ಬೆಂಗಳೂರು: ನರೇಗಾ ಯೋಜನೆ ನೆರವಿನಿಂದ ಜಲ ಸಂಚಯ ಜನ ಭಾಗಿದಾರಿ ಅಭಿಯಾನದಡಿ ಜಲ ಸಂರಕ್ಷಣೆಯಲ್ಲಿ ತೊಡಗಿರುವ ರಾಜ್ಯದ ಏಳು ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ (Gram Panchayats) ರಾಷ್ಟ್ರೀಯ ಪ್ರಶಸ್ತಿ (National awards) ಲಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಜಲ ಸಂರಕ್ಷಣೆಗಾಗಿ ಗದಗ ಜಿಲ್ಲೆಯಲ್ಲಿ 11,971, ವಿಜಯಪುರ ಜಿಲ್ಲೆಯಲ್ಲಿ 11,453, ಬೀದರ್ ಜಿಲ್ಲೆಯಲ್ಲಿ 10,297, ಕೋಲಾರ ಜಿಲ್ಲೆಯಲ್ಲಿ 8,470, ತುಮಕೂರು ಜಿಲ್ಲೆಯಲ್ಲಿ 9,885, ಮಂಡ್ಯ ಜಿಲ್ಲೆಯಲ್ಲಿ 7,192 ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 7,815 ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.