ದೊಡ್ಡಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಕಾರ್ಯ ಚಟುವಟಿಕೆಗಳಿಗೆ ನಿರ್ಬಂಧದ ಆದೇಶ ಬೆನ್ನಲ್ಲೇ ಇಂದು ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿಯಲ್ಲಿ ವಿಜದಶಮಿ ಪಥಸಂಚಲನವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಬಾಶೆಟ್ಟಿಹಳ್ಳಿಯ ಬಸವಣ್ಣ ದೇವಾಲಯದಿಂದ ವಿಜಯದಶಮಿ ಪಥಸಂಚಲನ ಕೆಂಪೇಗೌಡ ನಗರ, ಹಿಂದೂಪುರ- ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿ ಮೂಲಕ ಸಾಗಿ ಬ್ಯಾಂಕ್ ಸರ್ಕಲ್, ಬಾಶೆಟ್ಟಿಹಳ್ಳಿಯ ಪ್ರಮುಖ ಮೂಲಕ ಮತ್ತೆ ಬಸವಣ್ಣ ದೇವಲಾಯದಲ್ಲಿ ಸೇರಿತು.
ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್ ಮುನಿರಾಜು, ಅಂತರರಾಷ್ಟ್ರೀಯ ಛಾಯಾಗ್ರಾಹಕ ಜಿ.ರಾಜು ಸೇರಿದಂತೆ 488 ಮಂದಿ ಗಣವೇಷಧಾರಿಗಳಾಗಿ ಭಾಗವಹಿಸಿ ಗಮನ
ವಿಭಾಗ ಶಾರೀರಿಕ್ ಪ್ರಮುಖ್ ಮಲ್ಲಿಕಾರ್ಜುನ ಗಣಿ, ಜಿಲ್ಲಾ ಸಹಕಾರ್ಯವಾಹ ಪ್ರದೀಪ, ಜಿಲ್ಲಾ ಶಾರೀರಿಕ್ ಪ್ರಮುಖ್ ಕೀರ್ತಿ, ಜಿಲ್ಲಾ ವ್ಯವಸ್ಥ ಪ್ರಮುಖ್, ಕೆ.ಸಿ. ವೆಂಕಟೇಶ್, ತಾಲ್ಲೂಕು ಕಾರ್ಯವಾಹ ಪ್ರಜ್ವಲ್ ಪಥಸಂಚಲನದ ನೇತೃತ್ವದ ವಹಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೂಬಸ್ತ್ ಕೈಗೊಂಡಿದ್ದರು.
ವಿಶೇಷ
ದೊಡ್ಡಬಳ್ಳಾಪುರ ಗ್ರಾಮಾಂತರ ತಾಲ್ಲೂಕಿನಲ್ಲಿ ಪಥ ಸಂಚಲನ 20 ವರ್ಷಗಳ ಹಿಂದೆ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿದ್ದು, ಇಂದು ಸಂಘ 100 ವರ್ಷದ ಶತಾಬ್ದಿ ಅಂಗವಾಗಿ ಬಾಶೆಟ್ಟಿಹಳ್ಳಿಯಲ್ಲಿ ಪಥಸಂಚಲನ ನಡೆಯಿತು.