ಬೆಂಗಳೂರು: ನಗರದ ಉದ್ಯಾನವನಗಳಲ್ಲಿ ನಾಗರೀಕರು ಹಾಗೂ ವಾಯು ವಿಹಾರಿಗಳ ಧ್ವನಿ ಆಲಿಸಲು ವಿನೂತನವಾಗಿ ರೂಪಿಸಿರುವ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ (DCM) ಡಿ.ಕೆ. ಶಿವಕುಮಾರ್ (D.K. Shivakumar) ಅವರು ಭಾನುವಾರ ಬೆಳಗ್ಗೆ ಜೆಪಿ ಪಾರ್ಕ್ ಉದ್ಯಾನದಲ್ಲಿ ಜನಸಾಮಾನ್ಯರ ಜತೆ ಹೆಜ್ಜೆ ಹಾಕಿದರು.
ಅವರ ಅಹವಾಲು ಆಲಿಸಿದರು, ಸಲಹೆಗಳನ್ನು ಪಡೆದರು. ಸಂವಾದ ನಡೆಸಿದರು, ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.
ಈ ವೇಳೆ ಸ್ಥಳೀಯ ಶಾಸಕ ಮುನಿರತ್ನ ಅವರು ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲವೆಂದು ಹೈಡ್ರಾಮ ಸೃಷ್ಡಿಸಿದ ಕಾರಣ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.
ಜನರ ಜೊತೆ ಕುಳಿತ್ತಿದ್ದ ಮುನಿರತ್ನ (Munirathna) ಅವರನ್ನು ಶಾಸಕ ಬನ್ನಿ ಎಂದರು, ಈ ವೇಳೆ ಮುನಿರತ್ನ ಗಮನಿಸದೆ ಇದ್ದಾಗ ಕರಿ ಟೋಪಿ ಶಾಸಕರೇ ಬನ್ನಿ ಮೇಲೆ, ಇದೇನು ಹೊಸದಾಗಿ ಕರಿ ಟೋಪಿ ಎಂದು ಡಿಕೆ ಕಿಚಾಯಿಸಿದರು.
ಮುನಿರತ್ನ ಧನ್ಯವಾದ
ಡಿಕೆ ಶಿವಕುಮಾರ್ ಅವರ ಕರೆಯ ಹಿನ್ನೆಲೆಯಲ್ಲಿ ವೇದಿಕೆಗೆ ಬಂದ ಮುನಿರತ್ನ ಮೈಕ್ ಕೊಡಿ ಕೊಡಿ ಕೇಳಿದ್ದಾರೆ. ಆದರೆ ಇದಕ್ಕೆ ಈಗ ಆಗಲ್ಲ ಆಮೇಲೆ ಕೊಡ್ತೀನಿ ಹೋಗಿ ಕೂತುಕೊಳ್ಳಿ ಎಂದು ಹೇಳಿದರು
ಪಟ್ಟು ಬಿಡದ ಮುನಿರತ್ನ ಡಿಕೆ ಶಿವಕುಮಾರ್ ಕೈಯಿಂದ ಮೈಕ್ ಪಡೆದು ವೇದಿಕೆಗೆ ಆಹ್ವಾನಿಸಿದಕ್ಕೆ ಧನ್ಯವಾದ ಅರ್ಪಿಸಿದರು.
ಮುನಿರತ್ನ ಆಕ್ರೋಶ
ಬಳಿಕ ಅಧಿಕಾರಿಗಳು ಸ್ವಾಗತ ಕೋರುವ ವೇಳೆ ರೊಚ್ಚಿಗೆದ್ದ ಮುನಿರತ್ನ ಅವರು ಶಾಸಕರಿಗೆ, ಸಂಸದರಿಗೆ ಆಹ್ವಾನ ನೀಡಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ ಎಂದು ಜೋರಾಗಿ ಹೇಳಿದರು.
