ಬೆಂಗಳೂರು: ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಅಡಿಯಲ್ಲಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ವಿರುದ್ಧ ಕೆಲ ಖಾಸಗಿ ಚಾನಲ್‌ಗಳು ಎಷ್ಟೇ ಅವಹೇಳನಾಕಾರಿ ವರದಿ ಪ್ರಸಾರ ಮಾಡಿದರು, ಅವರಿಗಿರುವ ಪ್ಯಾನ್ಸ್ ಕ್ರೇಜ್ ಜಾಸ್ತಿ ಆಗ್ತಾ ಇದೆಯೇ ಹೊರತು, ಕಡಿಮೆಯಾಗುತ್ತಿಲ್ಲ.
ಇದಕ್ಕೆ ಉದಾಹರಣೆಗೆ ನಿನ್ನೆ ಬಿಡುಗಡೆಯಾದ ಡೆವಿಲ್ (Devil) ಸಿನಿಮಾದ ಹಾಡು ಸಾಕ್ಷಿಯಾಗಿದೆ ನೋಡಿ.
ಹೌದು ದರ್ಶನ್ (Darshan )ನಟನೆಯ ಡೆವಿಲ್ ಚಿತ್ರದ (Devil) ಎರಡನೇ ಹಾಡು ರಿಲೀಸ್ ಆಗಿದೆ. ಈ ಮೊದಲು ಇದ್ರೆ ನೆಮ್ಮಿಯಾಗ್ ಇರ್ಬೇಕು ಹಾಡು ಬಿಡುಗಡೆ ಬಳಿಕ ಚಿತ್ರತಂಡ ಈಗ ಮತ್ತೊಂದು ಸಾಂಗ್ ಬಿಡುಗಡೆ ಮಾಡಿದೆ.
ಪ್ರಮೋದ್ ಮರವಂತೆ ಈ ಹಾಡು ರಚಿಸಿದ್ದು ಇದೊಂದು ಡ್ಯುಯೆಟ್ ಸಾಂಗ್ ಆಗಿದೆ. ತಮ್ಮ ಮೇಚಿನ ನಟನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ನೊಂದಿರುವ ಅಭಿಮಾನಿಗಳು ಸದ್ಯ ಈ ಹಾಡು ನೋಡಿ ಕೊಂಚ ಸಂತಸ ಪಟ್ಟಿದ್ದಾರೆ.
ಏಕೆಂದರೆ ಈ ಹಾಡಿನಲ್ಲಿ ದರ್ಶನ್ ಲುಕ್ ವಿಭಿನ್ನವಾಗಿದೆ. ಯಂಗ್ ಲುಕ್ ನಲ್ಲಿ ದರ್ಶನ್ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ನಾಯಕಿ ರಚನಾ ರಾಯ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದೆ ಒಂದು ಸಲ ಎಂಬ ಸಾಲುಗಳಿಂದ ಹಾಡು ಶುರುವಾಗುತ್ತದೆ. ಸರಳ ಪದಗಳನ್ನು ಬಳಸಿರುವ ಕಾರಣ ಸಾಹಿತ್ಯ ಉತ್ತಮವಾಗಿದ್ದು, ಅಷ್ಟೇ ಉತ್ತಮವಾಗಿ ದೃಶ್ಯಗಳನ್ನೂ ಸೆರೆ ಹಿಡಿಯಲಾಗಿದೆ.
ಇನ್ನು ಈ ಹಾಡಿಗೆ ಗಾಯಕ ಕಪಿಲ್ ಕಪಿಲನ್ ಮತ್ತು ಚಿನ್ಮಯಿ ಶ್ರೀಪಾದ್ ಜೀವ ತುಂಬಿದ್ದಾರೆ. ಅಜನೀಶ್ ಲೋಕನಾಥ್ ಅದ್ಭುತ ಸಂಗೀತ ನೀಡಿದ್ದಾರೆ. ಈ ಮೊದಲು ಮಾಸ್ ಹಾಡಿನಿಂದ ಸದ್ದು ಮಾಡಿದ್ದ ಡೆವಿಲ್ ಈಗ ಡುಯೆಟ್ ಹಾಡಿನ ಮೂಲಕ ಕ್ಲಾಸ್ ಆಡಿಯನ್ಸ್ ಗೂ ಇಷ್ಟವಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಕೆಲವೇ ಗಂಟೆಗಳಲ್ಲಿ 2.9 ಮಿಲಿಯನ್ ವೀಕ್ಷಣೆ ಪಡೆದಿದೆ. ಅಲ್ಲದೆ ಸಿನಿಮಾ ಬಿಡುಗಡೆ ದಿನಾಂಕಕೂಡ ಘೋಷಣೆಯಾಗಿದ್ದು, ಡಿ.12 ಡೆವಿಲ್ ಸಿನಿಮಾ ತೆರೆಗೆ ಅಪ್ಪಳಿಸಲಿದೆ.