ದೇವನಹಳ್ಳಿ: ಸಿಎಸ್‌ಆರ್ ಅನುದಾನದಲ್ಲಿ ಅನೇಕ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿರುವುದು ತಿಳಿದಿರುವ ವಿಷಯ. ಅಂತೇಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ಪ್ರಸಿದ್ಧ ಇನ್ಫೋಸಿಸ್ ( Infosys) ಸಂಸ್ಥೆ ದತ್ತು ಪಡೆದು, ಹಲವು ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಿ ಗ್ರಾಮೀಣ ಭಾಗದ ಮಕ್ಕಳ ಜೀವನ ರೂಪಿಸಲು ಮುಂದಾಗುವ ಮೂಲಕ ಸರ್ಕಾರಿ ಶಾಲೆಗಳಿಗೆ ಶುಕ್ರದೆಸೆ ಆರಂಭವಾದಂತೆ ಆಗಿದೆ.
ಹೌದು ಜಾಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಂಡ್ಲು ಗ್ರಾಮದಲ್ಲಿ ಮೂರ್ತಿ ಟ್ರಸ್ಟ್ (Murthy Trust) ವತಿಯಿಂದ ನಿರ್ಮಿಸಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು ಇನ್ಫೋಸಿಸ್ (Infosys) ಮುಖ್ಯಸ್ಥೆ ಸುಧಾ ಮೂರ್ತಿ (Sudha Murthy) ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಯ್ಯಪ್ಪಾ ಅಧ್ಯಕ್ಷ ಶಾಂತಕುಮಾರ್, ಸದಸ್ಯ ಪ್ರಸನ್ನ ಕುಮಾರ್ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಮಂಜುನಾಥ್, ವೆಂಕಟೇಶ್,ತಾಪಂ ಇಒ ಶ್ರೀನಾಥ್ ಗೌಡ ಡಿಡಿಪಿಐ ಬೈಲಾಂಜನಪ್ಪ, ಪಿಡಿಒ ಪ್ರಕಾಶ್ ಮತ್ತಿತರರಿದ್ದರು.