ನವದೆಹಲಿ: ದೂರದರ್ಶನದ ಪ್ರಸಿದ್ದ ಮಹಾಭಾರತ ಧಾರಾವಾಹಿಯ ಕರ್ಣ ಪಾತ್ರಧಾರಿ ಪಂಕಜ್ ಧೀರ್ (Pankaj Dheer) ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಪತ್ನಿ ಸೀಮಾ ಮತ್ತು ಮಗ ನಿಕಿತಿನ್ ಧೀರ್ ಅವರನ್ನು ಅಗಲಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು. ಚಿಕಿತ್ಸೆ ಫಲಕಾರಿಯಾಗದೇ ಪಂಕಜ್ ಕೊನೆಯುಸಿರೆಳೆದಿದ್ದಾರೆ.
1956 ರಲ್ಲಿ ದೆಹಲಿಯಲ್ಲಿ ಜನಿಸಿದ ಅವರು 1980 ರ ದಶಕದ ಉತ್ತರಾರ್ಧದಲ್ಲಿ ದೂರದರ್ಶನ ಮಹಾಭಾರತ ಸರಣಿ ಮೂಲಕ ಖ್ಯಾತಿಯನ್ನು ಗಳಿಸಿದರು, ಅದು ಸಾಂಸ್ಕೃತಿಕ ಮೈಲಿಗಲ್ಲಾಯಿತು, ಮತ್ತು ನಂತರ ಚಂದ್ರಕಾಂತ ಮತ್ತು ಬಾದ್‌ಶಾ ಮತ್ತು ತೇವರ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದ ನಂಟು
ಡಾ. ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ನಟನೆಯ ‘ವಿಷ್ಣು ವಿಜಯ್’ ಸಿನಿಮಾದಲ್ಲಿ ಪಂಕಜ್ ಧೀರ್ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 2005ರಲ್ಲಿ ತೆರೆಕಂಡಿದ್ದ ‘ವಿಷ್ಣು ಸೇನಾ’ ಸಿನಿಮಾದಲ್ಲೂ ಕೂಡ ಪೊಲೀಸ್ ಅಧಿಕಾರಿ ಪಾತ್ರವನ್ನು ಪಂಕಜ್ ಧೀರ್ ನಿಭಾಯಿಸಿದ್ದರು.
ಸುಮಾರು 4-5 ದಶಕಗಳ ಕಾಲ ಬಣ್ಣದ ಲೋಕದಲ್ಲಿ ಸಕ್ರಿರಾಗಿದ್ದ ಪಂಕಜ್ ಧೀರ್ ಇನ್ನುಮುಂದೆ ನೆನಪು ಮಾತ್ರ.