ದೊಡ್ಡಬಳ್ಳಾಪುರ/ಚಿಕ್ಕಬಳ್ಳಾಪುರ; ತಾಲೂಕಿನ ಸುತ್ತಮುತ್ತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಕ್ಕಲಮಡುಗು (Jakkalamadugu) ಜಲಾಶಯಕ್ಕೆ ಭರ್ತಿಯಾಗಿದ್ದು, ಶುಕ್ರವಾರ ರಾತ್ರಿ ತುಂಬಿ ಕೋಡಿ ಹರಿದಿದೆ.
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ನೀರು ಪೂರೈಸುವ ಜಕ್ಕಲಮಡುಗು ಜಲಾಶಯದಲ್ಲಿ ಹಿಂಗಾರು ಮಳೆ ಅಬ್ಬರದಿಂದ ಜಲಾಶಯ ತುಂಬಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡಬಹುದೆ ಎಂಬ ಜನರ ಆತಂಕವನ್ನು ದೂರ ಮಾಡಿದೆ.
ಜಕ್ಕಲಮಡಗು ಜಲಾಶಯದಲ್ಲಿ ಗರಿಷ್ಠ 64 ಅಡಿಗಳವರೆಗೂ ನೀರು ಸಂಗ್ರಹವಾಗುತ್ತೆ. ಆದರೆ ಮಳೆಯ ಕೊರತೆಯಿಂದ ಈ ಹಿಂದೆ ನೀರಿನ ಮಟ್ಟ ಡೆತ್ ಸ್ಟೋರೇಜ್ ಸೇರಿ 22 ಆಡಿಗಳಿಗೆ ಕುಸಿದಿತ್ತು. ಅದೃಷ್ಟವಶಾತ್ ಕೆಲ ದಿನಗಳಿಂದ ಸುರಿದ ಮಳೆಯಿಂದ ಜಲಾಶಯಕ್ಕೆ ನೀರು ಬಂದಿದ್ದು, ಜಲಾಶಯ ತುಂಬಿ ಕೋಡಿ ಹರಿದಿದೆ.
ಇಂದು ಮಳೆ ಬಂದಲ್ಲಿ ತುಂಬಿ ಹರಿಯುವ ಸೊಬಗು ಕಾಣಬಹುದಾಗಿದೆ.
6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಕರ್ನಾಟಕದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುತ್ತಿದೆ. ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುತ್ತಿದೆ. ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.