ಬೆಂಗಳೂರು: ಹಾಸನಾಂಬೆ (Hasanamba) ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹ ಸ್ರಾರು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ.

ಹಾಸನಾಂಬ ಶನಿವಾರದ ಅಪ್ಡೇಟ್
ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆ ವರೆಗೆ 3.70 ಲಕ್ಷ ಜನ ಭಕ್ತಾದಿಗಳು ಹಾಸನಾಂಬೆ ತಾಯಿಯ ದರ್ಶನ ಪಡೆದಿದ್ದಾರೆ. ದರ್ಶನಕ್ಕಾಗಿ ಜನ ಸರಾಸರಿ 7 ರಿಂದ 9 ಗಂಟೆಗಳ ಕಾಲ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ಎದುರಾಗಿತ್ತು.
ಅಲ್ಲದೆ, ಶನಿವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ಹಾಗೂ ರಾತ್ರಿ 12 ರಿಂದ ಭಾನುವಾರ ಬೆಳಗ್ಗೆ 06 ರ ವರೆಗೆ ದೇವರ ದರ್ಶನ ಇರುವುದಿಲ್ಲ. ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ಬೆಳಗ್ಗೆ 6 ರ ವರೆಗೆ ಶಾಸ್ತ್ರದ ಪ್ರಕಾರ ವಿಶೇಷ ಪೂಜೆ ಇರುವ ಕಾರಣ ದರ್ಶನ ಇರುವುದಿಲ್ಲ.
ಹೀಗಾಗಿ ದರ್ಶನದ ಅವಧಿ ಮತ್ತಷ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಮಳೆಯ ಸೂಚನೆಯೂ ಇದ್ದೂ ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತರೂ ಇಂತಹ ಸಂದರ್ಭಕ್ಕೆ ಪೂರ್ವ ತಯಾರಾಗಿ ಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಾ ಬೈರೇಗೌಡ ಮನವಿ ಮಾಡಿದ್ದಾರೆ.
ಬಸ್ ಸಂಚಾರ ಸ್ಥಗಿತ
ಉಳಿದಂತೆ ವಾರಾಂತ್ಯ ಹಾಗೂ ದೀಪಾವಳಿ ರಜೆ ಕಾರಣದಿಂದ ಭಕ್ತರ ಸಂಖ್ಯೆ ಮಿತಿ ಮೀರಿದೆ. ಹೀಗಾಗಿ ಬೆಂಗಳೂರು- ಹಾಸನ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಜನಸಂಖ್ಯೆ ನಿಯಂತ್ರಿಸಲು ಟಿಕೆಟ್ ಬುಕಿಂಗ್ ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಾಸನಾಂಬೆ ದೇಗುಲ ಹಾಗೂ ಸುತ್ತ ಮುತ್ತ ಬಾರೀ ಜನಸ್ತೋಮ ನೆರೆದಿದೆ. ಭಕ್ತರನ್ನು ನಿಯಂತ್ರ ಸಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ ಗೊಳಿಸಲಾಗಿದೆ.