ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರ ಫೇಸ್‌ಬುಕ್ (Facebook) ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ.
8 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಖಿಲೇಶ್ ಯಾದವ್ ಅವರ ಫೇಸ್‌ಬುಕ್ ಖಾತೆಯನ್ನು ಸಸ್ಪೆಂಡ್ ಮಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ವೈಪಲ್ಯಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಪದೇ ಪದೇ ಪ್ರಶ್ನೆ ಮಾಡಿರುವುದಕ್ಕೆ, ಖಾತೆಯನ್ನು ಸಸ್ಪೆಂಡ್ ಮಾಡುಚ ಮೂಲಕ ಫೇಸ್ಬುಕ್ ಸರ್ಕಾರದ ಪರವಾಗಿ ವರ್ತಿಸುತ್ತಿದೆ ಎಂದು ವಿಪಕ್ಷಗಳ ಆರೋಪಿಸಿವೆ.
ಅಕೌಂಟ್ ಸಸ್ಪೆಂಡ್ ಮಾಡಲು ಕಾರಣವೇನು ಎಂಬ ಕುರಿತು ಮೆಟಾ ಸಂಸ್ಥೆ ಉತ್ತರ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯೆ ನೀಡಿದ್ದು, ಇದಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮೆಟಾ ಸಂಸ್ಥೆ ನಿಯಮ ಉಲ್ಲಂಘನೆ ಕಾರಣ ಸಸ್ಪೆಂಡ್ ಮಾಡಿದೆ ಎಂದಿದ್ದಾರೆ.
ಈ ವಿವಾದದ ಬಳಿಕ ಶನಿವಾರ ಸಂಜೆ, ಅಖಿಲೇಶ್ ಅವರ ಖಾತೆಯನ್ನು ಫೇಸ್‌ಬುಕ್ ಮತ್ತೆ ಸಕ್ರಿಯಗೊಳಿಸಿದೆ.
ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮಹಿಳೆಯ ಅನುಮಾನಸ್ಪದ ಸಾವು ಮತ್ತು ಪತ್ರಕರ್ತನ ಹತ್ಯೆ ಘಟನೆಯ ಪ್ರಶ್ನೆ ಪೋಸ್ಟ್ ಗೆ, ಕಮ್ಯೂನಲ್ ವೈಲೆನ್ಸ್ ಎಂದು ಫೇಸ್‌ಬುಕ್ ಅಕೌಂಟ್ ಸಸ್ಪೆಂಡ್ ಮಾಡಿದೆ.
ಪತ್ರಕರ್ತರ ಹತ್ಯೆ, ಅವರ ಮೇಲೆ ಒತ್ತಡದ ಹೇರುವುದು, ಅವರ ಮೇಲೆ ಎಫ್ ಐಆರ್ ಮಾಡಿಸುವುದು ಸೇರಿದಂತೆ ಎಲ್ಲಾ ತಂತ್ರಗಳನ್ನು ಇಲ್ಲಿ ಬಳಸಲಾಗುತ್ತಿದೆ ಎಂದು ಬರೆದಿದ್ದೆ. ಇದರಲ್ಲಿ ತಪ್ಪೇನಿದೆ. ಫೇಸ್ಬುಕ್ ಖಾತೆ ಸಸ್ಪೆಂಡ್ ಮಾಡಿದಾಕ್ಷಣ ನಮ್ಮ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ. ನಮಗೆ ಅರಿವಾಗಿದೆ ಇಲ್ಲಿ ನಿಜವಾದ ಹೋರಾಟ ಅಗತ್ಯವಿದೆ ಎಂದಿದ್ದಾರೆ.