ಬೆಂಗಳೂರು ಗ್ರಾಮಾಂತರ ಜಿಲ್ಲೆ: ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಫಾಕ್ಸ್ ಕಾನ್ (Foxconn) ಕಂಪನಿಯ ಸುತ್ತ ಪ್ಲಾಸ್ಟಿಕ್ ರಾಶಿ ಸಂಗ್ರಹವಾಗಿದ್ದು, ವೈಜ್ಞಾನಿಕವಾಗಿ ವಿಲೇವಾರಿ ನಡೆಸುತ್ತಿಲ್ಲವೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಬಣದಿಂದ ಜಿಲ್ಲಾಧಿಕಾರಿ ಎ.ಬಿ ಬಸವರಾಜ್ (A.B. Basavaraju) ಅವರಿಗೆ ದೂರು ನೀಡಲಾಯಿತು.

ಬಳಿಕ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಫಾಕ್ಸ್ ಕಾನ್ ಕಂಪನಿಯ ಸುತ್ತಲೂ ಪ್ಲಾಸ್ಟಿಕ್ ರಾಶಿ ಸಂಗ್ರಹವಾಗಿದ್ದು ವೈಜ್ಞಾನಿಕ ವಿಲೇವಾರಿ ನಡೆಸುತ್ತಿಲ್ಲ.
ಪ್ಲಾಸ್ಟಿಕ್ ಕಸದ ರಾಶಿಗೆ ಎಲ್ಲೆಂದರಲ್ಲಿ ಬೆಂಕಿ ಹಚ್ಚಿ, ಸುಟ್ಟು ಪರಿಸರ ಮಾಲಿನ್ಯ ಮಾಡಿತ್ತಿದ್ದಾರೆ. ಈ ಕುರಿತಂತೆ ಕಡಿವಾಣ ಹಾಕಿ, ಸೂಕ್ತ ಕ್ರಮಕೈಗೊಳ್ಳುವಂಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
ಕ್ರಮಕ್ಕೆ ಸೂಚನೆ
ಮನವಿ ಸ್ಪಂದಿಸಿರುವ ಜಿಲ್ಲಾಧಿಕಾರಿ ಎ.ಬಿ ಬಸವರಾಜ್ ಅವರು, ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸೂಕ್ತ ಕ್ರಮ ಕೈ ಗೊಳ್ಳುವಂತೆ ಸೂಚನೆ ನೀಡಿದರು.
ನಾಳೆ ಪರಿಸರ ಮಾಲಿನ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಭರವಸೆಯನ್ನು ನೀಡಿದ್ದಾರೆ. ಸಾರ್ವಜನಿಕರು ಕಸದ ಅಥವಾ ಪರಿಸರ ಮಾಲಿನ್ಯದ ಬಗ್ಗೆ ಮಾಹಿತಿ ನೀಡುವಂತೆ ರಾಜಘಟ್ಟ ರವಿ ಕೋರಿದ್ದಾರೆ.
ಈ ವೇಳೆ ಮುಖಂಡರಾದ ಶ್ರೀ ನಗರ ಮನು, ಹಮಾಮ್ ಚಂದ್ರು, ಮೋಹನ್, ಮಂಜುನಾಥ್, ಹಮೀದ್, ರಮೇಶ್ ಮತ್ತಿತರರಿದ್ದರು.