ಪಾಟ್ನಾ; ಜಿದ್ದಾಜಿದ್ದಿ ಕಣವಾಗಿ ತೀವ್ರ ಕುತೂಹಲ ಕೆರಳಿಸುವ ಬಿಹಾರ ವಿಧಾನಸಭೆ ಚುನಾವಣೆಗೆ (Bihar Elections) ಬಿಜೆಪಿ (Bjp) ತನ್ನ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಡಿಸಿಎಂ ಸಾಮ್ರಾಟ್ ಚೌಧರಿ ಅವರಿಗೆ ತಾರಾಪುರ ಟಿಕೆಟ್ ನೀಡಲಾಗಿದೆ.
ಬಿಹಾರದಲ್ಲಿ ಬಿಜೆಪಿಯ ಇಬ್ಬರು ಡಿಸಿಎಂಗಳಿದ್ರು. ಅವರಲ್ಲಿ ಒಬ್ಬರಾದ ಸಾಮ್ರಾಟ್ ಚೌಧರಿಗೆ ತಾರಾಪುರ ಟಿಕೆಟ್ ನೀಡಲಾಗಿದೆ. ಮತ್ತೊಬ್ಬ ಡಿಸಿಎಂ ವಿಜಯ್ ಕುಮಾರ್ ಸಿನ್ಹಾಗೆ ಲಖಿಸರಾಯ್ ಟಿಕೆಟ್ ದೊರೆತಿದೆ..
भारतीय जनता पार्टी की केंद्रीय चुनाव समिति ने बिहार में होने वाले विधानसभा चुनाव 2025 के लिए निम्नलिखित नामों पर अपनी स्वीकृति प्रदान की है। (1/2) pic.twitter.com/ykVM5tVevY
— BJP (@BJP4India) October 14, 2025
ಉಳಿದಂತೆ ಸಚಿವ ನಿತೀನ್ ನಬೀನ್ ಗೆ ಬಕೀಂಪುರ ಟಿಕೆಟ್, ಬೆಟ್ಟಿಯಾದಿಂದ ರಾಣಿದೇವಿ, ರಾಮ್ ಕೃಪಾಲ್ ಯಾದವ್ ಧನ್ ಪುರದಿಂದ, ಪ್ರೇಮ್ ಕುಮಾರ್ ಗಯಾದಿಂದ ಮಾಜಿ ಡಿಸಿಎಂ ತಾರ್ಕಿಶೋರ್ ಪ್ರಸಾದ್, ಕಟಿಹಾರದಿಂದ, ಅಲೋಕ್, ರಂಜನ್ ಝಾ ಸಹರ್ಸಾದಿಂದ, ಮಂಗಲ್ ಪಾಂಡೆ ಸಿವಾನ್ ನಿಂದ ಸ್ಪರ್ಧೆ ಮಾಡಲಿದ್ದಾರೆ. ಅಲ್ಲದೆ ನಿತೀಶ್ ಮಿಶ್ರಾ ಮತ್ತೆ ಜಂಜರ್ ಪುರದಿಂದ ಅಖಾಡಕ್ಕಿಳಿದ್ರೆ, ಶ್ರೇಯಾಸಿ ಸಿಂಗ್ ಜಮುಯಿನಿಂದ ಸ್ಪರ್ಧೆ ಮಾಡಲಿದ್ದಾರೆ.
NDA ಸೀಟ್ ಹಂಚಿಕೆ
ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (LJP ) 29 ಸೀಟುಗಳನ್ನು ಪಡೆದುಕೊಂಡಿದೆ.
ಉಳಿದಂತೆ ರಾಷ್ಟ್ರೀಯ ಲೋಕ ಸಮತಾ ಪಕ್ಷ ( RLM) ಹಿಂದೂಸ್ತಾನಿ ಅವಾಮ್ ಮೋರ್ಚ್ (HAM) ತಲಾ 6 ಸ್ಥಾನಗಳಲ್ಲಿ ಕಣಕ್ಕಿಳಿಯಲಿವೆ.
ಲಾಲೂ ಕುಟುಂಬಕ್ಕೆ ಸಂಕಷ್ಟ
ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಲಾಲೂ ಕುಟುಂಬಕ್ಕೆ ಮತ್ತೆ ಕಂಟಕ ಎದುರಾಗಿದೆ.
ಈ ಚುನಾವಣೆಯಲ್ಲಿ ಇಂಡಿಯಾ ಕೂಟ ಎನ್‌ಡಿಎಗೆ ತೀವ್ರ ಸ್ಪರ್ಧೆ ನೀಡಲಿದೆ ಎಂಬ ಮಾತುಗಳ ನಡುವೆಯೇ ಐಆರ್‌ಸಿಟಿಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಮತ್ತು ಕುಟುಂಬದವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಲಾಲೂ ಪತ್ನಿ ಮತ್ತು ಮಾಜಿ ಸಿಎಂ ರಾಬಿ ದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ವಿರುದ್ದ ಆರೋಪ ಪಟ್ಟಿ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.