ದೊಡ್ಡಬಳ್ಳಾಪುರ: ಪೆಟ್ರೋಲ್ ಬಂಕ್‌ನಲ್ಲಿ (Petrol station) ಪೆಟ್ರೋಲ್ (Petrol) ತುಂಬಿಸಿಕೊಂಡು, ಕಾರು ಸ್ಟಾರ್ಟ್ ಮಾಡಿದ ವೇಳೆ ಏಕಾಏಕಿ ಬೆಂಕಿ (fire) ತಗುಲಿದ ಪರಿಣಾಮ ಕಾರಿಗೆ ಹಾನಿಯಾಗಿರುವ ಘಟನೆ ನಗರದ ಗಾಂಧಿ ವೃತ್ತದ ಸಮೀಪ ಸಂಭವಿಸಿದೆ.

ವೈದ್ಯರೊಬ್ಬರಿಗೆ ಸೇರಿದ ಎಸ್ಟೀಮ್ ಕಾರು ಇದು ಎನ್ನಲಾಗುತ್ತಿದ್ದು, ವಾಟರ್ ವಾಶ್ ಬಳಿಕ ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ತೆರಳಲು ಸ್ಟಾರ್ಟ್ ಮಾಡಿದಾಗ, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ.
ಕೂಡಲೇ ಬಂಕ್ ಸಿಬ್ಬಂದಿಗಳು ದೌಡಾಯಿಸಿ ಬೆಂಕಿಯನ್ನು ನಂದಿಸಿ, ಮುಂದೆ ಸಂಭವಿಸಬಹುದಾಗಿದ್ದ ದೊಡ್ಡಮಟ್ಟದ ಪ್ರಮಾದವನ್ನು ತಡೆದಿದ್ದಾರೆ.
ಈ ವೇಳೆ ಕಾರಿಗೆ ಹಾನಿಯಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.