ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬ (Deepavali Festival) ಅಂತ ಅಂದ್ರೆ ಒಂದೆಡೆ ದೀಪಗಳನ್ನು ಹಚ್ಚಿ ಖುಷಿ ಪಡುವ ಸಂಸ್ಕೃತಿ. ಇನ್ನೊಂದೆಡೆ ಪಟಾಕಿ ಹೊಡೆಯುವ ಖುಷಿ. ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ದೊಡ್ಡಬಳ್ಳಾಪುರ (Doddaballapura) ನಗರ ಸೇರಿದಂತೆ ತಾಲೂಕಿನಲ್ಲಿ ಹಬ್ಬದ ಸಿದ್ಧತೆ ಜೋರಾಗಿಯೇ ಇದೆ.

ಇನ್ನೂ ಈ ಕುರಿತಂತೆ ದೊಡ್ಡಬಳ್ಳಾಪುರದ ತಾಲೂಕು ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ ನೀಡಲಾಗಿದೆ.
ಸಾರ್ವಜನಿಕರು, ಮಕ್ಕಳು ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚುವುದು, ದೀಪ ಬೆಳಗುವ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರಲು ಕೋರಲಾಗಿದೆ.
ಪಟಾಕಿ ಹಚ್ಚುವ ವೇಳೆ ಆಕಸ್ಮಿಕವಾಗಿ ಅವಘಡಗಳು ಸಂಭವಿಸಿದರೆ ಸೂಕ್ತ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ ಇಲ್ಲಿ ವೈದ್ಯರು, ಸಿಬ್ಬಂದಿಗಳ ತಂಡ ಸಿದ್ದವಿರುತ್ತಾರೆ ಎಂದು ತಿಳಿಸಲಾಗಿದೆ.
ಅಲ್ಲದೆ ತುರ್ತುಪರಿಸ್ಥಿತಿಯಲ್ಲಿ ಸೇವಾಲಬ್ಯತೆಯ ಬಗ್ಗೆ ಮಾರ್ಗದರ್ಶನ ಪಡೆಯಲು 7619126501 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.