ಉಡುಪಿ: ಹಿರಿಯ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (Raju talikote) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಮಾಜಿ ಬಿಗ್‌ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ನಟನೆಯ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ರಾಜು ತಾಳಿಕೋಟೆಯವರನ್ನು ಉಡುಪಿಯ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಇನ್ನೂ ಹೆಸರಿಡದ ಶೈನ್ ಶೆಟ್ಟಿಯ ಹೊಸ ಚಿತ್ರದಲ್ಲಿ ನಟಿಸ್ತಿದ್ದ ರಾಜು ತಾಳಿಕೋಟೆ ಅವರು ನಿನ್ನೆ ಸಂಜೆ 6 ಗಂಟೆವರೆಗೂ ಶೂಟಿಂಗ್ ಮುಗಿಸಿ ಬಂದಿದ್ದರು ಎನ್ನಲಾಗಿದೆ.
ರಾತ್ರಿ ಊಟದ ಬಳಿಕ ಮಲಗಿದ್ದವರಿಗೆ ಮಧ್ಯ ರಾತ್ರಿ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಉಡುಪಿಯ ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದು ಸಂಜೆ 5.30 ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕಲಿಯುಗದ ಕುಡುಕ ನಾಟಕ ಖ್ಯಾತಿಯ ರಾಜು ತಾಳಿಕೋಟೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಿಗಿ ಗ್ರಾಮದವರು. ಸುಮಾರು 300 ಕ್ಕೂ ನಾಟಕಗಳು ಹಾಗೂ 20 ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ ಎಂಬ ಹೆಸರಿನ ರಾಜು ತಾಳಿಕೋಟಿಯವರು ವಿಜಯಪುರದ ತಾಳಿಕೋಟೆಯಲ್ಲಿ ವಾಸವಾಗಿದ್ದರು.
ರಾಜು ತಾಳಿಕೋಟೆ ಕೇವಲ ನಟನಲ್ಲ. ತಾಳಿಕೋಟಿಯ ಪ್ರಸಿದ್ಧ ಖಾಸತೇಶ್ವರ ನಾಟಕ ಮಂಡಳಿಯ ಮಾಲೀಕರೂ ಆಗಿದ್ದರು.ರಾಜು ತಾಳಿಕೋಟೆ ಜೀವನದ ಬಹುಪಾಲು ಸಮಯವನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸುವುದರಲ್ಲಿಯೇ ಕಳೆದಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಖ್ಯಾತ ರಂಗಭೂಮಿ ನಟ, ಹಾಸ್ಯ ಕಲಾವಿದ,
ಧಾರವಾಡ ರಂಗಾಯಣದ ನಿರ್ದೇಶಕರಾಗಿರುವ
ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಅತ್ಯಂತ ದುಃಖಕರ ವಿಷಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಖ್ಯಾತ ರಂಗಭೂಮಿ ನಟ, ಹಾಸ್ಯ ಕಲಾವಿದ,
— DK Shivakumar (@DKShivakumar) October 13, 2025
ಧಾರವಾಡ ರಂಗಾಯಣದ ನಿರ್ದೇಶಕರಾಗಿರುವ
ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಅತ್ಯಂತ ದುಃಖಕರ ವಿಷಯವಾಗಿದೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ರಾಜು ತಾಳಿಕೋಟಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಷ್ಟವಾಗಿದೆ.
ದೇವರು ರಾಜು ತಾಳಿಕೋಟಿ ಅವರ… pic.twitter.com/md7xAfFB9C
ಈ ಕುರಿತು ಸಮಾಜಿಕ ಜಾಲತಾಣ ಸಂತಾಪ ಸಂದೇಶ ಬರೆದಿರುವ ಅವರು, ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ರಾಜು ತಾಳಿಕೋಟಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಷ್ಟವಾಗಿದೆ.
ದೇವರು ರಾಜು ತಾಳಿಕೋಟಿ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ
ಹಿರಿಯ ರಂಗ ಕಲಾವಿದ ಮತ್ತು ಪ್ರಸಿದ್ಧ ಚಲನಚಿತ್ರ ನಟರು, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಶ್ರೀ ರಾಜು ತಾಳಿಕೋಟೆ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸಂದೇಶ ಬರೆದಿರುವ ಅವರು, ಉತ್ತರ ಕರ್ನಾಟಕ ಸೊಗಡಿನ ಹಾಸ್ಯದಿಂದ ಜನಪ್ರಿಯರಾಗಿದ್ದ ರಾಜು ಅವರ ಅಕಾಲಿಕ ನಿಧನ ಕಲಾಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.
ಹಿರಿಯ ರಂಗ ಕಲಾವಿದ ಮತ್ತು ಪ್ರಸಿದ್ಧ ಚಲನಚಿತ್ರ ನಟರು, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಶ್ರೀ ರಾಜು ತಾಳಿಕೋಟೆ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 13, 2025
ಉತ್ತರ ಕರ್ನಾಟಕ ಸೊಗಡಿನ ಹಾಸ್ಯದಿಂದ ಜನಪ್ರಿಯರಾಗಿದ್ದ ರಾಜು ಅವರ ಅಕಾಲಿಕ ನಿಧನ ಕಲಾಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖ… pic.twitter.com/xJTB9StKdj
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸಚಿವ ಸಂತೋಷ್ ಲಾಡ್ ಸಂತಾಪ
ಹೆಸರಾಂತ ರಂಗಭೂಮಿ ಕಲಾವಿದ, ಖ್ಯಾತ ಸಿನಿಮಾ ಹಾಸ್ಯ ನಟ ರಾಜು ತಾಳಿಕೋಟಿ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹೆಸರಾಂತ ರಂಗಭೂಮಿ ಕಲಾವಿದ, ಖ್ಯಾತ ಸಿನಿಮಾ ಹಾಸ್ಯ ನಟ ಹಾಗೂ ಧಾರವಾಡದ ರಂಗಾಯಣದ ನಿರ್ದೇಶಕರಾಗಿದ್ದ ಶ್ರೀ ರಾಜು ತಾಳಿಕೋಟಿ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
— Santosh Lad Official (@SantoshSLadINC) October 13, 2025
ಉತ್ತರ ಕರ್ನಾಟಕದ ಜವಾರಿ ಭಾಷೆಯ ಗತ್ತಿನಲ್ಲಿಯೇ ಸಾಕಷ್ಟು ಕಂಪನಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಅವರ ಅಗಲಿಕೆ ವೃತ್ತಿ ರಂಗಭೂಮಿಗೆ ಯಾವತ್ತಿಗೂ… pic.twitter.com/CLxUCxG8ot
ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸಂದೇಶ ಬರೆದಿರುವ ಅವರು, ಉತ್ತರ ಕರ್ನಾಟಕದ ಜವಾರಿ ಭಾಷೆಯ ಗತ್ತಿನಲ್ಲಿಯೇ ಸಾಕಷ್ಟು ಕಂಪನಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಅವರ ಅಗಲಿಕೆ ವೃತ್ತಿ ರಂಗಭೂಮಿಗೆ ಯಾವತ್ತಿಗೂ ತುಂಬಲಾರದ ನಷ್ಟ.
ಅವರ ಆತ್ಮಕ್ಕೆ ಶಾಂತಿ ಕೋರುತ್ತ, ದೇವರು ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ತಡೆಯುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.