ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಚನ್ನದೇವಿ ಅಗ್ರಹಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (VSSN) ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಚುನಾವಣೆ ಅಧಿಕಾರಿ ನಾಗವೇಣಿ ಕೆ.ಎಸ್.ನೇತೃತ್ವದಲ್ಲಿ ಇಂದು ನಡೆದ 10 ಮಂದಿ ನಿರ್ದೇಶಕರ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ 10 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲರು ಆಯ್ಕೆಯಾಗಿದ್ದಾರೆ.
ಜಿದ್ದಾಜಿದ್ದಿ ಹೋರಾಟ
ಮುಂಬರುವ ದೊಡ್ಡಬಳ್ಳಾಪುರ ಟಿಎಪಿಎಂಸಿಎಸ್ ಚುನಾವಣೆಯ ದಿಕ್ಸುಚಿ ಎಂದೆ ಬಿಂಬಿತವಾಗಿದ್ದ ಚನ್ನದೇವಿ ಅಗ್ರಹಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (VSSN) ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಿದ್ದವು.
ಜಿದ್ದಾಜಿದ್ದಾಯಿಂದ ಚುನಾವಣೆ ನಡೆದಿದ್ದು, ಫಲಿತಾಂಶದಲ್ಲಿ ಮಾತ್ರ ಅವಿರೋಧ ಆಯ್ಕೆ 1 ಸೇರಿ ಎಲ್ಲಾ 11 ಸ್ಥಾನ ಕಾಂಗ್ರೆಸ್ ಪರವಾಗಿ ಬಂದಿರುವ ಕಾರಣ, ಕಮಲ-ದಳ ಮೈತ್ರಿಗೆ ದೊಡ್ಡಮಟ್ಟದಲ್ಲಿ ಮುಖಭಂಗವಾದಂತಾಗಿದೆ.
ವಿಜೇತ ನಿರ್ದೇಶಕರು
ಜಿ.ಕೆಂಪೇಗೌಡ, ಸಿ.ಎಸ್.ಪುರುಷೋತ್ತಮ ಗೌಡ, ಎಂ.ಸಿ.ಚಂದ್ರಶೇಖರ್, ರಮೇಶ್, ಬಿ.ಎಚ್.ಮುನಿರಾಜ್ಯ, ರಫೀಕ್ ಅಹಮ್ಮದ್, ಎಂ.ಆರ್.ರಂಗೇಗೌಡ, ನೀಲವೇಣಿ, ಸುಧಾ, ಎಂ.ನಾರಾಯಣಪ್ಪ ಹಾಗೂ ಎಂ.ಜಯರಾಮ (ಅವಿರೋಧ ಆಯ್ಕೆ).
ಶುಭಕೋರಿದ ಮುಖಂಡರು
ನೂತನ ನಿರ್ದೇಶಕರನ್ನು ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ಮಂಜುನಾಥ್, ಜಿಪಂ ಮಾಜಿ ಸದಸ್ಯ ಆರ್.ದಯಾನಂದ ಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಗ್ಯ ಸಲಹೆಗಾರ ಡಾ.ನರಸಿಂಹ ಜ್ಞಾನಿ, ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್, ಕರ್ನಾಟಕ ರಾಜ್ಯ ಹೊರ ವರ್ತುಲ ರಸ್ತೆ ಪ್ರಾಧಿಕಾರದ ನಿರ್ದೇಶಕ ಆರ್.ದೀಪು, ಕರ್ನಾಟಕ ರಾಜ್ಯ ಆಹಾರ ನಿಗಮದ ಜಾಗೃತಿ ಸಮಿತಿ ಸದಸ್ಯೆ ಪುಷ್ಪಲತಾ ಸೋಮಶೇಖರ್, ಯೂತ್ ಕಾಂಗ್ರೆಸ್ ದೊಡ್ಡಬಳ್ಳಾಪುರ ತಾಲೂಕಿನ ಅಧ್ಯಕ್ಷ ಪುನೀತ್ ಗೌಡ ಮಲ್ಲೋಹಳ್ಳಿ ಮತ್ತಿತರರಿ ಅಭಿನಂದನೆ ಸಲ್ಲಿಸಿದ್ದಾರೆ.