ದೊಡ್ಡಬಳ್ಳಾಪುರ: ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ನಗರಸಭೆ ಅನುದಾನದಿಂದ ನವೀಕರಿಸಿದ ವರನಟ ಡಾ.ರಾಜ್ ಕುಮಾರ್ (Dr.Raj Kumar) ಅವರ ಕಂಚಿನ ಪ್ರತಿಮೆಯ ಪೀಠದ ಜೀರ್ಣೋದ್ಧಾರದೊಂದಿಗೆ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮ ತಾಲೂಕು ಶಿವರಾಜ್ ಕುಮಾರ್ (Shiva Rajkumar) ಕನ್ನಡ ಸೇನಾ ಸಮಿತಿ ನೇತೃತ್ವದಲ್ಲಿ ಅ.12ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ.
ನಟ ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಪ್ರತಿಮೆ ಅನಾವರಣೊಳಿಸಲಿದ್ದಾರೆ.
ಸ್ಥಳೀಯ ಮುಖಂಡರು ಸೇರಿ ಚಿತ್ರ ರಂಗದ ಗಣ್ಯರು ಭಾಗವಹಿಸಲಿದ್ದಾರೆ.