ಈ ವೇಳೆ ಮುನಿರತ್ನ ಹಾಗೂ ಕಾರ್ಯಕರ್ತರ ನಡುವೆ ವೇದಿಕೆ ಮೇಲೆಯೇ ತಳ್ಳಾಟ ನೂಕಾಟ ನಡೆದಿದ್ದು ಮೈಕ್ ಕಿತ್ತು ಕಳಿಹಿಸಿ ಅವನನ್ನು ಎಂದ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕೂಡಲೇ ಮೈಕ್ ಆಫ್ ಮಾಡಿ ಮುನಿರತ್ನ ಕೈಯಿಂದ ಮೈಕ್ ಕಿತ್ತುಕೊಳ್ಳಲು ಪೊಲೀಸರ ಮುಂದಾಗಿದ್ದಾರೆ.
ಆದರೂ ಮೈಕ್ ಅನ್ನು ಕೊಡಲು ಹಿಂದೇಟು ಹಾಕಿದ್ದಾರೆ. ಕೊನೆಯಲ್ಲಿ ಹೇಗೋ ಹರಸಾಹಸ ಪಟ್ಟು ಮೈಕ್ ಅನ್ನು ಕಿತ್ತುಕೊಂಡು ವೇದಿಕೆ ಮೇಲಿಂದಲೇ ಎತ್ತಿಕೊಂಡು ಹೋಗಿ ಪಾರ್ಕ್ ನ ಹೊರಗಡೆ ಬಿಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರೇಪಿಸ್ಟ್ ಮುನಿ ಎಂದು ಕೂಗಿದರು.
ಬಳಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಮುನಿರತ್ನ ಜೆಪಿ ಪಾರ್ಕ್ ಗೇಟ್ ಬಳಿ ಧರಣಿ ಕುಳಿತರು. ಅಲ್ಲದೇ ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ. ಆರ್ ಎಸ್ ಎಸ್ ವೇಷಕ್ಕೆ ಗೌರವ ಕೊಟ್ಟಿಲ್ಲ. ಶಾಸಕನಿಗೆ ಹೇಗೆ ಮರ್ಯಾದೆ ಕೊಡಬೇಕು ಡಿಕೆ ಶಿವಕುಮಾರ್ಗೆ ಗೊತ್ತಿಲ್ವಾ?, ಒಂದು ಹೆಣ್ಣಿಗಾಗಿ ನನ್ನ ಕ್ಷೇತ್ರದಲ್ಲಿ ಹೈಡ್ರಾಮ ಸೃಷ್ಟಿಸುತ್ತಿದ್ದಾರೆ ಎಂದು ಮುನಿರತ್ನ ಆಕ್ರೋಶ ಹೊರಹಾಕಿದ್ದಾರೆ.
ಸೂಕ್ತ ಸಮಯದಲ್ಲಿ ಉತ್ತರ ನೀಡಲು ಜನರಿಗೆ ಕರೆ: ಡಿಸಿಎಂ ಕರೆ
“ಇಲ್ಲಿನ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ” ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮತ್ತಿಕೆರೆಯ ಜೆ.ಪಿ. ಪಾರ್ಕ್ ನಲ್ಲಿ ಶನಿವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಂವಾದ ವೇಳೆ ಶಿವಕುಮಾರ್ ಅವರು ಮಾತನಾಡಿದರು.
ಸಾರ್ವಜನಿಕರ ಜತೆ ತಾವು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಕ್ಕೆ ಮುನಿರತ್ನಂ ನಾಯ್ಡು ಮತ್ತವರ ಬೆಂಬಲಿಗರು ಅಡ್ಡಿಪಡಿಸಿದ ಬಗ್ಗೆ ಡಿಸಿಎಂ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
“ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ” ಎಂದು ಹೇಳಿದರು.
“ಇಂತಹ ಪ್ರತಿನಿಧಿಯನ್ನು (ಮುನಿರತ್ನಂ ನಾಯ್ಡು) ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ” ಎಂದು ತಿಳಿಸಿದರು.
ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ಮಾಜಿ ಕಾರ್ಪೊರೇಟರ್ ನಂಜುಂಡಪ್ಪ, ಅಪರ ಆಯುಕ್ತರಾದ ಲತಾ, ಜಂಟಿ ಆಯುಕ್ತರಾದ ಮೊಮಿನ್, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಸಿಇಒ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು.DCM