರ್ಷಿಣಿ (Kumari S. Varshini) ಅವರು ಮಾಸ್ಟರ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್ ವಿಭಾಗದ 2023-25 ನೇ ಸಾಲಿನ ಬ್ಯಾಚ್‌ನಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕವನ್ನು (Gold medal) ತನ್ನದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಎಂಎಸ್ ರಾಮಯ್ಯ ತಾಂತ್ರಿಕ ಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ 17 ನೇ ಪದವಿ ಪ್ರಧಾನ ಸಮಾರಂಭದಲ್ಲಿ ಎಸ್.ವರ್ಷಿಣಿ ಅವರಿಗೆ ಪದವಿಯೊಂದಿಗೆ ಚಿನ್ನದ ಪದಕವನ್ನು ಪ್ರಧಾನ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಎಂಎಸ್.ರಾಮಯ್ಯ ಕಾಲೇಜಿನ ಅಧ್ಯಕ್ಷ ಎಂ.ಆರ್.ಸೀತಾರಾಮ್, ಉಪಕುಲಪತಿ ಎಂ.ಆರ್.ಜಾನಕಿರಾಮ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಡಾ.ವಿ.ದಿನೇಶ್ ಕುಮಾರ್, ಪ್ರಾಂಶುಪಾಲರಾದ ಎನ್.ವಿ.ಆರ್.ನಾಯ್ಡು ಮತ್ತಿತರರಿದ್ದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಶ್ರೀಧರ್-ಲಾವಣ್ಯ ದಂಪತಿಗಳ ಪುತ್ರಿಯಾದ ವರ್ಷಿಣಿ, ಯಲಹಂಕದ ಬಿಎಂಎಸ್ಐಯಲ್ಲಿ ಪದವಿ ಪೂರೈಸಿ, ಸರ್ಕಾರಿ ಸೀಟನ್ನು ಪಡೆದು ಎಂಎಸ್ ರಾಮಯ್ಯ ತಾಂತ್ರಿಕ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಸಾಧಿಸಿದ್ದಾರೆ.
ಉತ್ತಮ ವ್ಯಾಸಂಗ ಮಾಡಿ, ಪದವಿಯೊಂದಿಗೆ ಪ್ರಥಮ ಸ್ಥಾನಪಡೆಯುವ ಮೂಲಕ ಚಿನ್ನದ ಪಡೆದು ದೊಡ್ಡಬಳ್ಳಾಪುರ ತಾಲೂಕಿನ ಕೀರ್ತಿ ಬೆಳಗಿದ್ದಾರೆಂದು ಪಾಲನಜೋಗಿಹಳ್ಳಿಯ ಪ್ರಸಿದ್ದ HAJ ಚಿಕನ್ ಸೆಂಟರ್ ಮಾಲೀಕರಾದ ಅಂಬರೀಷ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.